Breaking News

Puttur: ಪ್ರಗತಿ ಸ್ಟಡಿ ಸೆಂಟರ್, ಶ್ರೀ ಪ್ರಗತಿ ವಿಸ್ತಾರ ಏವಿಯೇಷನ್‌ ಕಾಲೇಜಿನ ಬ್ಯಾನರ್ ಗಳಿಗೆ ಹಾನಿ: ಪ್ರಕರಣ ದಾಖಲು

ಪುತ್ತೂರು : ಮುಖ್ಯ ರಸ್ತೆಯಲ್ಲಿರುವ ಪ್ರಗತಿ ಸ್ಟಡಿ ಸೆಂಟರ್ ಮತ್ತು ಶ್ರೀ ಪ್ರಗತಿ ವಿಸ್ತಾರ ಕಾಲೇಜ್ ಫಾರ್ ಏವಿಯೇಷನ್‌ ಆಂಡ್ ಮ್ಯಾನೇಜ್ಮೆಂಟ್ ಕಾಲೇಜಿನ ಪ್ರಚಾರದ ಬ್ಯಾನರ್ ಗಳನ್ನು ಕಿಡಿಗೇಡಿಗಳು ಟಾರ್ಗೆಟ್ ಮಾಡಿ ಹರಿದು ಹಾಕುತ್ತಿರುವ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪುತ್ತೂರು ಕೆಎಸ್ಆರ್ ಟಿಸಿ ಬಸ್ ನಿಲ್ದಾಣದ ಪಿಲ್ಲರ್ ಗಳ ಮೇಲೆ ಪ್ರಗತಿ ಶಿಕ್ಷಣ ಸಂಸ್ಥೆಗಳ ಜಾಹೀರಾತು ಫ್ಲೆಕ್ಸ್ ಗಳನ್ನು ಅಳವಡಿಸಲಾಗಿತ್ತು. ಜ.10 ರಂದು ಕಿಡಿಗೇಡಿಗಳು ಹಾನಿಗೊಳಿಸಿದ್ದಾಗಿ ದೂರಿನಲ್ಲಿ ಆರೋಪಿಸಲಾಗಿದೆ.

ಬಸ್ ನಿಲ್ದಾಣದಲ್ಲಿ ಪ್ರಗತಿ ಸ್ಟಡಿ ಸೆಂಟರ್ ಮತ್ತು ಶ್ರೀ ಪ್ರಗತಿ ವಿಸ್ತಾರ ಕಾಲೇಜ್ ಫಾರ್ ಏವಿಯೇಷನ್‌ ಆಂಡ್ ಮ್ಯಾನೇಜ್ಮೆಂಟ್ ಕಾಲೇಜಿನ ಒಟ್ಟು ಆರು ಬ್ಯಾನರ್ ಗಳನ್ನು ಅಳವಡಿಸಲಾಗಿತ್ತು. ಈ ಪೈಕಿ ಎರಡು ಬೋರ್ಡ್ ಗಳಲ್ಲಿನ ವಿದ್ಯಾರ್ಥಿಗಳ ಫೋಟೋಗಳನ್ನು ಕತ್ತರಿಸಿ ಹಾನಿಗೊಳಿಸಿದ್ದಾರೆ. ನಿಯಮಾನುಸಾರವಾಗಿ ಬಸ್ ನಿಲ್ದಾಣದಲ್ಲಿ ಪ್ರಚಾರದ ಬೋರ್ಡ್ ಗಳನ್ನು ಅಳವಡಿಸಲಾಗಿದೆ. ಈ ರೀತಿ ಹಾನಿಗೊಳಿಸುತ್ತಿರುವುದರಿಂದ ಆರ್ಥಿಕ ನಷ್ಟದೊಂದಿಗೆ ಜಾಹೀರಾತಿನ ಉದ್ದೇಶ ವ್ಯರ್ಥವಾಗಿದೆ. ಈ ಬಗ್ಗೆ ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪ್ರಗತಿ ಸ್ಟಡಿ ಸೆಂಟರ್ ಪ್ರಾಂಶುಪಾಲೆ ಕೆ.ಹೇಮಲತಾ ಅವರು ದೂರಿನಲ್ಲಿ ಮನವಿ ಮಾಡಿದ್ದಾರೆ.

Advertisement

ಇದನ್ನೂ ಓದಿ : India : 114 ರೆಫೆಲ್ ಯುದ್ದ ವಿಮಾನ ತಯಾರಿಕೆ ಒಪ್ಪಂದ, ಕಠಿಣ ಷರತ್ತು ವಿಧಿಸಿದ ಭಾರತ

ಕಳೆದ ವರ್ಷವೂ ಇದೇ ರೀತಿ ಹಾನಿಗೊಳಿಸಲಾಗಿದೆ. ಒಟ್ಟು ಮೂರು ಬಾರಿ ಜಾಹೀರಾತು ಬೋರ್ಡ್ ಗಳನ್ನು ಹಾನಿಗೊಳಿಸಲಾಗಿದ್ದು, ಅದರಲ್ಲೂ ಪ್ರಗತಿ ಸ್ಟಡಿ ಸೆಂಟರ್ ಮತ್ತು ಶ್ರೀ ಪ್ರಗತಿ ವಿಸ್ತಾರ ಕಾಲೇಜ್ ಫಾರ್ ಏವಿಯೇಷನ್‌ ಆಂಡ್ ಮ್ಯಾನೇಜ್ಮೆಂಟ್ ಕಾಲೇಜಿನ ಬ್ಯಾನರ್ ಗಳನ್ನೇ ಕಿಡಿಗೇಡಿಗಳು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಪ್ರಗತಿ ಸ್ಟಡಿ ಸೆಂಟರ್ ಸಂಸ್ಥಾಪಕ ಪಿ.ವಿ.ಗೋಕುಲನಾಥ್ ಆರೋಪಿಸಿದ್ದಾರೆ.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್:‌ 7353833811, ಇ-ಮೇಲ್-‌ g1newsdpt@gmail.com

News Source : G1 News

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು