Breaking News

ಸಿದ್ಧಕಟ್ಟೆಯಲ್ಲಿ ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ನೂತನ 23ನೇ ಶಾಖೆ ಉದ್ಘಾಟನೆ

ಸಿದ್ಧಕಟ್ಟೆ: ಪುತ್ತೂರಿನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿ ರಾಜ್ಯಾದ್ಯಂತ 22 ಶಾಖೆಗಳೊಂದಿಗೆ ಯಶಸ್ವಿಯಾಗಿ ಕಾರ್ಯಾಚರಿಸುತ್ತಿರುವ ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ನೂತನ 23ನೇ ಶಾಖೆಯು ಆಗಸ್ಟ್ 29, 2026ರಂದು ಸಿದ್ಧಕಟ್ಟೆಯ ಕಣಿಯೂರು ಕಾಂಪ್ಲೆಕ್ಸ್‌ನ ನೆಲಮಹಡಿಯಲ್ಲಿ ಶುಭಾರಂಭಗೊಳ್ಳಲಿದೆ.

ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ನೂತನ ಶಾಖೆಯನ್ನು ಉದ್ಘಾಟಿಸಲಿದ್ದು, ಬಂಟ್ವಾಳ ವಿಧಾನಸಭಾ ಕ್ಷೇತ್ರದ ಶಾಸಕ ಶ್ರೀ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಸಮಾರಂಭದ ಸಭಾಧ್ಯಕ್ಷತೆ ವಹಿಸಲಿದ್ದಾರೆ.

ಇನ್ನು ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ, ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜ, ಮಾಜಿ ಸಚಿವ ಅಭಯಚಂದ್ರ ಜೈನ್, ಪಂಚದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕರು ವೇದಮೂರ್ತಿ ಪ್ರಕಾಶ್ ಅಸ್ರಣ್ಣ, ಸಿದ್ಧಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಹಾಗೂ ವಕೀಲ ಸುರೇಶ್ ಶೆಟ್ಟಿ, ರಬ್ಬರ್ ಬೋರ್ಡ್ (ಭಾರತ ಸರ್ಕಾರ) ಸದಸ್ಯ ವಸಂತ್ ಅಣ್ಣಳಿಕೆ,ರೋಟರಿ ಕ್ಲಬ್ ಸಿದ್ಧಕಟ್ಟೆ ಫಲ್ಗುಣಿ ಸ್ಥಾಪಕಾಧ್ಯಕ್ಷರು ಮೈಕಲ್ ಡಿ ಕೋಸ್ಟ ಭಾಗವಹಿಸಲಿದ್ದಾರೆ.

2001ರಲ್ಲಿ ಕಾರ್ಯಾರಂಭಗೊಂಡ ಈ ಸಹಕಾರಿ ಸಂಘವು ಪ್ರಸ್ತುತ ರಜತ ಮಹೋತ್ಸವದ (Silver Jubilee) ವರ್ಷಾಚರಣೆಯಲ್ಲಿದೆ. ಆಕರ್ಷಕ ಬಡ್ಡಿದರದಲ್ಲಿ ಠೇವಣಿ ಸ್ವೀಕಾರ, ವಿವಿಧ ಉದ್ದೇಶಗಳ ಸಾಲ ಸೌಲಭ್ಯ, ಜೀವವಿಮೆ, ಸಾಮಾನ್ಯ ವಿಮೆ, ಪಾನ್ ಕಾರ್ಡ್ ಹಾಗೂ ಸೇಫ್ ಲಾಕರ್ ಸೌಲಭ್ಯಗಳನ್ನು ಸದಸ್ಯರಿಗೆ ನೀಡುತ್ತಾ ಬಂದಿದೆ.

ಇದನ್ನೂ ಓದಿ: ಮೊಬೈಲ್ ಫೋನ್ ವಿಚಾರಕ್ಕೆ ಕುಟುಂಬದಲ್ಲಿ ಗಲಾಟೆ: ಪ್ರಪಾತಕ್ಕೆ ಜಿಗಿದು ಒಂದೇ ಕುಟುಂಬದ ಮೂವರ ದಾರುಣ ಸಾವು

ಸಾಮಾಜಿಕ ಸೇವಾ ರಂಗದಲ್ಲೂ ಮುಂಚೂಣಿ:

ಆರ್ಥಿಕ ಕ್ಷೇತ್ರ ಮಾತ್ರವಲ್ಲದೆ ಸಾಮಾಜಿಕ ಸೇವೆಯ ಭಾಗವಾಗಿ 2015ರಲ್ಲಿ ‘ಶ್ರೀ ಸರಸ್ವತಿ ಚಾರಿಟೇಬಲ್ ಟ್ರಸ್ಟ್’ ಸ್ಥಾಪಿಸಲಾಗಿದ್ದು, ಇದರ ಮೂಲಕ ಅಶಕ್ತರಿಗೆ ಆರ್ಥಿಕ ನೆರವು, ಪುಸ್ತಕ ಬಿಡುಗಡೆ, ಜಾಗೃತಿ ಕಾರ್ಯಕ್ರಮಗಳು, ಉಚಿತ ಆರೋಗ್ಯ ತಪಾಸಣಾ ಶಿಬಿರ, ಬಟ್ಟೆಯ ಕೈಚೀಲ ಹಾಗೂ ತರಕಾರಿ ಬೀಜ ವಿತರಣೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಈವರೆಗೆ ಸುಮಾರು ₹2 ಕೋಟಿಗೂ ಮಿಕ್ಕಿ ವೆಚ್ಚದಲ್ಲಿ ಸಾಮಾಜಿಕ ಸೇವಾ ಕಾರ್ಯಗಳನ್ನು ಕೈಗೊಳ್ಳಲಾಗಿದೆ.

ಸದಸ್ಯರು ಹಾಗೂ ಸಾರ್ವಜನಿಕರು ನೂತನ ಶಾಖೆಯಲ್ಲಿ ತಮ್ಮ ಬ್ಯಾಂಕಿಂಗ್ ವ್ಯವಹಾರಗಳನ್ನು ನಡೆಸಿ ಸಂಸ್ಥೆಯ ಪ್ರಗತಿಗೆ ಕೈಜೋಡಿಸಬೇಕಾಗಿ ಸಹಕಾರಿ ಸಂಘವು ಪ್ರಕಟಣೆಯಲ್ಲಿ ವಿನಂತಿಸಿದೆ.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *