IPL: ಪಂಜಾಬ್‌ಗೆ ಸೋಲು, ರೋಚಕ ಪಂದ್ಯ ಗೆದ್ದ ಗುಜರಾತ್

ಅಹಮದಾಬಾದ್‌ನ ನರೇಂದ್ರಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 46ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವು ಪಂಜಾಬ್ ಕಿಂಗ್ಸ್ ವಿರುದ್ಧ 4 ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ತಂಡ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 163 ರನ್ ಗಳಿಸಿತು. ತಂಡದ ಪರ ಸೂರ್ಯಾನ್ಶ್ ಶೆಡ್ಗೆ 57 ರನ್ ಗಳಿಸಿ ಅಗ್ರಸ್ಕೋರರ್ ಆಗಿ ಮಿಂಚಿದರು.

Advertisement

ಮಾರ್ಕಸ್ ಸ್ಟೋಯ್ನಿಸ್ 40 ರನ್, ಮಾರ್ಕೊ ಜಾನ್ಸನ್ 20, ಶ್ರೇಯಸ್ ಅಯ್ಯರ್ 19, ಪ್ರಭ್‌ಸಿಮ್ರಾನ್ ಸಿಂಗ್ 15 ರನ್ ಗಳಿಸಿದರು. ಶ್ರೇಯಸ್ ಅಯ್ಯರ್ 19, ಪ್ರಿಯಾನ್ಶ್ ಆರ್ಯ 2, ವಿಜಯ್ ಕುಮಾರ್ ವೈಶಾಕ್ 1 (ಅಜೇಯ), ಅರ್ಶ್ದದೀಪ್ ಸಿಂಗ್ 1 (ಅಜೇಯ) ರನ್ ಗಳಿಸಿದರು. ಕೂಪರ್ ಕಾನೋಲಿ, ನೆಹಾಲ್ ವಧೇರಾ, ಜೇವಿಯರ್ ಬಾರ್ಟ್ಲೆಟ್ ಶೂನ್ಯಕ್ಕೆ ಔಟ್ ಆದರು.

ಗುಜರಾತ್ ಪರ ಜಾಸನ್ ಹೋಲ್ಡರ್ 4 ವಿಕೆಟ್ ಪಡೆದು ಮಿಂಚಿದರೆ, ಮೊಹಮ್ಮದ್ ಸಿರಾಜ್ ಮತ್ತು ಕಗಿಸೊ ರಬಡಾ ತಲಾ 2 ವಿಕೆಟ್ ಪಡೆದರು. ರಶೀದ್ ಖಾನ್ 1 ವಿಕೆಟ್ ಪಡೆದರು.

Advertisement

ಇದನ್ನೂ ಓದಿ: IPL: ಚಕ್ರವರ್ತಿ ಸ್ಪಿನ್ ಮಾಯಾಜಾಲ, ರಘುವಂಶಿ-ರಹಾನೆ ಜೊತೆಯಾಟ; ಎಸ್‌ಆರ್‌ಎಚ್ ವಿರುದ್ಧ ಗೆದ್ದ ಕೆಕೆಆರ್

164 ರನ್ ಗುರಿ ಬೆನ್ನಟ್ಟಿದ ಗುಜರಾತ್ ಟೈಟಾನ್ಸ್ ತಂಡ 19.5 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 167 ರನ್ ಗಳಿಸಿ ಗೆಲುವು ಸಾಧಿಸಿತು. ಸಾಯಿ ಸುದರ್ಶನ್ 57 ರನ್ ಗಳಿಸಿ ಉತ್ತಮ ಆರಂಭ ನೀಡಿದರು. ಜೋಸ್ ಬಟ್ಲರ್ 26 ರನ್, ನಿಶಾಂತ್ ಸಿಂಧು 15 ರನ್ ಗಳಿಸಿದರು.

ಅಂತಿಮ ಹಂತದಲ್ಲಿ ವಾಷಿಂಗ್ಟನ್ ಸುಂದರ್ ಅಜೇಯ 40 ರನ್‌ಗಳ ಸ್ಫೋಟಕ ಆಟವಾಡಿ ತಂಡಕ್ಕೆ ಗೆಲುವು ತಂದುಕೊಟ್ಟರು. ಅರ್ಶದ್ ಖಾನ್ 8 ರನ್‌ಗಳೊಂದಿಗೆ ಅಜೇಯರಾಗಿದ್ದರು. ರಾಹುಲ್ ಟಿವೇಟಿಯ ೨, ಜಾಸನ್ ಹೋಲ್ಡರ್ ೫ ರನ್ ಗಳಿಸಿದರು.

ಪಂಜಾಬ್ ಪರ ವಿಜಯ್ ಕುಮಾರ್ ವೈಶಾಕ್ ಮತ್ತು ಅರ್ಶದೀಪ್ ಸಿಂಗ್ ತಲಾ 2 ವಿಕೆಟ್ ಪಡೆದರೆ, ಮಾರ್ಕಸ್ ಸ್ಟೋಯ್ನಿಸ್ ಮತ್ತು ಮಾರ್ಕೊ ಜಾನ್ಸನ್ ತಲಾ 1 ವಿಕೆಟ್ ಪಡೆದರು. ಒಟ್ಟಾರೆ, ಕೊನೆಯ ಓವರ್ ತನಕ ಕುತೂಹಲ ಮೂಡಿಸಿದ ಈ ಪಂದ್ಯದಲ್ಲಿ ಸಮತೋಲನದ ಆಟದ ಮೂಲಕ ಗುಜರಾತ್ ಟೈಟಾನ್ಸ್ ತಂಡವು ಅಮೂಲ್ಯ ಜಯ ದಾಖಲಿಸಿತು.

ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು