Breaking News

ಭಾರತೀಯ ಮಾರುಕಟ್ಟೆಗೆ ‘ಪ್ಯಾನಾಸೋನಿಕ್ ಲೂಮಿಕ್ಸ್ L10’ ಹೈ-ಎಂಡ್ ಕ್ಯಾಮೆರಾ ಲಾಂಚ್

ಪ್ರಸಿದ್ಧ ಇಲೆಕ್ಟ್ರಾನಿಕ್ಸ್ ಸಂಸ್ಥೆ ಪ್ಯಾನಾಸೋನಿಕ್ (Panasonic), ತನ್ನ ಅತ್ಯಾಧುನಿಕ ಹಾಗೂ ಹೈ-ಎಂಡ್ ಫಿಕ್ಸ್ಡ್-ಲೆನ್ಸ್ ಕ್ಯಾಮೆರಾ ಲೂಮಿಕ್ಸ್ L10 (LUMIX L10 – DC-L10GW) ಅನ್ನು ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಿದೆ. ಲೂಮಿಕ್ಸ್ ಕ್ಯಾಮೆರಾ ಬ್ರ್ಯಾಂಡ್‌ನ 25ನೇ ವರ್ಷದ ಸವಿನೆನಪಿನಲ್ಲಿ ಈ ಕ್ಯಾಮೆರಾವನ್ನು ಮಾರುಕಟ್ಟೆಗೆ ಪರಿಚಯಿಸಲಾಗಿದ್ದು, ಸ್ಟ್ರೀಟ್, ಟ್ರಾವೆಲ್ ಹಾಗೂ ನಿತ್ಯದ ಫೋಟೋಗ್ರಫಿಗೆ ಸೂಕ್ತವಾಗುವಂತೆ ಕಾಂಪ್ಯಾಕ್ಟ್ ಶೈಲಿಯಲ್ಲಿ ವಿನ್ಯಾಸಗೊಳಿಸಲಾಗಿದೆ.

ಬೆಲೆ ಮತ್ತು ಲಭ್ಯತೆ:

ಗರಿಷ್ಠ ಚಿಲ್ಲರೆ ಬೆಲೆ (MRP): ₹1,79,990.

ಬಣ್ಣಗಳು: ಕಪ್ಪು (Black) ಹಾಗೂ ಸಿಲ್ವರ್ (Silver) ಎಂಬ ಎರಡು ಆಕರ್ಷಕ ಬಣ್ಣಗಳಲ್ಲಿ ದೊರೆಯಲಿದೆ.

ಲಭ್ಯತೆ: ಆಗಸ್ಟ್ 2026 ರಿಂದ ಭಾರತದಾದ್ಯಂತ ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ.

ಕ್ಯಾಮೆರಾದ ಪ್ರಮುಖ ವೈಶಿಷ್ಟ್ಯಗಳು :

ಲೈಕಾ (Leica) ಲೆನ್ಸ್ ಹಾಗೂ ಸೆನ್ಸಾರ್: ಈ ಕ್ಯಾಮೆರಾದಲ್ಲಿ f1.7-2.8 ಅಪರ್ಚರ್ ಹೊಂದಿರುವ LEICA DC VARIO-SUMMILUX 24-75 mm ಲೆನ್ಸ್ ನೀಡಲಾಗಿದೆ. ಕೇವಲ 3cm ಹತ್ತಿರದಿಂದಲೂ ಮ್ಯಾಕ್ರೋ (Macro) ಫೋಟೋಗ್ರಫಿ ಮಾಡಬಹುದು.

20.4 MP ಸೆನ್ಸಾರ್: 4/3 ಮಾದರಿಯ BSI CMOS ಸೆನ್ಸಾರ್ ಹೊಂದಿದ್ದು, 20.4 ಮೆಗಾಪಿಕ್ಸೆಲ್ (MP) ಸಾಮರ್ಥ್ಯ ಹೊಂದಿದೆ. Dynamic Range Boost ತಂತ್ರಜ್ಞಾನವು ಕತ್ತಲೆಯ ಭಾಗಗಳಲ್ಲೂ ಸ್ಪಷ್ಟ ವಿವರಗಳನ್ನು ಸೆರೆಹಿಡಿಯಲು ನೆರವಾಗುತ್ತದೆ.

779-ಪಾಯಿಂಟ್ AI ಆಟೋಫೋಕಸ್ (Autofocus): ಕ್ಯಾಮೆರಾದಲ್ಲಿ 779 ಫೋಕಸ್ ಪಾಯಿಂಟ್‌ಗಳಿದ್ದು, Phase Hybrid AF ತಂತ್ರಜ್ಞಾನ ಬಳಸಲಾಗಿದೆ. ಕಣ್ಣು, ಮುಖ, ದೇಹ, ಪ್ರಾಣಿಗಳು ಹಾಗೂ ವೇಗವಾಗಿ ಚಲಿಸುವ ವಾಹನಗಳನ್ನು ಪತ್ತೆಹಚ್ಚಿ ಆಟೋ-ಫೋಕಸ್ ಮಾಡುವ ಕೃತಕ ಬುದ್ಧಿಮತ್ತೆ (AI) ವ್ಯವಸ್ಥೆ ಇದೆ.

ಡಿಸ್ಪ್ಲೇ ಮತ್ತು ವ್ಯೂಫೈಂಡರ್: 2.36-ಮಿಲಿಯನ್ ಡಾಟ್ OLED ವ್ಯೂಫೈಂಡರ್ ಹಾಗೂ 1.84-ಮಿಲಿಯನ್ ಡಾಟ್ ಫ್ರೀ-ಆಂಗಲ್ ಡಿಸ್ಪ್ಲೇ ಪರದೆಯನ್ನು ನೀಡಲಾಗಿದೆ.

ಇದನ್ನೂ ಓದಿ: ಭಾರತದಲ್ಲಿ ವಾಟ್ಸಾಪ್‌ ಶಾಕ್: ಮುನ್ಸೂಚನೆ ಇಲ್ಲದೆ ‘24 ಗಂಟೆಗಳ ರಿವ್ಯೂ’ಗೆ ಬ್ಲಾಕ್ ಆದ ಬಳಕೆದಾರರ ಖಾತೆಗಳು

ಕಂಟೆಂಟ್ ಕ್ರಿಯೇಟರ್ಸ್‌ಗೆ ಹೇಳಿಮಾಡಿಸಿದ ಕ್ಯಾಮೆರಾ:

ಈ ಕ್ಯಾಮೆರಾದಲ್ಲಿ L.Classic ಹಾಗೂ ClassicGold ಫೋಟೋ ಸ್ಟೈಲ್‌ಗಳನ್ನು ನೀಡಲಾಗಿದೆ. LUMIX Lab ಆ್ಯಪ್‌ ಮೂಲಕ AI ಬಣ್ಣ ವಿಶ್ಲೇಷಣೆ ಬಳಸಿ ಸ್ವಂತ LUTಗಳನ್ನು ಕ್ರಿಯೇಟ್ ಮಾಡಬಹುದು. ಅಲ್ಲದೆ, MP4 Lite ವಿಡಿಯೋ ರೆಕಾರ್ಡಿಂಗ್ ಬೆಂಬಲ ಹಾಗೂ ಸ್ಮಾರ್ಟ್‌ಫೋನ್‌ಗೆ ಸುಲಭವಾಗಿ ಕನೆಕ್ಟ್ ಮಾಡುವ ಸೌಲಭ್ಯವನ್ನು ಇದು ಹೊಂದಿದೆ.

“ಲೈಕಾ ಆಪ್ಟಿಕ್ಸ್, AI ಆಟೋಫೋಕಸ್ ಹಾಗೂ ನಯವಾದ ವಿನ್ಯಾಸದ ಸಮ್ಮಿಲನವಾಗಿರುವ ಈ ಕ್ಯಾಮೆರಾ ಭಾರತದ ಫೋಟೋಗ್ರಾಫರ್‌ಗಳು ಹಾಗೂ ಕಂಟೆಂಟ್ ಕ್ರಿಯೇಟರ್ಸ್‌ಗೆ ಹೊಸ ಅನುಭವ ನೀಡಲಿದೆ” ಎಂದು ಪ್ಯಾನಾಸೋನಿಕ್ ಲೈಫ್ ಸೊಲ್ಯೂಷನ್ಸ್ ಇಂಡಿಯಾದ ಇಮೇಜಿಂಗ್ ವಿಭಾಗದ ಮುಖ್ಯಸ್ಥ ಹರ್ದೀಪ್ ಸರ್ನಾ ತಿಳಿಸಿದ್ದಾರೆ.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *