ಇವರ ಹೆಸರು ಪರಮೇಶ್ವರ. ಊರು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲದ ಕೊಡಂಗೆ. ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಸುಖ ಸಂಸಾರ ಸಾಗಿಸುತ್ತಿದ್ದ ಇವರು, ಜೀವನದ ಬಂಡಿ ಎಳೆಯಲು ಅಲ್ಲಿ-ಇಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು.
ಆದರೆ, ಕಳೆದ ಏಳು ವರ್ಷಗಳ ಹಿಂದೆ ವಿಧಿಯಾಟದ ಮುಂದೆ ಅವರು ವೀಲ್ ಚೇರ್ ಹಿಡಿಯುವಂತಾಯಿತು. ಹೌದು, 2019 ರಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದ ಪರಿಣಾಮ ಪರಮೇಶ್ವರ ಅವರ ಬೆನ್ನು ಮೂಳೆ ಮುರಿದು ಸೊಂಟದಿಂದ ಕೆಳಗೆ ಬಲವಿಲ್ಲದೆ ನಡೆದಾಡಲು ಸಾಧ್ಯವಾಗದೆ ವೀಲ್‌ಚೇರ್‌ನಲ್ಲೇ ಓಡಾಡುವಂತಾಗಿದೆ.

ಇದನ್ನೂ ಓದಿ: ಕಂಬಳಕ್ಕೆ ಸರ್ಕಾರದಿಂದ ಆರ್ಥಿಕ ಸಹಾಯ; ಬಂಟ್ವಾಳ ತಾಲೂಕು ಕ್ರೀಡಾಂಗಣಕ್ಕೆ ನಿಧಿ: ಸಿದ್ದರಾಮಯ್ಯ ಘೋಷಣೆ
ಇಂತಹ ಪರಿಸ್ಥಿತಿಯಲ್ಲಿ ಕೂಲಿ ಮಾಡುವುದಾದರೂ ಹೇಗೆ? ಪತ್ನಿಗೆ 10 ಸಾವಿರಕ್ಕೂ ಕಡಿಮೆ ಸಂಬಳದ ಕೆಲಸ. ದುಬಾರಿ ಜಗತ್ತಿನಲ್ಲಿ ಜೀವನಕ್ಕೆ ಏನೇನೂ ಸಾಲದು. ಹೀಗಾಗಿ ಸ್ವ ಉದ್ಯೋಗ ಮಾಡಿಕೊಂಡಾದರೂ ಪತ್ನಿ-ಮಕ್ಕಳನ್ನು ಸಾಕುವ ಕನಸನ್ನು ಹೊತ್ತುಕೊಂಡಿರುವ ಪರಮೇಶ್ವರ ಅವರು, ಅಂಗಡಿ ತೆರೆಯಲು ಬೇಕಾದ ಬಂಡವಾಳ ಇಲ್ಲದ ಹಿನ್ನೆಲೆ ದಾನಿಗಳನ್ನು ಎದುರುನೋಡುತ್ತಿದ್ದರು.
ಹೀಗಿದ್ದಾಗ ಪರಮೇಶ್ವರ ಅವರ ಎರಡೂ ಕಾಲಿನಲ್ಲಿ ನೋವು ಕಾಣಿಸಿಕೊಂಡಿದ್ದು, ಇದರ ಚಿಕಿತ್ಸೆ ಆಗಲೇಬೇಕು ಎಂದು ವೈದ್ಯರು ತಿಳಿಸಿದ್ದಾರೆ. ಅಲ್ಲದೆ, ಸುಮಾರು 80 ರಿಂದ 1 ಲಕ್ಷ ರೂ. ಖರ್ಚು ಆಗಬಹುದು ಎಂದು ಅಂದಾಜಿಸಲಾಗಿದೆ. ಆದರೆ, ಆರ್ಥಿಕವಾಗಿ ತೀರ ಹಿಂದುಳಿದ ಈ ಕುಟುಂಬಕ್ಕೆ ದಾನಿಗಳ ಸಹಾಯ ಹಸ್ತ ಅನಿವಾರ್ಯವಾಗಿದೆ.
ಜೀವನ ಸಾಗಿಸಲು ಒಂದು ಅಂಗಡಿಯನ್ನು ಹಾಕಬೇಕೆಂದಿದ್ದೇನೆ. ಈ ನಡುವೆ ಎರಡು ಕಾಲಿನಲ್ಲಿ ಸಮಸ್ಯೆ ಕಂಡುಬಂದು ಚಿಕಿತ್ಸೆ ಮಾಡಬೇಕಿದೆ. ಇದಕ್ಕಾಗಿ ಹಣದ ಅಗತ್ಯವಿದ್ದು, ಹಣಕಾಸಿನ ನೆರವು ನೀಡುವಂತೆ ದಾನಿಗಳಲ್ಲಿ ಮನವಿ ಮಾಡುತ್ತಿದ್ದೇನೆ.
-ಪರಮೇಶ್ವರ, ಕೊಡಂಗೆ
ಬ್ಯಾಂಕ್ ಖಾತೆ ಸಂಖ್ಯೆ
Google Pay- 8088402989
Bank Name: State Bank Of India
Name: Parameshwara K.
Bank A/c No.- 40758150808
IFSC: SBIN0040952
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

