ದುಬೈಗೆ ಹೋಗುವ ಮುನ್ನ ಒಮ್ಮೆ ಈ ಸ್ಟೋರಿ ಓದಿ! ಸಂಬಳ ಜತೆಗೆ ಈ ಬಗ್ಗೆಯೂ ಗಮನಿಸಿ

ದುಬೈನಲ್ಲಿ ವಾಸಿಸಲು ಒಬ್ಬ ವ್ಯಕ್ತಿಗೆ ಅಥವಾ ಒಂದು ಕುಟುಂಬಕ್ಕೆ ಎಷ್ಟು ಕನಿಷ್ಠ ಸಂಬಳದ ಅಗತ್ಯವಿದೆ ಎಂಬ ಬಗ್ಗೆ ಭಾರೀ ಚರ್ಚೆಗೆ ಕಾರಣವಾಗಿದೆ. ದುಬೈನಲ್ಲಿ ಜೀವನ ವೆಚ್ಚ (Cost of Living) ಏರುತ್ತಿರುವುದರಿಂದ ಈ ಅಂಕಿಅಂಶಗಳು ಬಹಳ ಮುಖ್ಯ. ನಿಷ್ಠ ಜೀವನ ನಡೆಸಲು (ಶೇರ್ಡ್ ರೂಮ್, ಕಟ್ಟುನಿಟ್ಟಿನ ಬಜೆಟ್) ಪ್ರತಿ ತಿಂಗಳು AED 5,000 ರಿಂದ 7,000 (ಸುಮಾರು ₹1.15 ಲಕ್ಷದಿಂದ ₹1.60 ಲಕ್ಷ) ಬೇಕಾಗುತ್ತದೆ. ಒಬ್ಬ ವ್ಯಕ್ತಿ ಸ್ವತಂತ್ರವಾದ 1 BHK ಫ್ಲಾಟ್‌ನಲ್ಲಿ ವಾಸಿಸುತ್ತಾ, ಸಾಧಾರಣವಾಗಿ ಹೊರಗಡೆ ಊಟ ಮಾಡುವುದು ಮತ್ತು ಸ್ವಲ್ಪ ಮಟ್ಟಿನ ಉಳಿತಾಯ ಮಾಡಲು ಬಯಸಿದರೆ AED 12,000 ರಿಂದ 15,000 (ಸುಮಾರು ₹2.75 ಲಕ್ಷದಿಂದ ₹3.45 ಲಕ್ಷ) ಸಂಬಳದ ಅಗತ್ಯವಿದೆ. ಮಕ್ಕಳಿಲ್ಲದ ದಂಪತಿಗಳು ಸಾಮಾನ್ಯ ಜೀವನ ನಡೆಸಲು ಪ್ರತಿ ತಿಂಗಳು ಸುಮಾರು AED 14,000 ರಿಂದ 18,000 (ಸುಮಾರು ₹3.20 ಲಕ್ಷದಿಂದ ₹4.15 ಲಕ್ಷ) ಆದಾಯ ಹೊಂದಿರಬೇಕು.

ಮಕ್ಕಳ ಶಿಕ್ಷಣ, ಬಾಡಿಗೆ ಮತ್ತು ಇತರ ಖರ್ಚುಗಳನ್ನು ಗಮನದಲ್ಲಿಟ್ಟುಕೊಂಡು, ಒಂದು ಕುಟುಂಬಕ್ಕೆ ಪ್ರತಿ ತಿಂಗಳು ಕನಿಷ್ಠ AED 20,000 ರಿಂದ 25,000 (ಸುಮಾರು ₹4.60 ಲಕ್ಷದಿಂದ ₹5.75 ಲಕ್ಷ) ಸಂಬಳ ಬೇಕಾಗುತ್ತದೆ. ಶಿಕ್ಷಣದ ಗುಣಮಟ್ಟ ಮತ್ತು ಜೀವನಶೈಲಿಯನ್ನು ಅವಲಂಬಿಸಿ ಈ ವೆಚ್ಚವು AED 30,000 (ಸುಮಾರು ₹6.90 ಲಕ್ಷ) ಮೀರಬಹುದು. ಇದು ದುಬೈನಲ್ಲಿ ಅತಿ ದೊಡ್ಡ ಖರ್ಚು. ಅಗ್ಗದ ಪ್ರದೇಶಗಳಲ್ಲಿ ಮನೆ ಮಾಡುವುದ್ದಾರೆ. AED 4,000 ದಿಂದ ಆರಂಭವಾಗಿ, ಪ್ರಮುಖ ಜಾಗಗಳಲ್ಲಿ ಫ್ಯಾಮಿಲಿ ಅಪಾರ್ಟ್‌ಮೆಂಟ್‌ಗಳಿಗೆ AED 15,000 ವರೆಗೂ ಬಾಡಿಗೆ ಇರುತ್ತದೆ.

Advertisement

ಇದನ್ನೂ ಓದಿ: ಫ್ಲೋರಿಡಾ ಗಾಲ್ಫ್​ ಕೋರ್ಸ್​​ನಲ್ಲಿ ಟ್ರಂಪ್ ಹತ್ಯೆಗೆ ಯತ್ನಿಸಿದ್ದ ವ್ಯಕ್ತಿಗೆ ಜೀವಾವಧಿ ಶಿಕ್ಷೆ

ಮಕ್ಕಳು ಇರುವವರಿಗೆ ಅತಿ ದೊಡ್ಡ ಖರ್ಚು ತಗಲುತ್ತದೆ. ಇಂಟರ್ನ್ಯಾಷನಲ್ ಸ್ಕೂಲ್ ಫೀಸ್ ಬಹಳ ಹೆಚ್ಚಾಗಿರುತ್ತದೆ.ದಿನಸಿ, ಸಾರಿಗೆ (ಟ್ರಾನ್ಸ್‌ಪೋರ್ಟ್) ಮತ್ತು ಆರೋಗ್ಯ ವಿಮೆಯ ವೆಚ್ಚಗಳೂ ಇಲ್ಲಿ ಗಣನೀಯವಾಗಿವೆ. ದುಬೈನಲ್ಲಿ ಆದಾಯ ತೆರಿಗೆ (Income Tax) ಇಲ್ಲದಿದ್ದರೂ, ಜೀವನ ವೆಚ್ಚವು ಬಹಳ ಹೆಚ್ಚಾಗಿದೆ. ಹಾಗಾಗಿ, ನೀವು ಕೆಲಸಕ್ಕಾಗಿ ದುಬೈಗೆ ಹೋಗಲು ಯೋಜಿಸುತ್ತಿದ್ದರೆ, ಕೇವಲ ಸಂಬಳದ ಅಂಕಿಅಂಶವನ್ನಷ್ಟೇ ನೋಡದೆ, ಅಲ್ಲಿನ ಮನೆ ಬಾಡಿಗೆ ಮತ್ತು ಇತರ ಜೀವನ ವೆಚ್ಚಗಳನ್ನು ಕಳೆದು ಕೈಗೆ ಎಷ್ಟು ಉಳಿಯುತ್ತದೆ ಎಂಬುದನ್ನು ಲೆಕ್ಕಾಚಾರ ಮಾಡುವುದು ಉತ್ತಮ.

Advertisement

ಮತ್ತಷ್ಟು ಸುದ್ದಿಗಳಿಗಾಗ ಇಲ್ಲಿ ಕ್ಲಿಕ್ ಮಾಡಿ

ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್:‌ 7353833811, ಇ-ಮೇಲ್-‌ g1newsdpt@gmail.com

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು