ಈ ಸಲನೂ ಕಪ್‌ ನಮ್ದೇ: ನ್ಯೂಜಿಲ್ಯಾಂಡ್‌ ಮಣಿಸಿ ಟಿ20 ವಿಶ್ವಕಪ್‌ ಗೆದ್ದ ಭಾರತ

t20-world-cup-india-beats-new-zealand-champions

ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಟಿ20 ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ನ್ಯೂಜಿಲ್ಯಾಂಡ್‌ ವಿರುದ್ಧ ಭಾರತ 96 ರನ್‌ಗಳ ಗೆಲುವು ದಾಖಲಿಸಿ ವಿಶ್ವಕಪ್‌ ಎತ್ತಿಹಿಡಿಯಿತು.

ಟಾಸ್‌ ಸೋತು ಬ್ಯಾಟಿಂಗ್‌ ಮಾಡಿದ ಭಾರತದ ಆಟಗಾರರು ನ್ಯೂಜಿಲ್ಯಾಂಡ್‌ ಬೌಲರ್‌ಗಳನ್ನು ಬೆಂಡೆತ್ತಿದರು. ಸೆಮಿ ಫೈನಲ್‌ ಪಂದ್ಯದಲ್ಲಿ ಬೃಹತ್‌ ಮೊತ್ತ ದಾಖಲಿಸಿ ಗೆಲುವಿಗೆ ಕಾರಣಕರ್ತರಾಗಿದ್ದ ಸಂಜು ಸ್ಯಾಮ್ಸನ್‌ ಫೈನಲ್‌ ಪಂದ್ಯದಲ್ಲೂ ಭರ್ಜರಿ ಬ್ಯಾಟಿಂಗ್‌ ಪ್ರದರ್ಶನ ತೋರಿ ಫೈನಲ್‌ ಪಂದ್ಯ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. 46 ಎಸೆತಗಳಲ್ಲಿ 8 ಸಿಕ್ಸರ್‌ಗಳನ್ನು ಸಿಡಿಸಿ 5 ಬೌಂಡರಿಗಳನ್ನು ಬಾರಿಸಿ ಒಟ್ಟು 89 ರನ್‌ ಗಳಿಸಿದರು.

Advertisement

ಇದನ್ನೂ ಓದಿ: ಟಿ20 ವಿಶ್ವಕಪ್ ಇತಿಹಾಸದಲ್ಲೇ ಅತಿ ಹೆಚ್ಚಿನ ಪವರ್‌ಪ್ಲೇ ಸ್ಕೋರ್ ದಾಖಲೆ ಮಾಡಿದ ಟೀಂ ಇಂಡಿಯಾ

ಇನ್ನೊಂದೆಡೆ ಅಭಿಷೇಕ್‌ ಶರ್ಮಾ ಅವರು ಅತ್ಯಂತ ವೇಗದ ಅರ್ಧಶತಕ ಬಾರಿಸಿ ಗಮನಸೆಳೆದರು. 21 ಎಸೆತಗಳಲ್ಲಿ 3 ಸಿಕ್ಸ್‌, 6 ಬೌಂಡರಿಗಳನ್ನು ಸಿಡಿಸಿ 52 ರನ್‌ ಬಾರಿಸಿದರು. ಅದೇ ರೀತಿ ಅಬ್ಬರಿಸಿದ ಇಶಾನ್‌ ಕಿಶಾನ್‌ 25 ಎಸೆತಗಳಲ್ಲಿ 4 ಬೌಂಡರಿ, 4 ಸಿಕ್ಸ್‌ಗಳನ್ನು ಬಾರಿಸಿ 54 ರನ್‌ ಗಳಿಸಿದರು.

ಹಾರ್ದಿಕ್‌ ಪಾಂಡ್ಯ 18 ರನ್‌ ಗಳಿಸಿದರೆ, ತಂಡದ ನಾಯಕ ಸೂರ್ಯಕುಮಾರ್‌ ಯಾದವ್‌ ಶೂನ್ಯಕ್ಕೆ ಔಟ್ ಆದರು. ತಿಲಕ್‌ ವರ್ಮಾ ಅವರು ಅಜೇಯ 8 ರನ್‌ ಬಾರಿಸಿದರೆ, ತಂಡದ ಮೊತ್ತವನ್ನು 250ರ ಗಡಿ ದಾಟಿಸುವಲ್ಲಿ ಶಿವಂ ದುಬೆ ಪ್ರಮುಖ ಪಾತ್ರವಹಿಸಿದರು. 8 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸ್‌ಗಳನ್ನು ಬಾರಿಸಿ ಅಜೇಯ 26 ರನ್‌ ಗಳಿಸಿದರು.

ಕಿವೀಸ್‌ ಬೌಲರ್‌ಗಳಾದ ಜೇಮ್ಸ್‌ ನೀಶಮ್‌ ಮೂರು ವಿಕೆಟ್‌ಗಳನ್ನು ಕಬಳಿಸಿದರೆ, ರಾಚಿನ್‌ ರವೀಂದ್ರ, ಮ್ಯಾಟ್‌ ಹೆನ್ರಿ ತಲಾ 1 ವಿಕೆಟ್‌ ಪಡೆದರು.

ಇದನ್ನೂ ಓದಿ: ಅಭಿಷೇಕ್ ಶರ್ಮಾ ವಿಶ್ವ ದಾಖಲೆ: ಟಿ20 ವಿಶ್ವಕಪ್ ಫೈನಲ್‌ನಲ್ಲಿ ಅತಿ ವೇಗದ ಅರ್ಧಶತಕ!

256 ರನ್‌ಗಳ ಗುರಿ ಬೆನ್ನತ್ತಿದ ಕಿವೀಸ್‌, 19 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು 159 ರನ್‌ ಗಳಿಸಲಷ್ಟೇ ಶಕ್ತವಾಯಿತು. ಟಿಮ್‌ ಸೀಫರ್ಟ್‌ 26 ಎಸೆತಗಳಲ್ಲಿ 5 ಸಿಕ್ಸರ್‌ಗಳನ್ನು ಸಿಡಿಸಿ 2 ಬೌಂಡರಿ ಬಾರಿಸಿ 52 ರನ್‌ ಬಾರಿಸಿದರು. ಫಿನ್‌ ಅಲೆನ್‌ 9, ರಾಚಿನ್‌ ರವೀಂದ್ರ 1, ಗ್ಲೆನ್‌ ಫಿಲಿಪ್ಸ್‌ 5, ಮಾರ್ಕ್‌ ಚಾಪ್ಮನ್‌ 3, ಡ್ಯಾರಿಲ್‌ ಮಿಚೆಲ್‌ 17, ಮಿಚೆಲ್‌ ಸ್ಯಾಂಟ್ನರ್‌ 43, ಜೇಮ್ಸ್‌ ನೀಶಮ್‌ 8, ಲಾಕಿ ಫರ್ಗುಸನ್ ಅಜೇಯ 6, ಜಾಕೋಬ್‌ ಡಫ್ಪಿ 3 ರನ್‌ ಗಳಿಸಿದರು. ಮ್ಯಾಟ್‌ ಹೆನ್ರಿ ಶೂನ್ಯ ಸುತ್ತಿದರು.

ಭಾರತದ ಬೌಲರ್‌ಗಳಾದ ವರುಣ್‌ ಚಕ್ರವರ್ತಿ 1, ಅಕ್ಷರ್‌ ಪಟೇಲ್‌ 3, ಜಸ್ಪ್ರೀತ್‌ ಬುಮ್ರಾ 4, ಹಾರ್ದಿಕ್‌ ಪಾಂಡ್ಯ, ಅಭಿಷೇಕ್‌ ಶರ್ಮಾ ತಲಾ 1 ವಿಕೆಟ್‌ ಪಡೆದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು