ಸಿಖ್ ಯುವತಿಯರ ಮತಾಂತರಕ್ಕೆ ಪಾಕ್ ಗ್ಯಾಂಗ್‌ಗಳಿಂದ 10 ಲಕ್ಷ ರೂ. ಆಮಿಷ? ‘ಕೌರ್ ಟು ಖಾನ್’ ಆತಂಕ

ಯುನೈಟೆಡ್ ಕಿಂಗ್‌ಡಮ್‌ನಲ್ಲಿ ವಾಸಿಸುತ್ತಿರುವ ಸಿಖ್ ಸಮುದಾಯದ ಯುವತಿಯರನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನಿ ಮೂಲದ ‘ಗ್ರೂಮಿಂಗ್ ಗ್ಯಾಂಗ್‌ಗಳು’ (Grooming Gangs) ವ್ಯವಸ್ಥಿತವಾಗಿ ಮತಾಂತರ ಅಭಿಯಾನ ನಡೆಸುತ್ತಿವೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಅಭಿಯಾನಕ್ಕೆ ‘ಕೌರ್ ಟು ಖಾನ್’ ಎಂಬ ಹೆಸರಿಡಲಾಗಿದ್ದು, ಇದು ಈಗ ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ.

ಸಿಖ್ ಯುವತಿಯರನ್ನು ಪ್ರೀತಿಯ ಜಾಲಕ್ಕೆ ಬೀಳಿಸಿ (Love Traps), ನಂತರ ಅವರನ್ನು ಇಸ್ಲಾಂ ಧರ್ಮಕ್ಕೆ ಮತಾಂತರಿಸಿ ‘ಖಾನ್’ ಎಂಬ ಹೆಸರಿನವರನ್ನು ಮದುವೆಯಾಗುವಂತೆ ಮಾಡುವುದು ಈ ಯೋಜನೆಯ ಉದ್ದೇಶ ಎನ್ನಲಾಗಿದೆ.ಪಾಕಿಸ್ತಾನಿ ಮೂಲದ ಗ್ರೂಮಿಂಗ್ ಗ್ಯಾಂಗ್‌ಗಳು ಪ್ರತಿ ಸಿಖ್ ಯುವತಿಯನ್ನು ಮತಾಂತರಗೊಳಿಸಲು ಸುಮಾರು £10,000 (ಅಂದಾಜು 10 ಲಕ್ಷ ರೂಪಾಯಿ) ವರೆಗೆ ಹಣದ ಆಫರ್ ನೀಡುತ್ತಿವೆ ಎಂದು ಕೆಲವು ಮಹಿಳೆಯರು ಮತ್ತು ಸಾಮಾಜಿಕ ಕಾರ್ಯಕರ್ತರು ಆರೋಪಿಸಿದ್ದಾರೆ.

ಇಲ್ಲಿದೆ ನೋಡಿ ವಿಡಿಯೋ:

ಇತ್ತೀಚೆಗೆ ಪಶ್ಚಿಮ ಲಂಡನ್‌ನ ಹೌನ್ಸ್ಲೋದಲ್ಲಿ 16 ವರ್ಷದ ಸಿಖ್ ಬಾಲಕಿಯನ್ನು ಅಪಹರಿಸಿ ಮತಾಂತರಕ್ಕೆ ಒತ್ತಡ ಹೇರಿದ ಆರೋಪ ಕೇಳಿಬಂದಿತ್ತು. ಈ ವೇಳೆ ಸುಮಾರು 200ಕ್ಕೂ ಹೆಚ್ಚು ಸಿಖ್ ಸಮುದಾಯದವರು ಪ್ರತಿಭಟನೆ ನಡೆಸಿ ಬಾಲಕಿಯನ್ನು ರಕ್ಷಿಸಿದ್ದರು. ಬ್ರಿಟನ್ ಪೊಲೀಸರು ಇಂತಹ ಪ್ರಕರಣಗಳನ್ನು ತಡೆಯುವಲ್ಲಿ ವಿಫಲರಾಗುತ್ತಿದ್ದಾರೆ ಮತ್ತು ರಾಜಕೀಯ ಕಾರಣಗಳಿಗಾಗಿ ಈ ಗ್ಯಾಂಗ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅಲ್ಲಿನ ಸಿಖ್ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

ಇದನ್ನೂ ಓದಿ: ಕಿಮ್ ಜಾಂಗ್ ಉನ್‌ಗೆ ಶೇ. 99.93ರಷ್ಟು ಮತ! ಉತ್ತರ ಕೊರಿಯಾ ಚುನಾವಣಾ ಫಲಿತಾಂಶ ಕಂಡು ಬೆಚ್ಚಿಬಿದ್ದ ಜಗತ್ತು!

ಭಾರತದಲ್ಲೂ ಈ ವಿಷಯ ಧ್ವನಿಸಿದ್ದು, ಪಂಜಾಬ್‌ನ ಬಿಜೆಪಿ ನಾಯಕರು ಈ ‘K2K’ (Kaur to Khan) ವಿದ್ಯಮಾನದ ವಿರುದ್ಧ ಅಂತರಾಷ್ಟ್ರೀಯ ಮಟ್ಟದಲ್ಲಿ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ. ಇದು ಕೇವಲ ಧಾರ್ಮಿಕ ವಿಷಯವಲ್ಲ, ಮಹಿಳೆಯರ ಸುರಕ್ಷತೆ ಮತ್ತು ಘನತೆಯ ಪ್ರಶ್ನೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಕ್ರಿಕೆಟ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

 

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು