ಮೊನಾಲಿಸಾ ಅವರು ತಮ್ಮ ಚೊಚ್ಚಲ ಚಿತ್ರವಾದ ‘ದಿ ಡೈರಿ ಆಫ್ ಮಣಿಪುರ’ (The Diary of Manipur) ನಿರ್ದೇಶಕ ಸನೋಜ್ ಮಿಶ್ರಾ ವಿರುದ್ಧ ಗಂಭೀರವಾದ ಲೈಂಗಿಕ ಕಿರುಕುಳದ ಆರೋಪಗಳನ್ನು ಮಾಡಿದ್ದಾರೆ. ಶೂಟಿಂಗ್ ಸಮಯದಲ್ಲಿ ನಿರ್ದೇಶಕರು ತಮಗೆ ತೊಂದರೆ ನೀಡಿದ್ದಾರೆ ಎಂದು ಅವರು ಇತ್ತೀಚಿನ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.ಈ ವಿವಾದದ ಹಿನ್ನೆಲೆಯಲ್ಲಿ ನಿರ್ದೇಶಕ ಸನೋಜ್ ಮಿಶ್ರಾ ಅವರು ‘ದಿ ಡೈರಿ ಆಫ್ ಮಣಿಪುರ’ ಚಿತ್ರವನ್ನು ಅರ್ಧಕ್ಕೆ ನಿಲ್ಲಿಸುವುದಾಗಿ (Shelved) ಘೋಷಿಸಿದ್ದಾರೆ. ನಟಿಯ ಆರೋಪಗಳು ಸುಳ್ಳು ಎಂದು ಅವರು ಪ್ರತಿಪಾದಿಸಿದ್ದಾರೆ.
ಮೊನಾಲಿಸಾ ಅವರು ಇತ್ತೀಚೆಗೆ ಕೇರಳದಲ್ಲಿ ತಮ್ಮ ಪ್ರಿಯಕರ ಫರ್ಮಾನ್ ಖಾನ್ ಅವರನ್ನು ವಿವಾಹವಾಗಿದ್ದರು. ಈ ಮದುವೆಯ ನಂತರ ಅವರಿಗೆ ಮತ್ತು ಅವರ ಪತಿಗೆ ಜೀವ ಬೆದರಿಕೆಗಳು ಬರುತ್ತಿದ್ದು, ರಕ್ಷಣೆಗಾಗಿ ಅವರು ಮುಖ್ಯಮಂತ್ರಿಗಳ ಮೊರೆ ಹೋಗಿದ್ದಾರೆ.

ಮದುವೆಯ ನಿರ್ಧಾರಕ್ಕೆ ಮೊನಾಲಿಸಾ ಅವರ ಕುಟುಂಬದವರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.ಈ ಬೆಳವಣಿಗೆಯಿಂದಾಗಿ ಕುಂಭಮೇಳದ ಮೂಲಕ ಸ್ಟಾರ್ ಆಗಿದ್ದ ಯುವತಿಯ ಸಿನಿಮಾ ಜೀವನ ಸದ್ಯಕ್ಕೆ ಸಂಕಷ್ಟಕ್ಕೆ ಸಿಲುಕಿದಂತಾಗಿದೆ. ಕುಂಭಮೇಳದ ಫೋಟೋಗಳ ಮೂಲಕ ಪ್ರಸಿದ್ಧರಾದ ನಂತರ ಅವರಿಗೆ ‘ದಿ ಡೈರಿ ಆಫ್ ಮಣಿಪುರ’ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ಆದರೆ, ಚಿತ್ರದ ಶೂಟಿಂಗ್ ಸಮಯದಲ್ಲಿ ನಿರ್ದೇಶಕ ಸನೋಜ್ ಮಿಶ್ರಾ ತಮಗೆ ಮಾನಸಿಕವಾಗಿ ಮತ್ತು ಲೈಂಗಿಕವಾಗಿ ಕಿರುಕುಳ ನೀಡಿದ್ದಾರೆ ಎಂದು ಅವರು ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ಕಣ್ಣೀರಿಟ್ಟಿದ್ದಾರೆ.
ಇದನ್ನೂ ಓದಿ: ನಟಿ ಮೊನಾಲಿಸಾ ಭೋಸ್ಲೆ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ನಿರ್ದೇಶಕ ಸನೋಜ್ ಮಿಶ್ರಾ ಸಿದ್ಧ!
ಈ ಆರೋಪಗಳನ್ನು ಸನೋಜ್ ಮಿಶ್ರಾ ನಿರಾಕರಿಸಿದ್ದಾರೆ. ಮೊನಾಲಿಸಾ ಅವರು ಶೂಟಿಂಗ್ಗೆ ಸರಿಯಾಗಿ ಸಹಕರಿಸುತ್ತಿಲ್ಲ ಮತ್ತು ವಿನಾಕಾರಣ ಹಗರಣ ಸೃಷ್ಟಿಸುತ್ತಿದ್ದಾರೆ ಎಂದು ಅವರು ದೂರಿದ್ದಾರೆ. ಈ ವಿವಾದದಿಂದಾಗಿ ಚಿತ್ರದ ಕೆಲಸವನ್ನು ನಿಲ್ಲಿಸುವುದಾಗಿ ಅವರು ಘೋಷಿಸಿದ್ದಾರೆ. ಮೊನಾಲಿಸಾ ಅವರು ಫರ್ಮಾನ್ ಖಾನ್ ಎಂಬುವವರನ್ನು ಮದುವೆಯಾದ ನಂತರ ಈ ವಿವಾದ ಮತ್ತಷ್ಟು ಕಾವೇರಿದೆ. ಅವರ ಕುಟುಂಬದವರು ಈ ಮದುವೆಯನ್ನು ವಿರೋಧಿಸಿದ್ದು, ಮಗಳನ್ನು “ಬ್ರೈನ್ ವಾಶ್” ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಮತ್ತೊಂದೆಡೆ, ಮೊನಾಲಿಸಾ ಅವರು ತಮಗೆ ಮತ್ತು ತಮ್ಮ ಪತಿಗೆ ಜೀವ ಬೆದರಿಕೆ ಇದೆ ಎಂದು ಹೇಳಿ ರಕ್ಷಣೆ ಕೋರಿದ್ದಾರೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ‘ಲವ್ ಜಿಹಾದ್’ ಎಂಬ ಚರ್ಚೆಗೂ ಕಾರಣವಾಗಿದೆ.
ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

