ಟ್ರಂಪ್ ಕಾರ್ಯಕ್ರಮದ ಬಳಿ ಗುಂಡಿನ ದಾಳಿ: ಭದ್ರತೆ ಪರಿಶೀಲನೆಗೆ ವೈಟ್ ಹೌಸ್ ನಿರ್ಧಾರ

ವಾಷಿಂಗ್ಟನ್ : ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾಗವಹಿಸಿದ್ದ  ಕಾರ್ಯಕ್ರಮದ ವೇಳೆ ಗುಂಡಿನ ದಾಳಿ ನಡೆದ ಹಿನ್ನೆಲೆ, ವೈಟ್ ಹೌಸ್ ಇದೀಗ ರಾಷ್ಟ್ರಪತಿ ಭದ್ರತಾ ವ್ಯವಸ್ಥೆಗಳ ಸಮಗ್ರ ಪರಿಶೀಲನೆಗೆ ಮುಂದಾಗಿದೆ.

ವಾಷಿಂಗ್ಟನ್‌ನ ವೈಟ್ ಹೌಸ್ ಕರೆಸ್ಪಾಂಡೆನ್ಸ್ ಡಿನ್ನರ್ ಸಂದರ್ಭದಲ್ಲಿ ನಡೆದ ಈ ಘಟನೆ ಭದ್ರತಾ ವ್ಯವಸ್ಥೆಗಳ ಮೇಲೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ. ಶಸ್ತ್ರಾಸ್ತ್ರಗಳೊಂದಿಗೆ ಬಂದ ಶಂಕಿತ ವ್ಯಕ್ತಿ ಭದ್ರತಾ ವಲಯವನ್ನು ಭೇದಿಸಿ ಹೋಟೆಲ್ ಒಳಗೆ ಪ್ರವೇಶಿಸಲು ಯತ್ನಿಸಿದರೂ, ಸೀಕ್ರೆಟ್ ಸರ್ವಿಸ್ ಸಿಬ್ಬಂದಿ ಅವನನ್ನು ತಕ್ಷಣವೇ ತಡೆದು ಬಂಧಿಸಿದರು.

Advertisement

ಇದನ್ನೂ ಓದಿ ಮುಂಬೈನಲ್ಲಿ ಆಹಾರ ದುರಂತ: ನಾಲ್ವರು ಸಾವು, ಒಂಬತ್ತು ಮಂದಿ ಅಸ್ವಸ್ಥ! 

ಘಟನೆಯ ಸಮಯದಲ್ಲಿ ಟ್ರಂಪ್ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳನ್ನು ತಕ್ಷಣ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು. ಗುಂಡಿನ ಸದ್ದು ಕಾರ್ಯಕ್ರಮದ ಸಮೀಪದಲ್ಲೇ ಕೇಳಿಬಂದಿದ್ದು, ಭದ್ರತಾ ವ್ಯವಸ್ಥೆಯಲ್ಲಿ ಕೆಲವು ದೌರ್ಬಲ್ಯಗಳಿದ್ದವು ಎಂಬ ಆತಂಕ ಮೂಡಿಸಿದೆ.

Advertisement

ಈ ಹಿನ್ನೆಲೆಯಲ್ಲಿ ವೈಟ್ ಹೌಸ್ ಮುಖ್ಯಸ್ಥರು, ಯುನೈಟೆಡ್ ಸ್ಟೇಟ್ ಸರ್ವಿಸ್ ಮತ್ತು ಡಿಪಾರ್ಟ್ಮೆಂಟ್ ಆಫ್ ಹೋಂ ಲ್ಯಾಂಡ್ ಸೆಕ್ಯೂರಿಟಿ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿ, ಭವಿಷ್ಯದ ಕಾರ್ಯಕ್ರಮಗಳಲ್ಲಿ ಭದ್ರತೆಯನ್ನು ಮತ್ತಷ್ಟು ಬಲಪಡಿಸುವ ಕುರಿತು ಚರ್ಚಿಸಲು ನಿರ್ಧರಿಸಿದ್ದಾರೆ.

ಇದನ್ನೂ ಓದಿ ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ: ಮೊಹಮ್ಮದ್ ಶಾರಿಕ್‌ಗೆ 10 ವರ್ಷ ಕಠಿಣ ಶಿಕ್ಷೆ

ಪ್ರಾಥಮಿಕ ಮಾಹಿತಿಯ ಪ್ರಕಾರ, ಈ ಕಾರ್ಯಕ್ರಮಕ್ಕೆ ಅತ್ಯುನ್ನತ ಭದ್ರತಾ ವರ್ಗೀಕರಣ ನೀಡಲಾಗಿರಲಿಲ್ಲ ಎನ್ನಲಾಗಿದೆ. ಇದರಿಂದಾಗಿ ಭದ್ರತಾ ವಲಯವು ಸಾಮಾನ್ಯಕ್ಕಿಂತ ಕಡಿಮೆ ಮಟ್ಟದಲ್ಲಿತ್ತು ಎಂಬ ಟೀಕೆಗಳು ಕೇಳಿಬಂದಿವೆ.

ಇದೀಗ, ಉನ್ನತ ಮಟ್ಟದ ರಾಜಕೀಯ ನಾಯಕರು ಹಾಗೂ ಗಣ್ಯರು ಭಾಗವಹಿಸುವ ಕಾರ್ಯಕ್ರಮಗಳಿಗೆ ಹೆಚ್ಚು ಕಠಿಣ ಭದ್ರತಾ ಕ್ರಮಗಳನ್ನು ಜಾರಿಗೆ ತರಬೇಕೆಂಬ ಒತ್ತಡ ಹೆಚ್ಚಾಗಿದೆ

ಹೆಚ್ಚಿನ ಸುದ್ದಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ 

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು