ಶಿರಸಿಯ ಹಾಸ್ಟೆಲ್‌ನಲ್ಲಿ 9ನೇ ತರಗತಿ ವಿದ್ಯಾರ್ಥಿನಿಯಿಂದ ಮಗುವಿಗೆ ಜನನ!

ಕಾರವಾರ: ಇತ್ತೀಚಿನ ದಿನಗಳಲ್ಲಿ ಅಪ್ರಾಪ್ತ ಬಾಲಕಿಯರು ಹಾಗೂ ವಿದ್ಯಾರ್ಥಿನಿಲಯಗಳಲ್ಲಿರುವ (ಹಾಸ್ಟೆಲ್) ವಿದ್ಯಾರ್ಥಿನಿಯರು ಗರ್ಭಿಣಿಯಾಗುತ್ತಿರುವ ಪ್ರಕರಣಗಳು ಆತಂಕ ಮೂಡಿಸುತ್ತಿರುವ ಬೆನ್ನಲ್ಲೇ, ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂತಹದ್ದೇ ಒಂದು ಅತ್ಯಂತ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಜಿಲ್ಲೆಯ ಶಿರಸಿ ತಾಲೂಕಿನ ಹಾಸ್ಟೆಲ್ ಒಂದರಲ್ಲಿ ತಂಗಿದ್ದ 9ನೇ ತರಗತಿಯ ಅಪ್ರಾಪ್ತ ವಿದ್ಯಾರ್ಥಿನಿಯೊಬ್ಬಳು ಮಗುವಿಗೆ ಜನ್ಮ ನೀಡಿದ್ದಾಳೆ. ಸದ್ಯ ನವಜಾತ ಮಗುವಿನ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿ ಹೆರಿಗೆಯಾಗಿರುವ ವಿಷಯ ತಿಳಿಯುತ್ತಿದ್ದಂತೆಯೇ ಇಡೀ ತಾಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡಿದೆ. ಶಿರಸಿ ತಹಶಿಲ್ದಾರ್ ಹಾಗೂ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ (PSI) ತಕ್ಷಣವೇ ಸದರಿ ಹಾಸ್ಟೆಲ್‌ಗೆ ಭೇಟಿ ನೀಡಿ, ಸಿಬ್ಬಂದಿಯಿಂದ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದಾರೆ. ಸದ್ಯ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಶಾಲೆಗಳು ಇತ್ತೀಚೆಗಷ್ಟೇ ಪುನಾರಂಭಗೊಂಡಿದ್ದು, ಕೇವಲ 10 ದಿನಗಳಲ್ಲೇ ವಿದ್ಯಾರ್ಥಿನಿ ಮಗುವಿಗೆ ಜನ್ಮ ನೀಡಿರುವುದು ಹಲವು ಅನುಮಾನ ಹಾಗೂ ಆಘಾತಕ್ಕೆ ಕಾರಣವಾಗಿದೆ. 9ನೇ ತರಗತಿಯ ಬಾಲಕಿಗೆ ಸುಮಾರು 14 ರಿಂದ 15 ವರ್ಷ ವಯಸ್ಸಾಗಿರಬಹುದು. ತಮ್ಮ ಮಗಳು ಹಾಸ್ಟೆಲ್‌ನಲ್ಲಿ ಸುರಕ್ಷಿತವಾಗಿದ್ದಾಳೆ ಎಂದು ನಿರಾಳವಾಗಿದ್ದ ಪೋಷಕರಿಗೆ ಈ ಸುದ್ದಿ ಆಕಾಶವೇ ತಲೆಮೇಲೆ ಬಿದ್ದಂತಾಗಿದೆ.

ಇದನ್ನೂ ಓದಿ: ವಿಟ್ಲ ಪೊಲೀಸರ ಬಿಗ್ ಕಾರ್ಯಾಚರಣೆ: ರೈತರ ಸಬ್ಸಿಡಿ ಯೂರಿಯಾ ಕಾಳಸಂತೆ ದಂಧೆ ಬಯಲು!; ಲಾರಿ ಸಮೇತ ಲಕ್ಷಾಂತರ ಮೌಲ್ಯದ ಗೊಬ್ಬರ ಜಪ್ತಿ, ಓರ್ವ ಅರೆಸ್ಟ್!

ಇಷ್ಟು ತಿಂಗಳುಗಳ ಕಾಲ ಬಾಲಕಿ ಗರ್ಭಿಣಿಯಾಗಿರುವುದು ಹಾಸ್ಟೆಲ್ ಮೇಲ್ವಿಚಾರಕರಿಗೆ (ವಾರ್ಡನ್) ಅಥವಾ ಶಾಲೆಯ ಶಿಕ್ಷಕರಿಗೆ ಗೊತ್ತಾಗಲಿಲ್ಲವೇ? ಬಾಲಕಿಯ ಈ ಸ್ಥಿತಿಗೆ ಮತ್ತು ದೌರ್ಜನ್ಯಕ್ಕೆ ಯಾರು ಕಾರಣ? ಎಂಬ ಹತ್ತಾರು ಗಂಭೀರ ಪ್ರಶ್ನೆಗಳು ಸದ್ಯ ಸಾರ್ವಜನಿಕ ವಲಯದಲ್ಲಿ ಉದ್ಭವಿಸಿವೆ. ಈ ಸೂಕ್ಷ್ಮ ಪ್ರಕರಣದ ಅಸಲಿ ಸತ್ಯಾಂಶವನ್ನು ಹೊರತರಲು ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು