ಕೇತುಗ್ರಸ್ತ ಚಂದ್ರಗ್ರಹಣ ಆರಂಭ: ಭಾರತದಲ್ಲಿ ಎಷ್ಟು ನಿಮಿಷಗಳ ಕಾಲ ಗ್ರಹಣ ಗೋಚರ? ನಭೋಮಂಡಲದಲ್ಲಿ ಅಪರೂಪದ ಕ್ಷಣ!

ಇಂದು ಆಕಾಶದಲ್ಲಿ ಕೇತುಗ್ರಸ್ತ ಚಂದ್ರಗ್ರಹಣದ ಭವ್ಯ ನೋಟ ಕಂಡುಬರುತ್ತಿದೆ. ಭೂಮಿಯ ನೆರಳು ಚಂದ್ರನ ಮೇಲೆ ಬೀಳುವ ಈ ಪ್ರಕ್ರಿಯೆಯಲ್ಲಿ ಚಂದ್ರನ ಕಾಲು ಭಾಗ ಮಾತ್ರ ಪ್ರಕಾಶಮಾನವಾಗಿ ಕಾಣುತ್ತಿದ್ದು, ಉಳಿದ ಭಾಗ ಕತ್ತಲೆಯಿಂದ ಆವೃತವಾಗಿದೆ. ಅಮೇರಿಕಾದ ಲಾಸ್ ಏಂಜಲೀಸ್ ಸೇರಿದಂತೆ ಪಶ್ಚಿಮ ರಾಷ್ಟ್ರಗಳಲ್ಲಿ ಈ ಗ್ರಹಣವು ಅತ್ಯಂತ ಸ್ಪಷ್ಟವಾಗಿ ಮತ್ತು ದೀರ್ಘಕಾಲದವರೆಗೆ ಗೋಚರಿಸುತ್ತಿದೆ.

ಭಾರತದ ಕೆಲವು ಭಾಗಗಳಲ್ಲಿ ಗ್ರಹಣದ ಅಂತ್ಯದ ಕ್ಷಣಗಳು ಮಾತ್ರ ಕಾಣ ಸಿಗಲಿವೆ. ಗ್ರಹಣ 3 ಗಂಟೆಗೆ ಪ್ರಾರಂಭವಾಗಿದ್ದು, 6.30ರ ವೇಳೆಗೆ ಅಂತ್ಯವಾಗಲಿದೆ. ಭಾರತದಲ್ಲಿ 6.30 ವೇಳೆಗೆ ಸರಿಸುಮಾರು 21 ನಿಮಿಷಗಳ ಕಾಲ ಚಂದ್ರನು ನೆರಳಿನಿಂದ ಮುಕ್ತವಾಗುವ ದೃಶ್ಯವನ್ನು ವೀಕ್ಷಿಸಬಹುದಾಗಿದೆ. ಸೂರ್ಯ, ಭೂಮಿ ಮತ್ತು ಚಂದ್ರ ಒಂದೇ ಸರಳರೇಖೆಯಲ್ಲಿ ಬಂದಾಗ ಭೂಮಿಯ ನೆರಳು ಚಂದ್ರನ ಮೇಲೆ ಬೀಳುತ್ತದೆ. ಇಂದು ಕೇತುವಿನ ಪ್ರಭಾವವಿರುವುದರಿಂದ ಇದನ್ನು ‘ಕೇತುಗ್ರಸ್ತ’ ಗ್ರಹಣ ಎನ್ನಲಾಗುತ್ತದೆ.

ಇದನ್ನೂ ಓದಿ: ಭೂಮಿಯಿಂದ ದೂರ ಸರಿಯುತ್ತಿದ್ದಾನೆ ಚಂದ್ರ: ಇನ್ನು ಮುಂದೆ ದಿನಕ್ಕೆ 24 ಅಲ್ಲ, 25 ಗಂಟೆ!

ಭಾರತದಲ್ಲಿ ಇದನ್ನು ಧಾರ್ಮಿಕವಾಗಿ ದೋಷ ಎಂದು ಪರಿಗಣಿಸಿ ಸ್ನಾನ-ಜಪ ಮಾಡುತ್ತಾರೆ. ಅದೇ ರೀತಿ ಜಪಾನ್, ಚೀನಾ ಮತ್ತು ಅಮೇರಿಕಾದಲ್ಲಿಯೂ ಗ್ರಹಣದ ಬಗ್ಗೆ ವಿಭಿನ್ನ ಜಾನಪದ ಕಥೆಗಳು ಹಾಗೂ ವೈಜ್ಞಾನಿಕ ಆಸಕ್ತಿಗಳಿವೆ.

ಆಧ್ಯಾತ್ಮಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು