T20 World Cup: ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಟಿ20 ವಿಶ್ವಕಪ್‌ನ ಸೂಪರ್ 8ರ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಂಡದ ವಿರುದ್ಧ 4 ವಿಕೆಟ್‌ಗಳ ಗೆಲುವು ಸಾಧಿಸುವ ಮೂಲಕ ಇಂಗ್ಲೆಂಡ್ ತಂಡ ಸೆಮಿಫೈನಲ್ ಪ್ರವೇಶಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ನ್ಯೂಜಿಲ್ಯಾಂಡ್, 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 159 ರನ್ ಗಳಿಸಿತು. ತಂಡದ ಪರ ಟಿಮ್ ಸೀಫಟ್ 35, ಫಿನ್ ಅಲೆನ್ 29, ರಚಿನ್ ರವೀಂದ್ರ 11, ಗ್ಲೆನ್ ಫಿಲಿಪ್ಸ್ 39, ಮಾರ್ಕ್ ಚಾಪ್ಮನ್ 15, ಡ್ಯಾರಿಲ್ ಮಿಚೆಲ್ 3, ಮಿಚೆಲ್ ಸ್ಯಾಂಟ್ನರ್ ಅಜೇಯ 9, ಕೋಲ್ ಮೆಕ್‌ಕಾಂಚಿ 14, ಮ್ಯಾಟ್ ಹೆನ್ರಿ ಅಜೇಯ 1 ರನ್ ಗಳಿಸಿದರು.

ಇದನ್ನೂ ಓದಿ: ಜಾರ್ಜಿಯಾ ವೋಲ್ ಶತಕ, ಆಸ್ಟ್ರೇಲಿಯಾಗೆ ಒಡಿಐ ಸರಣಿ
160 ರನ್‌ಗಳ ಗುರಿ ಬೆನ್ನತ್ತಿದ ಇಂಗ್ಲೆಂಡ್, 3 ಬಾಲ್‌ಗಳು ಬಾಕಿ ಇರುವಂತೆ ಗೆಲುವಿನ ನಗೆ ಬೀರಿತು. 19.3 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 161 ರನ್ ಬಾರಿಸಿತು. ತಂಡದ ಪರ ಟಾಮ್ ಬ್ಯಾಂಟನ್ 33, ವಿಲ್ ಜ್ಯಾಕ್ಸ್ ಅಜೇಯ 32, ಹ್ಯಾರಿ ಬ್ರೂಕ್ 26, ಜಾಕೋಬ್ ಬೆಥೆಲ್ 21, ಸ್ಯಾಮ್ ಕರನ್ 24, ರೆಹಾನ್ ಅಹ್ಮದ್ ಅಜೇಯ 19, ಫಿಲ್ ಸಾಲ್ಟ್ 2 ರನ್ ಗಳಿಸಿದರು. ಜೋಸ್ ಬಟ್ಲರ್ ಶೂನ್ಯ ಸುತ್ತಿದರು.

ಇಂಗ್ಲೆಂಡ್ ಬೌಲರ್‌ಗಳಾದ ಆದಿಲ್ ರಶೀದ್, ವಿಲ್ ಜ್ಯಾಕ್, ರೆಹಾನ್ ಅಹ್ಮದ್ ತಲಾ 2, ಲಿಯಾಮ್ ಡಾಸನ್ 1 ವಿಕೆಟ್ ಪಡೆದರು. ನ್ಯೂಜಿಲ್ಯಾಂಡ್ ಬೌಲರ್‌ಗಳಾದ ರಚಿನ್ ರವೀಂದ್ರ 3, ಮ್ಯಾಟ್ ಹೆನ್ರಿ, ಲಾಕಿ ಫರ್ಗುಸನ್, ಗ್ಲೆನ್ ಫಿಲಿಪ್ಸ್ ತಲಾ 1 ವಿಕೆಟ್ ಪಡೆದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

