Breaking News

ಎಲೆಕ್ಟ್ರಿಕ್ ಸ್ಕೂಟರ್ ಸ್ಫೋಟಗೊಂಡು ಬೆಂಕಿ: ಕೂದಲೆಳೆ ಅಂತರದಲ್ಲಿ ಇಬ್ಬರು ಮಕ್ಕಳು ಪಾರು

ಶ್ರೀಗಂಗಾನಗರ: ರಾಜಸ್ಥಾನದ ಶ್ರೀಗಂಗಾನಗರದ ಬಾಬಾ ರಾಮದೇವ್ ದೇವಸ್ಥಾನದ ಸಮೀಪ ಸೋಮವಾರ ಸಂಜೆ ಎಲೆಕ್ಟ್ರಿಕ್ ಸ್ಕೂಟರ್ (EV Scooter) ಒಂದರಲ್ಲಿ ದಿಢೀರನೆ ಸ್ಫೋಟ ಸಂಭವಿಸಿ ಬೆಂಕಿ ಹೊತ್ತಿ ಉರಿದ ಭೀಕರ ಘಟನೆ ನಡೆದಿದೆ.

ಸ್ಕೂಟರ್‌ಗೆ ಏಕಾಏಕಿ ಬೆಂಕಿ ಹೊತ್ತಿಕೊಂಡ ಸಮಯದಲ್ಲೇ ಚಾಲನೆ ಮಾಡುತ್ತಿದ್ದ ಮಗು ಹಾಗೂ ಸಮೀಪದಲ್ಲಿದ್ದ ಮತ್ತೊಂದು ಮಗು ತಕ್ಷಣವೇ ಎಚ್ಚೆತ್ತುಕೊಂಡು ದೂರ ಓಡಿದ್ದರಿಂದ ಇಬ್ಬರೂ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇದನ್ನೂ ಓದಿ,:ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಕೊಡಿಪ್ಪಾಡಿ-ಕುಳ ಘಟಕದ ವತಿಯಿಂದ ಆ.9ರಂದು ಉಚಿತ ವೈದ್ಯಕೀಯ ತಪಾಸಣೆ, ರಕ್ತದಾನ ಶಿಬಿರ

ಶ್ರೀಗಂಗಾನಗರದ ಬಾಬಾ ರಾಮದೇವ ದೇವಾಲಯದ ಬಳಿ ಎಲೆಕ್ಟ್ರಿಕ್ ಸ್ಕೂಟರ್ ಸಾಗುತ್ತಿದ್ದಾಗ ಹಠಾತ್ತಾಗಿ ದೊಡ್ಡ ಶಬ್ದದೊಂದಿಗೆ ಸ್ಫೋಟಗೊಂಡು ಬೆಂಕಿ ಕಾಣಿಸಿಕೊಂಡಿದೆ.ಸ್ಕೂಟರ್ ಚಾಲನೆ ಮಾಡುತ್ತಿದ್ದ ಮಗು ವಾಹನದಿಂದ ತಕ್ಷಣ ಕೆಳಗೆ ಜಿಗಿದಿದೆ. ಅದೇ ಸಮಯದಲ್ಲಿ ವಾಹನದ ಬಳಿಯಿದ್ದ ಇನ್ನೊಂದು ಮಗು ಕೂಡ ತಕ್ಷಣವೇ ಸುರಕ್ಷಿತ ಸ್ಥಳಕ್ಕೆ ಓಡಿ ಪ್ರಾಣ ಉಳಿಸಿಕೊಂಡಿದೆ.ಕ್ಷಣಾರ್ಧದಲ್ಲಿ ಬೆಂಕಿ ಇಡೀ ಸ್ಕೂಟರ್‌ಗೆ ಆವರಿಸಿಕೊಂಡು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *