ಪುತ್ತೂರು: ಗ್ಯಾಸ್ ಅಭಾವ; ಸಂಪ್ಯದಲ್ಲಿ ಆಟೋ ರಿಕ್ಷಾಗಳ ಕಿಲೋಮೀಟರ್ ಉದ್ದದ ಸರತಿ ಸಾಲು!

ಪುತ್ತೂರು, ಏಪ್ರಿಲ್ 03: ಇಂಧನ ಕೊರತೆಯ ಬಿಸಿ ಇದೀಗ ಪುತ್ತೂರಿನ ಆಟೋ ರಿಕ್ಷಾ ಚಾಲಕರಿಗೆ ತಟ್ಟಿದೆ. ತಾಲೂಕಿನ ಸಂಪ್ಯದಲ್ಲಿರುವ ಗ್ಯಾಸ್ ಪಂಪ್‌ನಲ್ಲಿ ಗ್ಯಾಸ್ ಅಭಾವ ಉಂಟಾಗಿದ್ದು, ರಿಕ್ಷಾಗಳಿಗೆ ಗ್ಯಾಸ್ ತುಂಬಿಸಿಕೊಳ್ಳಲು ಚಾಲಕರು ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಶುಕ್ರವಾರ ಬೆಳಗ್ಗಿನಿಂದಲೇ ಸಂಪ್ಯ ಗ್ಯಾಸ್ ಸ್ಟೇಷನ್ ಬಳಿ ಆಟೋಗಳು ಸಾಲುಗಟ್ಟಿ ನಿಂತಿರುವ ದೃಶ್ಯ ಕಂಡುಬಂದಿತು. ಗ್ಯಾಸ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿರುವ ಹಿನ್ನೆಲೆಯಲ್ಲಿ ಈ ಸಮಸ್ಯೆ ಎದುರಾಗಿದೆ ಎಂದು ಹೇಳಲಾಗುತ್ತಿದ್ದು, ಇದರಿಂದ ದೈನಂದಿನ ಬಾಡಿಗೆ ನಂಬಿಕೊಂಡಿರುವ ರಿಕ್ಷಾ ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಾಡಿಗೆ ಇಲ್ಲದೆ ಗ್ಯಾಸ್‌ಗಾಗಿ ಸರತಿ ಸಾಲಿನಲ್ಲಿ ನಿಲ್ಲುವಂತಾಗಿರುವುದು ಚಾಲಕರ ಆಕ್ರೋಶಕ್ಕೆ ಕಾರಣವಾಗಿದೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು