Breaking News

Shocking: ಪಂಚಾಯ್ತಿ ಚುನಾವಣೆಗೆ ನಿಲ್ಲಲು ಮಗಳನ್ನೇ ಕೊಂದ ತಂದೆ

Triple murder case in Vijayanagar: 24-year-old accused arrested

ಮುಂಬೈ: ಮಹಾರಾಷ್ಟ್ರದಲ್ಲಿ ಮುಂಬರುವ ಪಂಚಾಯತ್‌ ಚುನಾವಣೆಯಲ್ಲಿ ಸ್ಪರ್ಧಿಸಲು ಇಬ್ಬರು ಮಕ್ಕಳ ನಿಯಮದಿಂದ ಹೊರಬರಲು ವ್ಯಕ್ತಿಯೋರ್ವ ತನ್ನ ಮೂವರು ಮಕ್ಕಳಲ್ಲಿ ಒಬ್ಬರನ್ನು ಹತ್ಯೆಗೈದಿದ್ದಾನೆ.

ಇದನ್ನೂ ಓದಿಚಡಚಣ: ಹೊತ್ತಿ ಉರಿದ ಸಕ್ಕರೆ ಕಾರ್ಖಾನೆ

Advertisement

ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಮುಖೇಡ್‌ ತಾಲೂಕಿನ ಕೆರೂರು ಗ್ರಾಮದ ನಿವಾಸಿ ಪಾಂಡುರಂಗ ಕೊಂಡಂಗಲೆ (28) ತನ್ನ 6 ವರ್ಷದ ಪುತ್ರಿಯನ್ನು ತೆಲಂಗಾಣದ ನಿಝಾಮಾಬಾದ್‌ ಜಿಲ್ಲೆಯ ಕಾಲುವೆಯೊಂದಕ್ಕೆ ತಳ್ಳಿ ಹತ್ಯೆಗೈದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ಪಾಂಡುರಂಗ ಹಾಗೂ ಗ್ರಾಮದ ಸರಪಂಚ ಗಣೇಶ್ ರಾಮಚಂದ್ರ ಶಿಂಧೆಯನ್ನು ಬಂಧಿಸಲಾಗಿದೆ ಎಂದು ನಿಝಾಮಾಬಾದ್‌ ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಕರಣ ಮಾಹಿತಿ:

ಕೆರೂರು ಗ್ರಾಮದಲ್ಲಿ ಕ್ಷೌರದ ಅಂಗಡಿ ನಡೆಸುತ್ತಿದ್ದ ಪಾಂಡುರಂಗ ಮುಂಬರುವ ಪಂಚಾಯತ್ ಚುನಾವಣೆಯ ಸ್ಪರ್ಧಿಸಲು ಉತ್ಸುಕನಾಗಿದ್ದ. ಆತನಿಗೆ 3 ವರ್ಷದ ಪುತ್ರ ಹಾಗೂ 6 ವರ್ಷದ ಅವಳಿ ಪುತ್ರಿಯರು ಇದ್ದರು. ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಇಬ್ಬರಿಗಿಂತ ಹೆಚ್ಚು ಮಕ್ಕಳಿರುವವರು ಸ್ಪರ್ದಿಸುವಂತಿಲ್ಲ. ಈ ನಿಯಮದ ಕಾರಣಕ್ಕೆ ಪಂಚಾಯತ್‌ ಚುನಾವಣೆಯಲ್ಲಿ ಸ್ಪರ್ಧಿಸಲು ಆತ ಅನರ್ಹನಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಆರಂಭದಲ್ಲಿ ಪಾಂಡುರಂಗ ಪುತ್ರಿಯನ್ನು ದತ್ತು ನೀಡಲು ಚಿಂತಿಸಿದ್ದ. ಆದರೆ, ಇದರಿಂದ ಆತನ ಉದ್ದೇಶ ಈಡೇರುವಂತಿರಲಿಲ್ಲ. ಯಾಕೆಂದರೆ, ಜನನ ಪ್ರಮಾಣ ಪತ್ರದಲ್ಲಿ ಪ್ರಾಚಿ ಆತನ ಪುತ್ರಿ ಎಂದು ನೋಂದಣಿಯಾಗಿತ್ತು.

ಪ್ರಾಚಿಯನ್ನು ತ್ಯಜಿಸುವ ಕುರಿತು ಕೂಡ ಪಾಂಡುರಂಗ ಯೋಚಿಸಿದ್ದ. ಆದರೆ, ಆಕೆ ಹಿಂದಿರುಗಿದರೆ ಉಂಟಾಗುವ ಪರಿಣಾಮಗಳ ಬಗ್ಗೆ ಆತ ಚಿಂತಿತನಾಗಿದ್ದ. ಅನಂತರ ಆತ ಪ್ರಾಚಿಯನ್ನು ಹತ್ಯೆಗೈದು, ಅಪಘಾತವೆಂದು ಬಿಂಬಿಸಲು ನಿರ್ಧರಿಸಿದ.

ಮತ್ತಷ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್:‌ 7353833811, ಇ-ಮೇಲ್-‌ g1newsdpt@gmail.com

News Source : G1 News

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು