‘ಹಲೋ ಗೆಳೆಯರೇ’ ಲೈವ್ ಕಾರ್ಯಕ್ರಮದಲ್ಲಿ ಪುತ್ತೂರಿನ ವಕೀಲ ಕೃಷ್ಣಪ್ರಸಾದ್ ನಡ್ಸಾರ್: ಮಾನವ ಕಳ್ಳಸಾಗಾಣಿಕೆ ತಡೆ ಕುರಿತು ಕಾನೂನು ಮಾಹಿತಿ

ಪುತ್ತೂರು: ದೂರದರ್ಶನದ ಪ್ರಸಿದ್ಧ ಡಿ.ಡಿ. ಚಂದನ ವಾಹಿನಿಯ ‘ಹಲೋ ಗೆಳೆಯರೇ’ ಲೈವ್ ಫೋನ್-ಇನ್ ಕಾರ್ಯಕ್ರಮದಲ್ಲಿ ಪುತ್ತೂರಿನ ಖ್ಯಾತ ವಕೀಲರು ಹಾಗೂ ಕಾನೂನು ತರಬೇತುದಾರರಾದ ಕೃಷ್ಣಪ್ರಸಾದ್ ನಡ್ಸಾರ್ ಅವರು ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಈ ನೇರಪ್ರಸಾರ ಕಾರ್ಯಕ್ರಮವು ಜುಲೈ 30 (ಗುರುವಾರ) ಮಧ್ಯಾಹ್ನ 12:00 ರಿಂದ 1:00 ಗಂಟೆಯವರೆಗೆ ಪ್ರಸಾರವಾಗಲಿದೆ. ಮಾನವ ಕಳ್ಳಸಾಗಾಣಿಕೆ ತಡೆ ಕುರಿತಾದ ಕಾನೂನು ಜಾಗೃತಿ ಮತ್ತು ಮಾಹಿತಿ.

ವೀಕ್ಷಕರಿಗೆ ನೇರ ಕರೆ ಮಾಡಿ ಪ್ರಶ್ನಿಸಲು ಅವಕಾಶ!

ಸಾಮಾಜಿಕ, ಶೈಕ್ಷಣಿಕ ಹಾಗೂ ಕಾನೂನು ವಿಷಯಗಳ ಕುರಿತು ಜಾಗೃತಿ ಮೂಡಿಸುವ ಈ ಕಾರ್ಯಕ್ರಮದಲ್ಲಿ ವೀಕ್ಷಕರು ನೇರವಾಗಿ ಕರೆ ಮಾಡಿ ತಮ್ಮ ಸಂಶಯಗಳನ್ನು ಪರಿಹರಿಸಿಕೊಳ್ಳಬಹುದು.

ಪುತ್ತೂರಿನ ಅನಿಕೇತನ ಎಜುಕೇಶನಲ್ ಟ್ರಸ್ಟ್ (ರಿ.) ಇದರ ಆಡಳಿತ ಟ್ರಸ್ಟಿಯಾಗಿರುವ ಕೃಷ್ಣಪ್ರಸಾದ್ ನಡ್ಸಾರ್ ಅವರು ಕಾನೂನು ಮತ್ತು ಕೌಶಲ್ಯ ತರಬೇತುದಾರರಾಗಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಪುತ್ತೂರು ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಕರ್ನಾಟಕ ಪತ್ರಕರ್ತರ ಸಂಘ ಹಾಗೂ ವಿವಿಧ ಸೇವಾ ಸಂಸ್ಥೆಗಳ ಸಹಯೋಗದೊಂದಿಗೆ ವಿದ್ಯಾರ್ಥಿಗಳು, ಪೋಷಕರು ಮತ್ತು ಮಹಿಳಾ ಸಂಘಟನೆಗಳಿಗೆ ನೂರಾರು ತರಬೇತಿ ಸಪ್ತಾಹಗಳನ್ನು ನಡೆಸಿದ್ದಾರೆ.

ಇದನ್ನೂ ಓದಿ: ಸಂಸದರಾದ್ರೂ ಬಿಗುವಿಲ್ಲ, ಸಾಮಾನ್ಯ ಪ್ರಜೆಯ ಕರೆಗೆ ಸ್ಪಂದನೆ: ರಾಜಕೀಯ ಕ್ಷೇತ್ರದಲ್ಲಿ ನೈಜ ಭರವಸೆ ಕೋಟ

ಬೆಂಗಳೂರು ಆಕಾಶವಾಣಿ ಮೂಲಕವೂ ಸಾರ್ವಜನಿಕರಿಗೆ ಕಾನೂನು ಸಾಕ್ಷರತೆ ನೀಡುವ ಹಲವು ಕಾರ್ಯಕ್ರಮಗಳನ್ನು ನೀಡಿದ ಅನುಭವ ಹೊಂದಿದ್ದಾರೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *