ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಜೈಲು ಶಿಕ್ಷೆ ಅನುಭವಿಸಿದವರು ಜೈಲಿನಿಂದ ಬಿಡುಗಡೆಯಾದ ನಂತರವೂ ಮತ್ತದೇ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುವ ಘಟನೆಗಳು ನಡೆಯುತ್ತಲೇ ಇರುತ್ತವೆ. ಕೆಲವರು ಪಾಪಪ್ರಜ್ಞೆ ಕಾಡಿ ಕೆಲವರು ಅಪರಾಧ ಕೃತ್ಯಗಳಿಂದ ದೂರಸರಿದು ಸತ್ಪಜ್ರೆಗಳಾದರೆ, ಇನ್ನು ಕೆಲವರು ಅಪರಾಧ ಕೃತ್ಯಗಳಲ್ಲಿ ತೊಡಗಿಕೊಳ್ಳಬಾರದು ಎಂದು ಭಾವಿಸಿ ಬೇರೊಂದು ಊರಿಗೆ ಹೋಗಿ ದುಡಿದು ಜೀವಿಸೋಣ ಎಂದು ಊರು ಬಿಡುತ್ತಾರೆ.
ಹೀಗೆ ಊರು ಬಿಟ್ಟು ಬಂದ ಒಂದು ಕಳ್ಳರಿಬ್ಬರು, ಮತ್ತದೇ ಕೃತ್ಯದಲ್ಲಿ ಭಾಗಿಯಾಗಿ ಸಮಸ್ಯೆಯನ್ನು ಎದುರಿಸಿದ ಸನ್ನಿವೇಶಗಳನ್ನು ತೋರಿಸುವ ‘ಒಂಜಿ ಕಥೆ ಪನ್ಪೆ’ ಎಂಬ ತುಳು ಕಿರುಚಿತ್ರ ಮಾ.15 ರಂದು ಬೆಂಗಳೂರಿನಲ್ಲಿರುವ ಸುಚಿತ್ರ ಸಿನಿಮಾ ಮತ್ತು ಸಾಂಸ್ಕೃತಿಕ ಅಕಾಡೆಮಿಯಲ್ಲಿ ತೆರೆಕಾಣಲಿದೆ. ಇತ್ತೀಚೆಗಷ್ಟೇ ಇದರ ಪೋಸ್ಟರ್ ರಿಲೀಸ್ ಮಾಡಲಾಗಿದೆ.

ತಾನೊಂದು ಬಗೆದರೆ ದೈವವೊಂದು ಬಗೆಯಿತು ಎನ್ನುವ ಕಥಾಹಂದರ ಇರುವ ಕಿರುಚಿತ್ರ ಇದಾಗಿದೆ. ಸಣ್ಣ ಪುಟ್ಟ ಕಳ್ಳತನ ಮಾಡುತ್ತಿದ್ದ ಸಿದ್ದ ಮತ್ತು ರಮೇಶ ಎನ್ನುವ ಕಳ್ಳರು ಇನ್ನು ಕೆಲಸ ಮಾಡಿ ಜೀವನ ಸಾಗಿಸಬೇಕೆಂದು ಬೆಂಗಳೂರಿನಿಂದ, ಮಂಗಳೂರಿಗೆ ಬಂದು ಅಲ್ಲಿಯೂ ಕಳ್ಳತನ ಮುಂದುವರಿಸಿದಾಗ ಅವರಿಗೆದುರಾಗುವ ಸಮಸ್ಯೆಯೇ ಈ ಕಿರುಚಿತ್ರದ ಕಥಾವಸ್ತುವಾಗಿದೆ.
ಇದನ್ನೂ ಓದಿ: ದಳಪತಿ ವಿಜಯ್ – ಸಂಗೀತಾ ಡಿವೋರ್ಸ್: 600 ಕೋಟಿ ಆಸ್ತಿಯಲ್ಲಿ ಪತ್ನಿಯ ಪಾಲೆಷ್ಟು?
ಪಾತ್ರಗಳು:
ರಾಮನಾಥ್ ಪಾತ್ರದಲ್ಲಿ ಸದಾಶಿವ ಅಮೀನ್, ರಮೇಶ್ ಪಾತ್ರದಲ್ಲಿ ಮಾಧವ್ ಪೂಜಾರಿ, ಸಿದ್ದನಾಗಿ ಜಿತೇಶ್ ಮಿಜಾರ್, ರಾಜು ಪಾತ್ರದಲ್ಲಿ ದೇವಿಕಿರಣ್ ಗಣೇಶಪುರ, ರಂಜು ಪಾತ್ರದಲ್ಲಿ ಶ್ರೇಯಸ್ ಸುವರ್ಣ, ರಾಣಿಯಾಗಿ ಶ್ರೀ ಕನ್ಯಾ ಕಾಣಿಸಿಕೊಂಡಿದ್ದು, ಡಾ.ಲವಿನ ಕೆ.ಬಿ. ಹಾಗೂ ಜ್ಯೋತಿ ಹೆಗ್ಡೆ ಅವರೂ ಈ ಕಿರುಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.
ಕಥೆ ಮತ್ತು ಚಿತ್ರಕಥೆ: ಜಿತೇಶ್ ಮಿಜಾರ್
ನಿರ್ದೇಶನ: ದಿವ್ಯಾ ಗ್ರೀಷ್ಮಾ
ಛಾಯಾಗ್ರಹಣ: ಮನೋಜ್ ಪ್ರಭು
ಸಂಕಲನ: ಶ್ರೇಯಸ್ ಸುವರ್ಣ
ಗಫಾರ್ ಮತ್ತು ಪೋಸ್ಟರ್ ವಿನ್ಯಾಸ: ತೀರ್ಥ ಖಂಡಿಗೆ
ಸಂಗೀತ: ಸುಭಾಷ್ ಮಿಜಾರ್
ಡಬ್ಬಿಂಗ್: ರಾಗ ಸ್ಟುಡಿಯೋ ಮಂಗಳೂರು
ಗಾಯಕಿ: ಶ್ರೀ ಗೌರಿ ಶರತ್
ಕಲೆ: ದಿವ್ಯಾ ಗ್ರೀಷ್ಮಾ ಮತ್ತು ಜಿತೇಶ್ ಮಿಜಾರ್
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

