ನವದೆಹಲಿ: ಭಾರತದ ಮಾಜಿ ಎಡಗೈ ಓಪನಿಂಗ್ ಬ್ಯಾಟರ್, ಗಬ್ಬರ್ ಖ್ಯಾತಿಯ ಶಿಖರ್ ಧವನ್ ಇತ್ತೀಚೆಗಷ್ಟೇ ಎರಡನೇ ಮದುವೆಯಾಗಿದ್ದರು. ಈಗ ಅವರಿಗೆ ಗುಡ್ ನ್ಯೂಸ್ ಒಂದು ಕಾದಿದೆ.
ಈ ಮೊದಲು ಶಿಖರ್ ಧವನ್ ಅಯೇಶಾ ಮುಖರ್ಜಿ ಎಂಬುವರರನ್ನು ಮದುವೆಯಾಗಿ ನಂತರ ವಿಚ್ಛೇದನ ಪಡೆದಿದ್ದರು.

ಇದನ್ನೂ ಓದಿ: ನಾನು ರಾಮನಗರಕ್ಕೆ ಫಿಕ್ಸ್: ನಿಖಿಲ್ ಕುಮಾರಸ್ವಾಮಿ ಸ್ಪಷ್ಟನೆ
ಶಿಖರ್ ಧವನ್ ವಿಚ್ಛೇದನದ ನಂತರ ಪರಿಹಾರವಾಗಿ ಆಯೇಷಾ ಮುಖರ್ಜಿಗೆ ಹಣ ನೀಡಿದ್ದರು. ಆದರೆ ದೆಹಲಿಯ ಪಾಟಿಯಾಲಾ ಹೌಸ್ ಕೋರ್ಟ್ ಧವನ್ ಅವರು ಆಸ್ತಿ ವಸಾಹತು ರೂಪದಲ್ಲಿ ನೀಡಿದ 5.7 ಕೋಟಿ ಮೊತ್ತವು ಭಾರತೀಯ ಕಾನೂನಿನ ಪ್ರಕಾರ ಸರಿಯಾಗಿಲ್ಲ ಎಂದು ಹೇಳಿದ್ದು, ಆಸ್ಟ್ರೇಲಿಯಾದ ಕುಟುಂಬ ನ್ಯಾಯಾಲಯದ ತೀರ್ಪು ಭಾರತಕ್ಕೆ ಅನ್ವಯಿಸುವುದಿಲ್ಲ ಎಂದು ಹೇಳಿ ಆ ಹಣವನ್ನು ಹಿಂದುರಿಗಿಸುವಂತೆ ಆದೇಶ ನೀಡಿದೆ.

ದೆಹಲಿಯ ಕುಟುಂಬ ನ್ಯಾಯಾಲಯದ ನ್ಯಾಯಾಧೀಶ ದೇವೇಂದ್ರ ಕುಮಾರ್ ಗಾರ್ಗ್ ಅವರು, ಧವನ್ ಅವರಿಂದ ಆಯೇಷಾ 16.9 ಕೋಟಿ ರೂಪಾಯಿಗಳನ್ನು ಕೇಳಲು ಸಾಧ್ಯವಿಲ್ಲ. ಆಯೆಷಾ ಅವರು ತೆಗೆದುಕೊಂಡ ಆಸ್ತಿ ವಸಾಹತು ನಿಯಮಗಳ ಅಡಿಯಲ್ಲಿ 5.7 ಕೋಟಿ ರೂಪಾಯಿಗಳನ್ನು ಹೆಚ್ಚುವರಿಯಾಗಿ ತೆಗೆದುಕೊಂಡಿದ್ದಾರೆ, ಅದನ್ನು ಹಿಂದಿರುಗಿಸಬೇಕಾಗುತ್ತದೆ ಎಂದು ತೀರ್ಪು ನೀಡಿದೆ.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

