ಇಸ್ಲಾಮಾಬಾದ್: ಕ್ರಿಕೆಟ್ ಮೈದಾನದಲ್ಲಿ ಭಾರತದ ಅಬ್ಬರಕ್ಕೆ ಪಾಕಿಸ್ತಾನದ ಅಭಿಮಾನಿಗಳು ಮತ್ತು ಮಾಧ್ಯಮದವರು ಹತಾಶರಾಗುವುದು ಹೊಸದೇನಲ್ಲ. ಆದರೆ, ಈ ಬಾರಿ ಪಾಕಿಸ್ತಾನದ ನ್ಯೂಸ್ ಆಂಕರ್ ಒಬ್ಬರು ತೋರಿದ ವರ್ತನೆ ಎಲ್ಲರನ್ನೂ ಬೆಚ್ಚಿಬೀಳಿಸಿದೆ. ವೆಸ್ಟ್ ಇಂಡೀಸ್ ವಿರುದ್ಧ ಭಾರತ ತಂಡ ಭರ್ಜರಿ ಗೆಲುವು ದಾಖಲಿಸಿ ಸೆಮಿಫೈನಲ್ ಪ್ರವೇಶಿಸುತ್ತಿದ್ದಂತೆಯೇ, ಲೈವ್ ಶೋನಲ್ಲಿದ್ದ ಆಂಕರ್ ತನ್ನ ಎದುರಿಗಿದ್ದ ಟಿವಿಯನ್ನು ಒಡೆದು ಹಾಕಿದ್ದಾರೆ.
ಟಿ20 ವಿಶ್ವಕಪ್‌ನ ನಿರ್ಣಾಯಕ ಪಂದ್ಯದಲ್ಲಿ ಭಾರತ ತಂಡ ವೆಸ್ಟ್ ಇಂಡೀಸ್ ಅನ್ನು ಮಣಿಸಿ ಸೆಮಿಫೈನಲ್ ಸ್ಥಾನವನ್ನು ಖಚಿತಪಡಿಸಿಕೊಂಡಿತು. ಈ ಫಲಿತಾಂಶ ಹೊರಬೀಳುತ್ತಿದ್ದಂತೆ ಪಾಕಿಸ್ತಾನದ ಖಾಸಗಿ ವಾಹಿನಿಯೊಂದರಲ್ಲಿ ಚರ್ಚೆ ನಡೆಸುತ್ತಿದ್ದ ಆಂಕರ್, ಭಾರತದ ಸರಣಿ ಗೆಲುವನ್ನು ಸಹಿಸಲಾರದೆ ಆವೇಶಕ್ಕೊಳಗಾದರು. “ಭಾರತ ಪ್ರತಿಬಾರಿಯೂ ಹೇಗೆ ಗೆಲ್ಲುತ್ತದೆ?” ಎಂದು ಕಿರುಚುತ್ತಾ ತನ್ನ ಮುಂದಿದ್ದ ಎಲ್‌ಇಡಿ ಟಿವಿಯನ್ನು ಎಸೆದು ಜಖಂಗೊಳಿಸಿದ್ದಾರೆ.

ಇದನ್ನೂ ಓದಿ: ಪಂದ್ಯ ಗೆದ್ದರೂ ಕೂಡ ವಿಶ್ವಕಪ್ ಇಂದ ಹೊರಬಿದ್ದ ಪಾಕಿಸ್ತಾನ
ವಿಡಿಯೋ ಇಲ್ಲಿದೆ ನೋಡಿ
Pakistani anchor smashed his LED TV in rage after India thrashed WI and stormed into the semis 😭😭
(Naa Kare Janab, Naa kare)😭😂pic.twitter.com/y1FrFH2F7n
— Ghar Ke Kalesh (@gharkekalesh) March 1, 2026
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಪಾಕ್ ಆಂಕರ್ ಕಾಲೆಳೆಯುತ್ತಿದ್ದಾರೆ. ಈ ಹಿಂದೆ ಪಾಕಿಸ್ತಾನ ತಂಡ ಸೋತಾಗ ಅಭಿಮಾನಿಗಳು ಟಿವಿ ಒಡೆಯುತ್ತಿದ್ದರು, ಈಗ ಭಾರತ ಗೆದ್ದಿದ್ದಕ್ಕೂ ಆಂಕರ್ ಟಿವಿ ಒಡೆಯುತ್ತಿದ್ದಾರೆ ಎಂದು ನೆಟ್ಟಿಗರು ತಮಾಷೆ ಮಾಡುತ್ತಿದ್ದಾರೆ. ಸೆಮಿಫೈನಲ್‌ಗೆ ಭಾರತ ಅಜೇಯವಾಗಿ ಪ್ರವೇಶಿಸಿರುವುದು ಪಾಕಿಸ್ತಾನದ ಕ್ರೀಡಾ ವಲಯದಲ್ಲಿ ಅಸೂಯೆ ಮತ್ತು ಆತಂಕವನ್ನು ಸೃಷ್ಟಿಸಿದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ ಎಂದು ವಿಶ್ಲೇಷಿಸಲಾಗುತ್ತಿದೆ.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

