ಘಾಜಿಯಾಬಾದ್/ಲಕ್ನೋ: ಉತ್ತರ ಪ್ರದೇಶದ ಘಾಜಿಯಾಬಾದ್ನಲ್ಲಿ ಭದ್ರತಾ ಪಡೆಗಳು ಮತ್ತು ಗುಪ್ತಚರ ಇಲಾಖೆ ಭಾರಿ ಕಾರ್ಯಾಚರಣೆ ನಡೆಸಿದ್ದು, ಪಾಕಿಸ್ತಾನದ ಗುಪ್ತಚರ ಸಂಸ್ಥೆಗಳೊಂದಿಗೆ ಸಂಪರ್ಕ ಹೊಂದಿದ್ದ ಬೃಹತ್ ಗೂಢಚಾರಿಕೆ ಜಾಲವನ್ನು ಭೇದಿಸಿವೆ. ಬಂಧಿತ ಆರೋಪಿಗಳು ಭಾರತದ ಪ್ರಮುಖ ಸ್ಥಳಗಳ ಮೇಲೆ ದಾಳಿ ನಡೆಸುವ ಉದ್ದೇಶದಿಂದ ‘ಪ್ರೀ-ಅಟ್ಯಾಕ್ ರೆಕಾನ್’ (Pre-attack Recon) ಅಂದರೆ ದಾಳಿಗೂ ಮುನ್ನ ನಡೆಸುವ ವಿಚಕ್ಷಣೆ ಕಾರ್ಯದಲ್ಲಿ ತೊಡಗಿದ್ದರು ಎಂಬ ಆಘಾತಕಾರಿ ಮಾಹಿತಿ ಹೊರಬಂದಿದೆ.
ಈ ನೆಟ್ವರ್ಕ್ ಪ್ರಮುಖ ಸೇನಾ ಸ್ಥಾಪನೆಗಳು, ಜನನಿಬಿಡ ಪ್ರದೇಶಗಳು ಮತ್ತು ಆಯಕಟ್ಟಿನ ಸ್ಥಳಗಳ ಮೇಲೆ ದಾಳಿ ನಡೆಸಲು ಮಾಹಿತಿ ಸಂಗ್ರಹಿಸುತ್ತಿತ್ತು.ತನಿಖೆಯ ವೇಳೆ ಆರೋಪಿಗಳು ಪಾಕಿಸ್ತಾನ ಮೂಲದ ಹ್ಯಾಂಡ್ಲರ್ಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು ಮತ್ತು ಅವರಿಗೆ ಫೋಟೋ ಹಾಗೂ ವೀಡಿಯೊಗಳನ್ನು ರವಾನಿಸುತ್ತಿದ್ದರು ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಇರಾನ್ ನಾಯಕ ಮೊಜ್ತಬಾ ಖಮೇನಿ ಬದುಕುಳಿದಿದ್ದಾರೆಯೇ? ವೈರಲ್ ವಿಡಿಯೋ ಬೆನ್ನಲ್ಲೇ ಶುರುವಾಯ್ತು ಜಾಗತಿಕ ಚರ್ಚೆ
ಘಾಜಿಯಾಬಾದ್ ಪೊಲೀಸರು ಮತ್ತು ಭಯೋತ್ಪಾದನಾ ನಿರೋಧಕ ದಳ (ATS) ಜಂಟಿ ಕಾರ್ಯಾಚರಣೆ ನಡೆಸಿ ಪ್ರಮುಖ ಆರೋಪಿಗಳನ್ನು ವಶಕ್ಕೆ ಪಡೆದಿದೆ. ಇವರಿಂದ ಹಲವಾರು ಮೊಬೈಲ್ ಫೋನ್ಗಳು, ಸಿಮ್ ಕಾರ್ಡ್ಗಳು ಮತ್ತು ನಕ್ಷೆಗಳನ್ನು ವಶಪಡಿಸಿಕೊಳ್ಳಲಾಗಿದೆ.ಈ ಘಟನೆಯ ಬೆನ್ನಲ್ಲೇ ಉತ್ತರ ಪ್ರದೇಶದಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
ವಿದೇಶ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

