ಬೆಂಗಳೂರು: ಬಹುನಿರೀಕ್ಷಿತ ಐಪಿಎಲ್ 2026 ಸರಣಿಯು ಮಾರ್ಚ್ 28 ರಿಂದ ಆರಂಭವಾಗಲಿದ್ದು, ಮೊದಲ ಪಂದ್ಯದಲ್ಲೇ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಸೆಣಸಲಿರುವ ಆರ್ಸಿಬಿ ತಂಡಕ್ಕೆ ಈಗ ಹಿನ್ನಡೆಯಾಗಿದೆ. ತಂಡದ ಪ್ರಬಲ ವೇಗದ ಅಸ್ತ್ರ ಜೋಶ್ ಹೇಝಲ್ವುಡ್ ಗಾಯದ ಕಾರಣದಿಂದಾಗಿ ಮೊದಲ ಕೆಲವು ಪಂದ್ಯಗಳನ್ನು ಆಡುವುದಿಲ್ಲ ಎಂಬುದು ಖಚಿತವಾಗಿದೆ.
ಹೇಝಲ್ವುಡ್ ಅವರು ಕಾಲಿನ ಹಿಮ್ಮಡಿಯ ಗಾಯದಿಂದ (Achilles tendonitis) ಬಳಲುತ್ತಿದ್ದಾರೆ. ಇದೇ ಕಾರಣದಿಂದಾಗಿ ಅವರು ಈ ಹಿಂದಿನ ಟಿ20 ವಿಶ್ವಕಪ್ನಿಂದಲೂ ಹೊರಗುಳಿದಿದ್ದರು.ಮೊದಲ ಹಂತದಲ್ಲಿ ಆರ್ಸಿಬಿ ಆಡಲಿರುವ ಸನ್ರೈಸರ್ಸ್ ಹೈದರಾಬಾದ್, ಮುಂಬೈ ಇಂಡಿಯನ್ಸ್, ರಾಜಸ್ಥಾನ್ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯಗಳಲ್ಲಿ ಹೇಝಲ್ವುಡ್ ಕಾಣಿಸಿಕೊಳ್ಳುವುದಿಲ್ಲ.

ಇದನ್ನೂ ಓದಿ: ಸನ್ರೈಸರ್ಸ್ ಲೀಡ್ಸ್ನಿಂದ ಅಬ್ರಾರ್ ಅಹ್ಮದ್ ಔಟ್? ಸ್ಟಾರ್ ಸ್ಪಿನ್ನರ್ ಬಿಡುಗಡೆಗೆ ಸಿದ್ಧವಾಯ್ತಾ ಫ್ರಾಂಚೈಸಿ?
ಏಪ್ರಿಲ್ ಎರಡನೇ ವಾರದೊಳಗೆ ಅವರು ಸಂಪೂರ್ಣ ಫಿಟ್ನೆಸ್ ಸಾಧಿಸಿದರೆ ಮಾತ್ರ ತಂಡವನ್ನು ಸೇರಿಕೊಳ್ಳಲಿದ್ದಾರೆ. ಅಲ್ಲಿಯವರೆಗೆ ಅವರ ಲಭ್ಯತೆಯ ಬಗ್ಗೆ ಅನಿಶ್ಚಿತತೆ ಮುಂದುವರಿಯಲಿದೆ.ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹೇಝಲ್ವುಡ್ ಅಲಭ್ಯತೆಯು ತಂಡದ ಬೌಲಿಂಗ್ ವಿಭಾಗಕ್ಕೆ ದೊಡ್ಡ ಹೊಡೆತ ನೀಡಲಿದೆ.ಹೇಝಲ್ವುಡ್ ಅಲಭ್ಯತೆಯಲ್ಲಿ ಭುವನೇಶ್ವರ್ ಕುಮಾರ್, ಯಶ್ ದಯಾಳ್ ಮತ್ತು ನುವಾನ್ ತುಷಾರ ಅವರ ಮೇಲೆ ಹೆಚ್ಚಿನ ಜವಾಬ್ದಾರಿ ಇರಲಿದೆ. ತಂಡವು ತನ್ನ ಬೌಲಿಂಗ್ ಸಂಯೋಜನೆಯಲ್ಲಿ ಬದಲಾವಣೆ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ.
ಕ್ರಿಕೆಟ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

