ಸನ್‌ರೈಸರ್ಸ್‌ ತಂಡಕ್ಕೆ ಪಾಕ್‌ ಕ್ರಿಕೆಟಿಗನ ಆಯ್ಕೆ; ಕಾವ್ಯ ಮಾರನ್‌ ವಿರುದ್ಧ ಭಾರೀ ಆಕ್ರೋಶ

kavya maran and Abrar Ahmed G1 News

ಇಂಗ್ಲೆಂಡ್‌ನಲ್ಲಿ ಜುಲೈ–ಆಗಸ್ಟ್ ತಿಂಗಳಲ್ಲಿ ನಡೆಯಲಿರುವ ವೇಗದ ಕ್ರಿಕೆಟ್ ಟೂರ್ನಿ ದಿ ಹಂಡ್ರೆಡ್‌ಗಾಗಿ ಲಂಡನ್‌ನಲ್ಲಿ ನಡೆದ ಹರಾಜಿನಲ್ಲಿ ಪಾಕಿಸ್ತಾನದ ಸ್ಪಿನ್ನರ್ ಅಬ್ರಾರ್ ಅಹ್ಮದ್ ಅವರನ್ನು ಖರೀದಿಸಿರುವುದರಿಂದ ಸನ್‌ರೈಸರ್ಸ್ ಲೀಡ್ಸ್ ತಂಡ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗೆ ಗುರಿಯಾಗಿದೆ.

ಎಂಟು ತಂಡಗಳಿರುವ ಈ ಲೀಗ್‌ನಲ್ಲಿ ಐದು ಫ್ರಾಂಚೈಸಿಗಳು ಭಾರತೀಯ ಮಾಲೀಕರಿಗೆ ಸಂಬಂಧಿಸಿದವುಗಳಾಗಿವೆ. ಅವುಗಳಲ್ಲಿ ಪಾಕಿಸ್ತಾನ ಆಟಗಾರನನ್ನು ಆಯ್ಕೆ ಮಾಡಿದ ಏಕೈಕ ತಂಡವಾಗಿ ಸನ್‌ರೈಸರ್ಸ್ ಲೀಡ್ಸ್ ಕೂಡ ಒಂದು. ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಸನ್‌ರೈಸರ್ಸ್ ಈಸ್ಟರ್ನ್ ಕೇಪ್ ತಂಡಗಳ ಸಹೋದರಿ ಫ್ರಾಂಚೈಸಿಯಾಗಿರುವ ಸನ್‌ರೈಸರ್ಸ್ ಲೀಡ್ಸ್, ಸುಮಾರು 2.34 ಕೋಟಿ ನೀಡಿ ಅಬ್ರಾರ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಈ ಬಗ್ಗೆ ಭಾರತದ ಕ್ರಿಕೆಟ್‌ ಅಭಿಮಾನಿಗಳು ಭಾರೀ ಆಕ್ರೋಶ ಹೊರಹಾಕುತ್ತಿದ್ದಾರೆ.

Advertisement

ಹರಾಜಿನ ವೇಳೆ ತಂಡದ ಸಿಇಒ ಕಾವ್ಯ ಮರನ್ ಮತ್ತು ಮುಖ್ಯ ಕೋಚ್ ಡೇನಿಯಲ್ ವೆಟೋರೀ ಹಾಜರಿದ್ದರು. ನಂತರ ಮಾತನಾಡಿದ ವೆಟೋರೀ, “ಪಾಕಿಸ್ತಾನ ಆಟಗಾರರನ್ನು ಆಯ್ಕೆ ಮಾಡಬಾರದು ಎಂಬ ಯಾವುದೇ ಆಂತರಿಕ ಚರ್ಚೆ ನಡೆದಿರಲಿಲ್ಲ. ನಾವು ಗಮನದಲ್ಲಿಟ್ಟಿದ್ದ ನಾಲ್ಕು–ಐದು ಆಟಗಾರರಲ್ಲಿ ಅಬ್ರಾರ್ ಕೂಡ ಒಬ್ಬರು,” ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಗೆದ್ದಾಗ ನಾವು ಟ್ರೋಫಿಯನ್ನು ಭಾರತಕ್ಕೆ ತಂದೆವೆಯೇ ಹೊರತು ದೇವಸ್ಥಾನಕ್ಕಲ್ಲ: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಗರಂ!

ಆದರೆ ಈ ನಿರ್ಧಾರವನ್ನು ಕೆಲ ಅಭಿಮಾನಿಗಳು ತೀವ್ರವಾಗಿ ವಿರೋಧಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹಲವು ಬಳಕೆದಾರರು ತಂಡದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಕೆಲವು ಮಂದಿ ಫ್ರಾಂಚೈಸಿ ಮತ್ತು ಸಂಬಂಧಿತ ಬ್ರಾಂಡ್‌ಗಳನ್ನು ಬಹಿಷ್ಕರಿಸುವಂತೆ ಕರೆ ನೀಡಿದ್ದಾರೆ.

ಈ ನಡುವೆ ಬಿಸಿಸಿಐ ವಿಷಯವನ್ನು ಎಚ್ಚರಿಕೆಯಿಂದ ಗಮನಿಸುತ್ತಿದೆ ಎನ್ನಲಾಗಿದೆ. ಅಧಿಕೃತವಾಗಿ ಇದು ಐಪಿಎಲ್‌ಗೆ ಸಂಬಂಧಪಟ್ಟದ್ದಲ್ಲದಿದ್ದರೂ, ಫ್ರಾಂಚೈಸಿಗಳಿಗೆ ಅಪ್ರತ್ಯಕ್ಷವಾಗಿ ಸಂದೇಶ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

ಅಬ್ರಾರ್‌ ಆಯ್ಕೆಗೆ ವಿರೋಧಿಸಲು ಪ್ರಮುಖ ಕಾರಣ

ಗಮನಾರ್ಹವಾಗಿ, ಭಾರತ–ಪಾಕಿಸ್ತಾನ ನಡುವಿನ ರಾಜತಾಂತ್ರಿಕ ಉದ್ವಿಗ್ನತೆಯಿಂದ 2009ರಿಂದ ಐಪಿಎಲ್‌ನಲ್ಲಿ ಯಾವುದೇ ಪಾಕಿಸ್ತಾನ ಆಟಗಾರರು ಭಾಗವಹಿಸಿಲ್ಲ. ಅದಾಗ್ಯೂ ಪೆಹಲ್‌ಗಾಮ್‌ ದಾಳಿ, ಆಪರೇಷನ್‌ ಸಿಂದೂರದ ನಂತರ ಭಾರತ-ಪಾಕ್‌ ಪಂದ್ಯದಲ್ಲಿ ಶೇಕ್‌ ಹ್ಯಾಂಡ್‌ ಕೂಡ ಮಾಡಲಾಗುತ್ತಿಲ್ಲ. ಇಷ್ಟೆಲ್ಲಾ ಬೆಳವಣಿಗೆಗಳು ಆಗಿದ್ದರೂ ಭಾರತದ ವಾಯುಪಡೆಯ ಬಗ್ಗೆ ಅಪಹಾಸ್ಯ ಮಾಡಿದ್ದ ಅಬ್ರಾರ್‌ ಅವರನ್ನು ತಂಡಕ್ಕೆ ಆಯ್ಕೆ ಮಾಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು