ಕುಶಾಲನಗರ: ಪೊಲೀಸರು ಹೆಲ್ಮೆಟ್ ಚೆಕ್ ಮಾಡುತ್ತಿದ್ದಾಗ ಹೆಲ್ಮೆಟ್ ಧರಿಸದೇ ಬಂದ ದ್ವಿಚಕ್ರ ಸವಾರ ರಸ್ತೆ ಮಧ್ಯದಲ್ಲಿ ಯೂಟರ್ನ್ ತೆಗೆದುಕೊಳ್ಳುವಾಗ ಗೂಡ್ಸ್ ವಾಹನ ಡಿಕ್ಕಿ ಹೊಡೆದು ಸಾವನ್ನಪ್ಪಿದ ಘಟನೆ ಕುಶಾಲನಗರದಲ್ಲಿ ನಡೆದಿದೆ.
ಗಂಭೀರವಾಗಿ ಗಾಯಗೊಂಡು ಸವಾರ ಹೆಬ್ಬಾಲೆಯ ಮರೂರು ಗ್ರಾಮದ ನಟೇಶ್ ಮೃತಪಟ್ಟಿದ್ದಾರೆ.

ಹಿಂಬದಿಯಲ್ಲಿ ಕುಳಿತಿದ್ದ ಅವರ ಪತ್ನಿ ಗಾಯಗೊಂಡಿದ್ದಾರೆ. ಕೂಡುಮಂಗಳೂರು ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಸಮಾಜಸೇವಕ ಮಟನ್ ಜಭಿವುಲ್ಲಾ ತಮ್ಮ ವಾಹನದಲ್ಲಿ ಗಾಯಾಳುಗಳನ್ನು ಕುಶಾಲನಗರ ಆಸ್ಪತ್ರೆಗೆ ಸೇರಿಸುವಲ್ಲಿ ನೆರವಾಗಿ ಮಾನವೀಯತೆ ಮೆರೆದಿದ್ದಾರೆ.
ಕೂಡುಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯ ಸಮೀಪ ಹೆದ್ದಾರಿಯಲ್ಲಿ ಪೊಲೀಸರು ವಾಹನಗಳ ತಪಾಸಣೆ ಮಾಡುತ್ತಿದ್ದರು. ಈ ಸಂದರ್ಭ ಹೆಬ್ಬಾಲೆಯ ದಂಪತಿ ಹೆಲೈಟ್ ಧರಿಸದೆ ಬೈಕ್ ನಲ್ಲಿ ಪತಿ ಮತ್ತು ಪತ್ನಿ ಬರುತ್ತಿದ್ದವರು ಪೊಲೀಸರನ್ನು ಕಂಡು ಬೆದರಿ ಇದ್ದಕ್ಕಿದ್ದಂತೆ ರಸ್ತೆ ಮಧ್ಯದಲ್ಲಿ ಬೈಕ್ ಅನ್ನು ಯೂಟರ್ನ್ ಮಾಡಲು ಯತ್ನಿಸಿದ್ದಾರೆ.

ಇದೇ ಸಂದರ್ಭ ಧಾವಿಸಿ ಬಂದ ಅಶೋಕ್ ಲೈ ಲ್ಯಾಂಡ್ ಗೂಡ್ಸ್ ವಾಹನ ಬೈಕ್ ಗೆ ಡಿಕ್ಕಿ ಹೊಡೆದಿದೆ. ಹೀಗಾಗಿ ಸವಾರ ಗಂಭಿರವಾಗಿ ಗಾಯಗೊಂಡು ಚಿಂತಾಜನಕರಾದರು ಮತ್ತು ಹಿಂಬದಿಯಲ್ಲಿ ಕುಳಿತಿದ್ದ ಇವರ ಪತ್ನಿ ಗಾಯಗೊಂಡಿದ್ದರು.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

