ಅಹಮದಾಬಾದ್: 2026ರ ಟಿ20 ವಿಶ್ವಕಪ್ ಫೈನಲ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಚಾರಿತ್ರಿಕ ಜಯ ಸಾಧಿಸಿದೆ. ಆದರೆ, ಈ ಮಹತ್ವದ ಪಂದ್ಯಕ್ಕೂ ಮುನ್ನವೇ ಯುವ ಬ್ಯಾಟರ್ ಇಶಾನ್ ಕಿಶನ್ ತಮ್ಮ ಬದುಕಿನ ಅತಿದೊಡ್ಡ ಆಘಾತವನ್ನು ಅನುಭವಿಸಿದ್ದರು. ಫೈನಲ್ ಪಂದ್ಯ ಆರಂಭವಾಗುವ ಕೆಲವೇ ಗಂಟೆಗಳ ಮೊದಲು ಇಶಾನ್ ಅವರ ಸಹೋದರಿ ನಿಧನರಾಗಿದ್ದರು ಎಂಬ ಹೃದಯವಿದ್ರಾವಕ ವಿಷಯ ಈಗ ಬೆಳಕಿಗೆ ಬಂದಿದೆ.
ಸಹೋದರಿಯ ಅಗಲಿಕೆಯ ಸುದ್ದಿ ತಿಳಿದರೂ, ಕುಗ್ಗದೆ ಮೈದಾನಕ್ಕಿಳಿದ ಇಶಾನ್ ಕಿಶನ್ 23 ಎಸೆತಗಳಲ್ಲಿ 54 ರನ್ ಚಚ್ಚುವ ಮೂಲಕ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಪಂದ್ಯದ ನಂತರ ಮಾತನಾಡಿದ ಅವರು ತಮ್ಮ ನೋವನ್ನು ತೋಡಿಕೊಂಡಿದ್ದಾರೆ.”ನನ್ನ ಸಹೋದರಿ ನಾನು ವಿಶ್ವಕಪ್ ಎತ್ತಿ ಹಿಡಿಯಬೇಕು ಎಂಬ ದೊಡ್ಡ ಕನಸು ಕಂಡಿದ್ದಳು. ಆದರೆ ಇಂದು ಆ ಸಂಭ್ರಮವನ್ನು ನೋಡಲು ಅವಳಿಲ್ಲ. ಈ ಗೆಲುವನ್ನು ನಾನು ಅವಳಿಗಾಗಿ ಅರ್ಪಿಸುತ್ತೇನೆ” ಎಂದು ಇಶಾನ್ ಭಾವುಕರಾಗಿ ನುಡಿದರು.

ಇದನ್ನೂ ಓದಿ: “ನಾವು ಕೇವಲ ಕೀನ್ಯಾ, ಉಗಾಂಡ ಸೋಲಿಸಿದ್ದೇವೆ ಅಷ್ಟೇ”: ಭಾರತದ ವಿಶ್ವಕಪ್ ಗೆಲುವಿನ ಬೆನ್ನಲ್ಲೇ ಪಾಕ್ ಕ್ರಿಕೆಟಿಗನ ಆಕ್ರೋಶ!
ವೈಯಕ್ತಿಕ ದುಃಖವನ್ನು ಬದಿಗಿಟ್ಟು ದೇಶಕ್ಕಾಗಿ ಆಡಿದ ಇಶಾನ್ ಅವರ ಈ ಗುಣಕ್ಕೆ ಕ್ರಿಕೆಟ್ ಲೋಕದ ಗಣ್ಯರು ಮತ್ತು ಅಭಿಮಾನಿಗಳು ಸಲಾಂ ಎನ್ನುತ್ತಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

