Breaking News

T20 Worldcup: ನೆಮಿಬೀಯಾ ವಿರುದ್ಧ ಭರ್ಜರಿ ಜಯ ಸಾಧಿಸಿ ಸೂಪರ್-8ಗೆ ಲಗ್ಗೆ ಇಟ್ಟ ಪಾಕಿಸ್ತಾನ

ಕೊಲೊಂಬೊ: ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಭರ್ಜರಿ ಜಯ ದಾಖಲಿಸಿ ಪಾಕಿಸ್ತಾನ ಸೂಪರ್-8 ಹಂತಕ್ಕೆ ಅರ್ಹತೆ ಪಡೆಯಿತು‌.

ಇಲ್ಲಿನ ಸಿಂಹಳೀಸ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ ತಂಡ ನೆಮಿಬೀಯಾ ವಿರುದ್ಧ 102 ರನ್ ಗಳ ಅಂತರದಿಂದ ಜಯ ಸಾಧಿಸಿತು.

Advertisement

ಇದನ್ನೂ ಓದಿ: ಕೊಡಗು: ಹೆಲ್ಮೆಟ್ ಹಾಕದೇ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಪ್ರಾಣ ಕಳೆದುಕೊಂಡ ಸವಾರ

ಟಾಸ್ ಗೆದ್ದ ಪಾಕಿಸ್ತಾನ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು‌. ಆರಂಭಿಕ ಆಟಗಾರ ಶಹೀಬ್ಜದ ಫರ್ಹಾನ್ ಅವರ ಅಜೇಯ ಶತಕದ (58 ಎಸೆತಗಳಲ್ಲಿ 100) ನೆರವಿನಿಂದ
20 ಓವರ್‌ಗಳಲ್ಲಿ 199 ರನ್ ಕಲೆ ಹಾಕಿತು‌. ನಾಯಕ ಸಲ್ಮಾನ ಅಘಾ 38 ಮತ್ತು ಶದಾಬ್ ಖಾನ್ ಅಜೇಯ 36 ರನ್ ಗಳಿಸಿದರು‌.

ನೆಮೀಬಿಯಾ ಪರ ಜ್ಯಾಕ್ ಬ್ರೇಸ್‌ವೆಲ್ 2, ಗೆರ್ಹಾರ್ಡ್ ಎರಾಸ್ಮಸ್ ತಲಾ ಒಂದು ವಿಕೆಟ್ ಪಡೆದರು.

ಗುರಿ ಬೆನ್ನತ್ತಿದ ನೆಮೀಬಿಯಾ ತಂಡ ಉಸ್ಮಾನ್ ತಾರೀಖ್ (4) ಮತ್ತು ಶದಾಬ್ ಖಾನ್ (3) ಅವರ ದಾಳಿಗೆ ಸಿಲುಕಿ 97 ರನ್‌ಗಳಿಗೆ ಸರ್ವ ಪತನ ಕಂಡಿತು. ನೆಮೀಬಿಯಾ ಪರ ಲೌರೆನ್ ಸ್ಟೀನ್‌ಕ್ಯಾಂಪ್ 23, ಅಲೆಕ್ಸಾಂಡರ್ ವೋಶ್ಕೆನ್ 20 ರನ್ ಗಳಿಸಿದರು.

ಇದರೊಂದಿಗೆ ಪಾಕಿಸ್ತಾನ ಕೊನೇ ತಂಡವಾಗಿ ಸೂಪರ್-8 ಹಂತಕ್ಕೆ ಪ್ರವೇಶ ಪಡೆಯಿತು‌.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್:‌ 7353833811, ಇ-ಮೇಲ್-‌ g1newsdpt@gmail.com

News Source : G1 News

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು