ಅಂಕೋಲಾದಲ್ಲಿ ಮಾನವೀಯತೆ ಮೆರೆದ ಯುವಕರು: ಮೀನಿನ ಬಲೆಗೆ ಸಿಲುಕಿದ್ದ ಕಡಲಾಮೆಗೆ ಮರುಜೀವ!

ಕಾರವಾರ: ಮೀನಿನ ಬಲೆಗೆ ಸಿಲುಕಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಬೃಹತ್ ಕಡಲಾಮೆಯೊಂದನ್ನು (Sea Turtle) ಸಮಯೋಚಿತವಾಗಿ ರಕ್ಷಿಸಿ, ಸುರಕ್ಷಿತವಾಗಿ ಸಮುದ್ರಕ್ಕೆ ಬಿಡುವ ಮೂಲಕ ಸ್ಥಳೀಯ ಯುವಕರು ಮಾನವೀಯತೆ ಮೆರೆದಿರುವ ಪ್ರಶಂಸನೀಯ ಘಟನೆ ಅಂಕೋಲಾ ತಾಲೂಕಿನ ನದಿಬಾಗ ಸಮುದ್ರ ತೀರದಲ್ಲಿ ನಡೆದಿದೆ.

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ನದಿಬಾಗ ಕಡಲತೀರಕ್ಕೆ ತೇಲಿ ಬಂದಿದ್ದ ಕಡಲಾಮೆಯೊಂದು ಬಲವಾಗಿ ಮೀನಿನ ಬಲೆಗೆ ಸಿಲುಕಿಕೊಂಡಿತ್ತು. ಬಲೆಯಿಂದ ಬಿಡಿಸಿಕೊಳ್ಳಲಾಗದೆ, ಅಸಹಾಯಕ ಸ್ಥಿತಿಯಲ್ಲಿ ಕಡಲತೀರದಲ್ಲಿದ್ದ ಆಮೆಯನ್ನು ಗಮನಿಸಿದ ಸ್ಥಳೀಯ ಯುವಕರು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದಾರೆ.

ಸ್ಥಳೀಯ ಯುವಕರ ತಂಡವು ಎಚ್ಚರಿಕೆಯಿಂದ ಕಡಲಾಮೆಗೆ ಯಾವುದೇ ರೀತಿಯ ಗಾಯವಾಗದಂತೆ ಬಲೆಯನ್ನು ಕತ್ತರಿಸಿ, ಅದನ್ನು ಬಲೆಯಿಂದ ಮುಕ್ತಗೊಳಿಸಿದೆ. ಬಳಿಕ ಆಮೆಯನ್ನು ಸುರಕ್ಷಿತವಾಗಿ ಮತ್ತೆ ಸಮುದ್ರದ ನೀರಿಗೆ ಬಿಡಲಾಯಿತು.

ಇದನ್ನೂ ಓದಿ:ಪ್ರಯಾಣಿಕರ ಗಮನಕ್ಕೆ.. ಉಡುಪಿ, ಮಂಗಳೂರು, ಕಾರವಾರಕ್ಕೂ ಬರುತ್ತೆ ಈ ವಿಶೇಷ ರೈಲು

ಸಮಯೋಚಿತವಾಗಿ ಸ್ಪಂದಿಸಿ ಕಡಲಾಮೆಯ ಜೀವ ಉಳಿಸಿದ ಯುವಕರ ಈ ಕಾರ್ಯಕ್ಕೆ ಸಾರ್ವಜನಿಕರಿಂದ ಹಾಗೂ ಪರಿಸರ ಪ್ರೇಮಿಗಳಿಂದ ವ್ಯಾಪಕ ಶ್ಲಾಘನೆ ಮತ್ತು ಪ್ರಶಂಸೆ ವ್ಯಕ್ತವಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *