Breaking News

ನಾನು ರಾಮನಗರಕ್ಕೆ ಫಿಕ್ಸ್: ನಿಖಿಲ್ ಕುಮಾರಸ್ವಾಮಿ‌ ಸ್ಪಷ್ಟನೆ

ರಾಮನಗರ: ಮತ್ತೆ ರಾಜಕಾರಣದಲ್ಲಿ ಸಕ್ರಿಯರಾಗಿರುವ ನಿಖಿಲ್ ಕುಮಾರ್ ಸ್ವಾಮಿ ಅವರು ತಾವು ರಾಮನಗಕ್ಕೆ ಫಿಕ್ಸ್ ಆಗಿದ್ದೇನೆ ಯಾವುದೇ ಅನುಮಾನ ಬೇಡ ಎಂದು ಸ್ಪಷ್ಟ ಪಡಿಸಿದ್ದಾರೆ‌.

ನಾನು ಪಲಾಯನವಾದಿ ರಾಜಕಾರಣ‌ ಮಾಡಲ್ಲ, ನಮ್ಮ ಕಾರ್ಯಕರ್ತರ ಆದೇಶವೇ ಅಂತಿಮ ಎಂದು ಹೇಳುವ ಮೂಲಕ ಮುಂದಿನ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದಿಂದ ಸ್ಪರ್ಧಿಸುವ ಸುಳಿವನ್ನು ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೀಡಿದ್ದಾರೆ.

Advertisement

ಇದನ್ನೂ ಓದಿ: T20 Worldcup: ಸೋಲಿನೊಂದಿಗೆ ವಿಶ್ವಕಪ್‌ ಇಂದ ಹೊರ ಬಿದ್ದ ಅತಿಥೇಯ ಶ್ರೀಲಂಕಾ

ರಾಮನಗರದಲ್ಲಿ ಖಾಸಗಿ ಕಾರ್ಯಕ್ರಮದ ನಿಮಿತ್ತ ಆಗಮಿಸಿದ್ದ ಸಂದರ್ಭ, ಸಚಿವರ ಬದಲಾವಣೆ ಬಗ್ಗೆ 31 ಶಾಸಕರ ಪತ್ರ ವಿಚಾರವಾಗಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು. ಕೇವಲ ಸಚಿವರ ಬದಲಾವಣೆ ಅಲ್ಲ. ಇಡೀ ಸರಕಾರ ಬದಲಾವಣೆ ಮಾಡುವ ದಿನ ದೂರವಿಲ್ಲ.

7 ಕೋಟಿ ಕನ್ನಡಿಗರು ಅದನ್ನು ಮಾತನಾಡುತ್ತಿದ್ದಾರೆ ಎಂದರು. ರಾಜ್ಯಾದ್ಯಂತ ನಾನು ಪ್ರವಾಸ ಮಾಡಿದ್ದೇನೆ. ರಾಜ್ಯದಲ್ಲಿ ಟ್ರೆಂಡ್‌ ಬದಲಾವಣೆ ಆಗಿದೆ. ಈಗ ಚುನಾವಣೆ ನಡೆದರೂ ಕಾಂಗ್ರೆಸ್‌ ಸರಕಾರವನ್ನು ಜನರು ತಿರಸ್ಕಾರ ಮಾಡ್ತಾರೆ.

ಸ್ಥಳೀಯ ಚುನಾವಣೆಗಳಲ್ಲಿ ಕಾಂಗ್ರೆಸ್‌ ಬೀದಿಗೆ ಬರುತ್ತೆ. ಯಾವ ಸಚಿವರ ಚೇಂಜ್‌ ಮಾಡಿದರೂ ಆಡಳಿತದಲ್ಲಿ ಯಾವುದೇ ಬದಲಾವಣೆ ಆಗಲ್ಲ. ಇವರ ಮನಸ್ಥಿತಿ ಲೂಟಿ ಮಾಡುವುದೇ ಆಗಿದೆ ಎಂದರು.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್:‌ 7353833811, ಇ-ಮೇಲ್-‌ g1newsdpt@gmail.com

News Source : G1 News

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು