Breaking News

ನನ್ನ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿಗೆ ವಿರಾಟ್ ಕೊಹ್ಲಿಯೇ ತಂದೆ!: ಯುವತಿಯ ಸ್ಫೋಟಕ ಹೇಳಿಕೆ

ಬೆಂಗಳೂರು: ಆರ್‌ಸಿಬಿ ಮತ್ತು ಎಸ್‌ಆರ್‌ಹೆಚ್ ನಡುವಿನ ಮೊದಲ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ, ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ವಿರುದ್ಧ ತೆಲುಗು ಮೂಲದ ಯುವತಿಯೊಬ್ಬಳು ಸ್ಫೋಟಕ ಎನ್ನಲಾದ ಹೇಳಿಕೆ ನೀಡಿದ್ದಾಳೆ. ಇನ್‌ಸ್ಟಾಗ್ರಾಮ್‌ನಲ್ಲಿ ‘cricminaati’ ಎಂಬ ಖಾತೆ ಹೊಂದಿರುವ ಈ ಯುವತಿಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಮೂಡಿಸಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ ಮಾತನಾಡಿದ ಯುವತಿ, “ವಿರಾಟ್ ಕೊಹ್ಲಿ ನನಗೆ ಲವ್ ಬೈಟ್ ನೀಡಿದ್ದರು ಎಂದು ಹಿಂದೆ ಹೇಳಿದ್ದಾಗ ಯಾರೂ ನಂಬಿರಲಿಲ್ಲ. ಈಗ ನನ್ನ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿಗೆ ವಿರಾಟ್ ಕೊಹ್ಲಿಯೇ ತಂದೆ ಎಂಬ ಸಾಕ್ಷಿ ತಂದಿದ್ದೇನೆ. ಇದು ಸುಳ್ಳಾಗಲು ಸಾಧ್ಯವಿಲ್ಲ” ಎಂಬ ಅರ್ಥದ ವಿವಾದಾತ್ಮಕ ಹೇಳಿಕೆ ನೀಡಿದ್ದಾಳೆ. ಅಲ್ಲದೆ, ಇಂದಿನ ಪಂದ್ಯದಲ್ಲಿ ಆರ್‌ಸಿಬಿ ಗೆಲ್ಲಲಿ ಎಂದು ಹಾರೈಸಿದ್ದಾಳೆ.

ಇದನ್ನೂ ಓದಿ: ವಾರಣಾಸಿಯಲ್ಲಿ ಅಘೋರಿ-ವಿದೇಶಿ ಮಹಿಳೆ ಚುಂಬನ ವಿಡಿಯೋ ವೈರಲ್!

ಇಲ್ಲಿದೆ ನೋಡಿ ವಿಡಿಯೋ:

ಈ ವಿಡಿಯೋ ಹೊರಬೀಳುತ್ತಿದ್ದಂತೆ ವಿರಾಟ್ ಕೊಹ್ಲಿ ಅಭಿಮಾನಿಗಳು ಯುವತಿಯ ವಿರುದ್ಧ ಕೆಂಡಕಾರಿದ್ದಾರೆ. ಪಬ್ಲಿಸಿಟಿಗಾಗಿ ಮತ್ತು ಫಾಲೋವರ್ಸ್ ಹೆಚ್ಚಿಸಿಕೊಳ್ಳಲು ಇಂತಹ ಕೀಳುಮಟ್ಟದ ದಾರಿ ಹಿಡಿದಿದ್ದಾಳೆ ಎಂದು ನೆಟ್ಟಿಗರು ಟೀಕಿಸಿದ್ದಾರೆ. ಈಕೆಯ ಹೇಳಿಕೆಗೆ ಯಾವುದೇ ಅಧಿಕೃತ ಆಧಾರಗಳಿಲ್ಲ ಮತ್ತು ಇದು ಕೇವಲ ವೈರಲ್ ಆಗುವ ಉದ್ದೇಶದಿಂದ ಮಾಡಿದ ವಿಡಿಯೋ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.

ಕ್ರಿಕೆಟ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *