Breaking News

ಸಂಪೂರ್ಣ ವಂದೇ ಮಾತರಂ ಗೀತೆ ಹಾಡುವುದು ಕಡ್ಡಾಯ! ಕೇಂದ್ರದಿಂದ ಮಹತ್ವದ ಆದೇಶ

ಭಾರತದ ರಾಷ್ಟ್ರಗೀತೆ (ಜನ ಗಣ ಮನ) ಹಾಡುವ ಮೊದಲು ‘ವಂದೇ ಮಾತರಂ’ ಅನ್ನು ಆರು ಚರಣಗಳ ರೂಪದಲ್ಲಿ ಹಾಡುವುದನ್ನು ಕೇಂದ್ರ ಗೃಹ ಸಚಿವಾಲಯ ಕಡ್ಡಾಯಗೊಳಿಸಿದೆ. ಈ ಮೊದಲು ವಂದೇ ಮಾತರಂನ ಮೊದಲ ಎರಡು ಚರಣಗಳನ್ನು ಮಾತ್ರ ಅಧಿಕೃತವಾಗಿ ಹಾಡಲಾಗುತ್ತಿತ್ತು. ಆದರೆ ಈಗ 6 ಚರಣಗಳ ದೀರ್ಘ ಆವೃತ್ತಿಯನ್ನು (ಸುಮಾರು 3 ನಿಮಿಷ 10 ಸೆಕೆಂಡುಗಳು) ಹಾಡುವುದು ಕಡ್ಡಾಯವಾಗಿದೆ.

ಯಾವುದೇ ಸರ್ಕಾರಿ ಕಾರ್ಯಕ್ರಮಗಳಲ್ಲಿ ರಾಷ್ಟ್ರಗೀತೆ (ಜನ ಗಣ ಮನ) ಮತ್ತು ರಾಷ್ಟ್ರೀಯ ಗೀತೆ (ವಂದೇ ಮಾತರಂ) ಎರಡನ್ನೂ ಬಳಸುವ ಸಂದರ್ಭ ಬಂದರೆ, ಮೊದಲು ವಂದೇ ಮಾತರಂ ಅನ್ನು ಹಾಡಬೇಕು. ರಾಷ್ಟ್ರಪತಿಗಳು ಅಥವಾ ರಾಜ್ಯಪಾಲರು ಅಧಿಕೃತ ಸರ್ಕಾರಿ ಕಾರ್ಯಕ್ರಮಗಳಿಗೆ ಆಗಮಿಸುವಾಗ ಮತ್ತು ನಿರ್ಗಮಿಸುವಾಗ, ಅವರ ಭಾಷಣದ ಮೊದಲು ಮತ್ತು ನಂತರ ಈ ಗೀತೆಯನ್ನು ಹಾಡಬೇಕು. ರಾಷ್ಟ್ರಧ್ವಜವನ್ನು ಹಾರಿಸುವ ಸಂದರ್ಭದಲ್ಲಿ ವಂದೇ ಮಾತರಂ ಹಾಡುವುದು ಕಡ್ಡಾಯ.

Advertisement

ಇದನ್ನೂ ಓದಿ: ಭಾರತ ಮತ್ತು ಗ್ರೀಸ್ ನಡುವೆ ಮಹತ್ವದ ಒಪ್ಪಂದಗಳಿಗೆ ಸಹಿ

ಶಾಲೆಗಳಲ್ಲಿ ದಿನದ ಆರಂಭದಲ್ಲಿ ವಂದೇ ಮಾತರಂ ಸಮೂಹ ಗಾಯನವನ್ನು ಪ್ರೋತ್ಸಾಹಿಸಲು ಸೂಚಿಸಲಾಗಿದೆ. ರಾಷ್ಟ್ರಗೀತೆಯಂತೆಯೇ, ವಂದೇ ಮಾತರಂ ಅನ್ನು ಅಧಿಕೃತವಾಗಿ ಹಾಡುವಾಗ ಅಥವಾ ಪ್ಲೇ ಮಾಡುವಾಗ ಸಾರ್ವಜನಿಕರು ಎದ್ದು ನಿಂತು ಗೌರವ ಸಲ್ಲಿಸುವುದು ಕಡ್ಡಾಯ. ಚಲನಚಿತ್ರ ಅಥವಾ ಸಾಕ್ಷ್ಯಚಿತ್ರದ ಭಾಗವಾಗಿ ಗೀತೆ ಪ್ಲೇ ಆಗುತ್ತಿರುವಾಗ ಎದ್ದು ನಿಲ್ಲುವ ಅಗತ್ಯವಿಲ್ಲ, ಏಕೆಂದರೆ ಅದು ಪ್ರದರ್ಶನಕ್ಕೆ ಅಡ್ಡಿಪಡಿಸಬಹುದು ಮತ್ತು ಗೊಂದಲ ಉಂಟುಮಾಡಬಹುದು ಎಂಬ ಕಾರಣಕ್ಕೆ ಓ ನಿಯಮಯವನ್ನು ತರಲಾಗಿದೆ.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ‌ ಕ್ಲಿಕ್ ಮಾಡಿ

ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್:‌ 7353833811, ಇ-ಮೇಲ್-‌ g1newsdpt@gmail.com

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು