ಉತ್ತರ ಪ್ರದೇಶ: ಸೀತಾಪುರ ಜಿಲ್ಲೆಯ ರೇವುಸಾ (Reusa) ಬ್ಲಾಕ್ ವ್ಯಾಪ್ತಿಯಲ್ಲಿ ವಿಸ್ಮಯಕಾರಿ ಹಾಗೂ ಅಪರೂಪದ ಘಟನೆಯೊಂದು ನಡೆದಿದ್ದು, ಮಹಿಳೆಯೊಬ್ಬರು ಒಂದೇ ಬಾರಿಗೆ ನಾಲ್ಕು ಮಕ್ಕಳಿಗೆ (ಮೂವರು ಗಂಡು ಹಾಗೂ ಒಬ್ಬಳು ಹೆಣ್ಣು ಮಗು) ಜನ್ಮ ನೀಡಿದ್ದಾರೆ. 6 ರಿಂದ 7 ತಿಂಗಳ ಗರ್ಭಾವಸ್ಥೆಯಲ್ಲೇ ಅವಧಿಗೂ ಮುನ್ನ (Pre-mature) ಹೆರಿಗೆಯಾಗಿರುವುದರಿಂದ ನಾಲ್ಕೂ ನವಜಾತ ಶಿಶುಗಳು ತೀವ್ರ ನಿಗಾದಲ್ಲಿವೆ.
ಸದ್ಯ ಹೆರಿಗೆಯಾದ ಮಹಿಳೆಯ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಶಿಶುಗಳಿಗೆ ಉತ್ತಮ ವೈದ್ಯಕೀಯ ಆರೈಕೆ ಮತ್ತು ತುರ್ತು ಚಿಕಿತ್ಸೆಯ ಅಗತ್ಯವಿರುವುದರಿಂದ, ನಾಲ್ಕೂ ಮಕ್ಕಳನ್ನು ಬಹ್ರೈಚ್ ಮೆಡಿಕಲ್ ಕಾಲೇಜು (Bahraich Medical College) ಆಸ್ಪತ್ರೆಗೆ ರವಾನಿಸಲಾಗಿದೆ.
ಇದನ್ನೂ ಓದಿ: ಸವಣಾಲು ಮತ್ತು ಅಚ್ಲಾಡಿಯಲ್ಲಿ ಬೋನಿಗೆ ಬಿದ್ದ ಚಿರತೆಗಳು: ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
ಇಲ್ಲಿದೆ ನೋಡಿ ಸ್ಟೋರಿ:
#सीतापुर में एक साथ गूंजी चार किलकारियां 👶❤️
एक महिला ने एक साथ 4 बच्चों को जन्म दिया, जिनमें 3 बेटे और 1 बेटी शामिल हैं। 👶👶👶👧
बताया जा रहा है कि समय से पहले प्रसव होने के कारण चारों नवजात प्री-मैच्योर हैं। हालत को देखते हुए चारों बच्चों को बेहतर इलाज के लिए बहराइच मेडिकल… pic.twitter.com/5yBOVMTe3G
— Reporrt (@reporrtofficial) September 2, 2026
ಮನೆಯಲ್ಲಿ ಒಂದೇ ಬಾರಿಗೆ ನಾಲ್ಕು ಪುಟಾಣಿ ಮಕ್ಕಳ ಅಳುವಿನ ಧ್ವನಿ ಕೇಳಿ ಕುಟುಂಬಸ್ಥರಲ್ಲಿ ಸಂತಸ ಮನೆಮಾಡಿದೆ. ಅವಧಿಗೂ ಮುನ್ನ ಜನಿಸಿರುವ ನಾಲ್ಕೂ ಮಕ್ಕಳು ಶೀಘ್ರವೇ ಚೇತರಿಸಿಕೊಂಡು ಆರೋಗ್ಯವಾಗಿ ಮನೆಗೆ ಹಿಂತಿರುಗಲಿ ಎಂದು ಕುಟುಂಬಸ್ಥರು ಹಾಗೂ ಸ್ಥಳೀಯರು ಪ್ರಾರ್ಥಿಸುತ್ತಿದ್ದಾರೆ.

