ನವದೆಹಲಿ: ಟಿ-20 ವಿಶ್ವಕಪ್‌ನ ‘ಡಿ’ ಗುಂಪಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಯುಎಇ ತಂಡ ವಿರುದ್ಧ 6 ವಿಕೆಟ್‌ಗಳ ಜಯ ದಾಖಲಿದೆ.
ಇಲ್ಲಿನ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟ್ ಮಾಡಿದ ಯುಎಇ ತಂಡ ಕಾರ್ಬಿನ್ ಬಾಷ್ ಅವರ ಮಾರಕ ದಾಳಿಗೆ ಸಿಲುಕಿ 6 ವಿಕೆಟ್ ನಷ್ಟಕ್ಕೆ 122 ರನ್ ಗಳಿಸಲಷ್ಟೇ ಶಕ್ತವಾಯ್ತು.

ಇದನ್ನೂ ಓದಿ: Ranaji Trophy: ಫೈನಲ್ ಪ್ರವೇಶಿಸಿ ಇತಿಹಾಸ ನಿರ್ಮಿಸಿದ ಜಮ್ಮು ಕಾಶ್ಮೀರ ತಂಡ
ತಂಡದ ಪರ ಅಲಿಶಾನ್ ಶರಾಫು 45, ಮುಹಮ್ಮದ್ ವಸೀಮ್ 22 ರನ್ ಗಳಿಸಿದರು. ಆರ್ಯಾಂಶ್ ಶರ್ಮ 13 ರನ್ ಗಳಿಸಿದರು. ದಕ್ಷಿಣ ಆಫ್ರಿಕಾ ಪರ ಕಾರ್ಬಿನ್ ಬಾಷ್ 3, ಆರ್ನಿಚ್ ನೋಕ್ಯ 2 ಮತ್ತು ಜಾರ್ಜ್ ಲಿಂಡೆ ಒಂದು ವಿಕೆಟ್ ಪಡೆದರು.
ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡ ಡೆವಿಲ್ಡ್ ಬ್ರೆವಿಸ್ 36, ರಾಯನ್ ರಿಕೆಲ್ಟನ್ 30, ಆಯ್ಡೆನ್ ಮಾಕ್ರಮ್ 28 ಅವರ ಬಿರುಸಿನ ಬ್ಯಾಟಿಂಗ್ ಸಹಾಯದಿಂದ 13.2 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.
ಯುಎಇ ಪರ ಹೈದರ್ ಅಲಿ, ಮುಹಮ್ಮದ್ ಜವಾದುಲ್ಲಾ, ಮುಹಮ್ಮದ್ ಅರ್ಫಾನ್ ಮತ್ತು ಮುಹಮ್ಮದ್ ಫಾರೂಕ್ ತಲಾ ಒಂದು ವಿಕೆಟ್ ಪಡೆದರು.
ಇದರೊಂದಿಗೆ ಆಡಿದ ನಾಲ್ಕು ಪಂದ್ಯಗಳನ್ನು ಗೆದ್ದ ದಕ್ಷಿಣ ಆಫ್ರಿಕಾ ಲೀಗ್ ಹಂತವನ್ನು ‘ಡಿ’ ಗುಂಪಿನ ಅಗ್ರಸ್ಥಾನಿಯಾಗಿ ಮುಗಿಸಿತು.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

