Breaking News

ರಾಷ್ಟ್ರಮಟ್ಟದ ಈಜು ಸ್ಪರ್ಧೆಗೆ ಪುತ್ತೂರಿನ ನೆಲ್ಲಿಕಟ್ಟೆ ಅಂಬಿಕಾ ಪಿಯು ಕಾಲೇಜು ವಿದ್ಯಾರ್ಥಿಗಳು ಆಯ್ಕೆ

ಪುತ್ತೂರು: ವಿದ್ಯಾ ಭಾರತಿ ವತಿಯಿಂದ ಬೆಂಗಳೂರಿನ ಆರ್‌ವಿ ಕೆ ಬನಶಂಕರಿಯಲ್ಲಿ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಈಜು ಸ್ಪರ್ಧೆಯಲ್ಲಿ ಪುತ್ತೂರಿನ ನಟ್ಟೋಜ ಫೌಂಡೇಶನ್ ಮುನ್ನಡೆಸುತ್ತಿರುವ ನೆಲ್ಲಿಕಟ್ಟೆ ಅಂಬಿಕಾ ಪದವಿ ಪೂರ್ವ ವಿದ್ಯಾಲಯದ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡುವ ಮೂಲಕ ರಾಷ್ಟ್ರಮಟ್ಟದ ಈಜು ಸ್ಪರ್ಧೆಗೆ ಅರ್ಹತೆ ಪಡೆದುಕೊಂಡಿದ್ದಾರೆ.

ವಿದ್ಯಾರ್ಥಿಗಳ ಸಾಧನೆ:

ಸಮೃದ್ಧ್ ಎಲ್. ಶೆಟ್ಟಿ (ಪ್ರಥಮ ಪಿಯುಸಿ):

200 ಮೀ. ಬ್ಯಾಕ್ ಸ್ಟ್ರೋಕ್ – ಪ್ರಥಮ ಸ್ಥಾನ

100 ಮೀ. ಬ್ಯಾಕ್ ಸ್ಟ್ರೋಕ್ – ಪ್ರಥಮ ಸ್ಥಾನ

100 ಮೀ. ಫ್ರೀ ಸ್ಟೈಲ್ – ದ್ವಿತೀಯ ಸ್ಥಾನ

400 ಮೀ. ಫ್ರೀ ಸ್ಟೈಲ್ – ದ್ವಿತೀಯ ಸ್ಥಾನ

400 ಮೀ. ಮಿಡ್ಲೆ – ದ್ವಿತೀಯ ಸ್ಥಾನ

ಲಾಸ್ಯ ಸಂತೋಷ್ (ಪ್ರಥಮ ಪಿಯುಸಿ):

100 ಮೀ. ಬಟರ್ ಫ್ಲೈ – ಬೆಳ್ಳಿ ಪದಕ

100 ಮೀ. ಬ್ಯಾಕ್ ಸ್ಟ್ರೋಕ್ – ಬೆಳ್ಳಿ ಪದಕ

50 ಮೀ. ಬ್ರೆಸ್ಟ್ ಸ್ಟ್ರೋಕ್ – ಕಂಚಿನ ಪದಕ

ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ವಿವಿಧ ವಿಭಾಗಗಳಲ್ಲಿ ಪದಕಗಳನ್ನು ಬಾಚಿಕೊಂಡಿರುವ ಇಬ್ಬರೂ ವಿದ್ಯಾರ್ಥಿಗಳು ಇದೀಗ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದು, ಕಾಲೇಜು ಹಾಗೂ ತಾಲೂಕಿಗೆ ಕೀರ್ತಿ ತಂದಿದ್ದಾರೆ.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *