ಕಲಾ ಲೋಕದ ದಾಖಲೆ: 167 ಕೋಟಿ ರೂಪಾಯಿಗೆ ಹರಾಜಾದ ರಾಜಾ ರವಿವರ್ಮ ಅವರ ‘ಯಶೋದಾ ಮತ್ತು ಕೃಷ್ಣ’ ಕಲಾಕೃತಿ!

ಮುಂಬೈ: ಭಾರತದ ಖ್ಯಾತ ಚಿತ್ರಕಲಾವಿದ ರಾಜಾ ರವಿವರ್ಮ ಅವರ ಕುಂಚದಲ್ಲಿ ಅರಳಿದ ಅದ್ಭುತ ಕಲಾಕೃತಿ ‘ಯಶೋದಾ ಮತ್ತು ಕೃಷ್ಣ’ (Yashoda and Krishna) ಹರಾಜಿನಲ್ಲಿ ಭಾರಿ ಮೊತ್ತಕ್ಕೆ ಮಾರಾಟವಾಗುವ ಮೂಲಕ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಮುಂಬೈನಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಈ ಪೇಂಟಿಂಗ್ ದಾಖಲೆಯ 167 ಕೋಟಿ ರೂಪಾಯಿಗಳಿಗೆ ಮಾರಾಟವಾಗಿದೆ.

ಈ ಕಲಾಕೃತಿಯನ್ನು ಖರೀದಿಸಲು ಕಲಾ ಪ್ರೇಮಿಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಅಂತಿಮವಾಗಿ ನಿರೀಕ್ಷಿತ ಮೊತ್ತಕ್ಕಿಂತಲೂ ಹೆಚ್ಚಿನ ಬೆಲೆಗೆ ಇದು ಹರಾಜಾಗಿದೆ.ಈ ಚಿತ್ರವು ತಾಯಿ ಯಶೋದಾ ಮತ್ತು ಬಾಲಕೃಷ್ಣನ ನಡುವಿನ ವಾತ್ಸಲ್ಯವನ್ನು ಅತ್ಯಂತ ಮನಮೋಹಕವಾಗಿ ಚಿತ್ರಿಸಿದೆ. ರಾಜಾ ರವಿವರ್ಮ ಅವರ ಶೈಲಿಯು ಪಾಶ್ಚಾತ್ಯ ಶೈಲಿ ಮತ್ತು ಭಾರತೀಯ ಸಂಸ್ಕೃತಿಯ ಅಪೂರ್ವ ಸಮ್ಮಿಲನಕ್ಕೆ ಹೆಸರಾಗಿದೆ.

Advertisement

ಇದನ್ನೂ ಓದಿ: ಪ್ರಾಣಿ ಪ್ರೇಮಕ್ಕೆ ಸಾಕ್ಷಿಯಾದ ಅಪರೂಪದ ಘಟನೆ: ಅಜ್ಜಿಯ ಅಗಲಿಕೆಗೆ ಕಂಬನಿ ಮಿಡಿದ ಮಂಗ!

ಇತ್ತೀಚಿನ ವರ್ಷಗಳಲ್ಲಿ ಭಾರತೀಯ ಐತಿಹಾಸಿಕ ಕಲಾಕೃತಿಗಳಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಬರುತ್ತಿದ್ದು, ರವಿವರ್ಮ ಅವರ ಚಿತ್ರಗಳು ಸಾರ್ವಕಾಲಿಕ ದಾಖಲೆ ಬರೆಯುತ್ತಿವೆ.ಟ್ರಾನ್ಸ್‌ಕೋರ್‌ನ ರಾಜಮನೆತನಕ್ಕೆ ಸೇರಿದ ರಾಜಾ ರವಿವರ್ಮ ಅವರು ಭಾರತೀಯ ಪುರಾಣದ ಪಾತ್ರಗಳಿಗೆ ದೈವಿಕ ರೂಪ ನೀಡಿದವರು. ಅವರ ಕಲಾಕೃತಿಗಳು ಸಾಮಾನ್ಯ ಜನರ ಮನೆಗಳನ್ನೂ ತಲುಪಿವೆ. ಈಗ ಹರಾಜಾಗಿರುವ ಈ ಚಿತ್ರವು ಅವರ ಅತ್ಯುತ್ತಮ ಕಲಾಕೃತಿಗಳಲ್ಲಿ ಒಂದೆಂದು ಪರಿಗಣಿತವಾಗಿದೆ.

Advertisement

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Advertisement

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು