Breaking News

ಸುರತ್ಕಲ್‌ನಲ್ಲಿ ರೈಲ್ವೆ ಸಿಬ್ಬಂದಿಯ ಸಾಹಸ: ಚಲಿಸುವ ರೈಲಿನಿಂದ ಬಿದ್ದ ಪ್ರಯಾಣಿಕನ ಜೀವ ಉಳಿಸಿದ ಪಾಯಿಂಟ್ಸ್‌ಮ್ಯಾನ್

ಮಂಗಳೂರು: ಸುರತ್ಕಲ್ ರೈಲು ನಿಲ್ದಾಣದಲ್ಲಿ ಸಮಯೋಚಿತವಾಗಿ ಕಾರ್ಯನಿರ್ವಹಿಸಿದ ರೈಲ್ವೆ ಪಾಯಿಂಟ್ಸ್‌ಮ್ಯಾನ್‌ ಒಬ್ಬರು ಚಲಿಸುತ್ತಿದ್ದ ರೈಲನ್ನು ಹತ್ತಲು ಹೋಗಿ ಹಳಿಗಳ ಮೇಲೆ ಬಿದ್ದ ಪ್ರಯಾಣಿಕನ ಪ್ರಾಣವನ್ನು ಸಾಹಸಿಕವಾಗಿ ಉಳಿಸಿದ್ದಾರೆ. ಸೋಮವಾರ ಬೆಳಿಗ್ಗೆ ಸುಮಾರು 11 ಗಂಟೆಯ ವೇಳೆಗೆ ಈ ಘಟನೆ ಸಂಭವಿಸಿದೆ.

ಮುಂಬೈನಿಂದ ಮಂಗಳೂರಿಗೆ ತೆರಳುತ್ತಿದ್ದ ರೈಲು ಸುರತ್ಕಲ್ ನಿಲ್ದಾಣದಲ್ಲಿ ನಿಂತಿದ್ದಾಗ, ಪ್ರಯಾಣಿಕರೊಬ್ಬರು ನಿಲ್ದಾಣದ ಅಂಗಡಿಗೆ ತೆರಳಲು ಕೆಳಗಿಳಿದಿದ್ದರು. ಇತ್ತ ರೈಲು ಹೊರಡಲು ಶುರುಮಾಡಿದ್ದನ್ನು ಕಂಡು ಗಾಬರಿಗೊಂಡ ಪ್ರಯಾಣಿಕ, ಓಡಿಬಂದು ಚಲಿಸುತ್ತಿದ್ದ ರೈಲನ್ನು ಹತ್ತಲು ಯತ್ನಿಸಿದ್ದಾರೆ. ಈ ವೇಳೆ ಕಾಲು ಜಾರಿ ನಿಯಂತ್ರಣ ತಪ್ಪಿ, ಅಪಾಯಕಾರಿಯಾಗಿ ರೈಲಿನ ಚಕ್ರಗಳ ಸಮೀಪದಲ್ಲೇ ಹಳಿಗಳ ಮೇಲೆ ಬಿದ್ದಿದ್ದಾರೆ.

ಇದನ್ನೂ ಓದಿ: ಜಿಲ್ಲಾಮಟ್ಟದ ಪ್ರಬಂಧ ಸ್ಪರ್ಧೆ: ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಬಹುಮಾನ

ಇಲ್ಲಿದೆ ನೋಡಿ:

ಆ ಸಮಯದಲ್ಲಿ ನಿಲ್ದಾಣದಲ್ಲಿ ಕರ್ತವ್ಯದಲ್ಲಿದ್ದ ಪಾಯಿಂಟ್ಸ್‌ಮ್ಯಾನ್ ಸಂದೀಪ್ ನಾಯಕ್ ಅವರು ಇದನ್ನು ತಕ್ಷಣವೇ ಗಮನಿಸಿದ್ದಾರೆ. ಕ್ಷಣಾರ್ಧದಲ್ಲೇ ಕಾರ್ಯಪ್ರವೃತ್ತರಾದ ಅವರು, ಹಳಿಯ ಬಳಿಗೆ ಓಡಿಬಂದು ಬಿದ್ದಿದ್ದ ವ್ಯಕ್ತಿಯನ್ನು ಭರದಿಂದ ಹಿಂದಕ್ಕೆ ಎಳೆದು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ. ಪಾಯಿಂಟ್ಸ್‌ಮ್ಯಾನ್ ಸಂದೀಪ್ ನಾಯಕ್ ಅವರ ಈ ಕ್ಷಿಪ್ರ ಸಮಯಪ್ರಜ್ಞೆ ಹಾಗೂ ಸಾಹಸಕ್ಕೆ ರೈಲ್ವೆ ಇಲಾಖೆಯ ಮೇಲಧಿಕಾರಿಗಳು ಹಾಗೂ ಸ್ಥಳೀಯ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *