Breaking News

ಇಂದಿನ ರಾಶಿ ಭವಿಷ್ಯ: ಆಗಸ್ಟ್ 31 – ಸೋಮವಾರದ ದ್ವಾದಶ ರಾಶಿಗಳ ಫಲಾಯನ ಇಲ್ಲಿದೆ

♈ ಮೇಷ ರಾಶಿ (Aries)
ಎಲ್ಲ ಸಂದರ್ಭಗಳಲ್ಲಿ ಪರಿಸ್ಥಿತಿ ಒಂದೇ ರೀತಿ ಇರುವುದಿಲ್ಲ. ಸಂಗಾತಿಯ ಮಾತುಗಳು ಮನಸ್ಸಿಗೆ ಕಿರಿಕಿರಿ ಉಂಟುಮಾಡಬಹುದು. ಆದರೂ ಚಿಂತೆಯಿಂದ ಹೊರಬರಲು ಸೂಕ್ತ ದಾರಿಗಳನ್ನು ಹುಡುಕಿಕೊಳ್ಳುವಿರಿ. ಇಂದು ನಿಮ್ಮ ವಿರುದ್ಧ ಮಾತನಾಡುವವರಿಗೆ ಸೂಕ್ತ ಉತ್ತರ ನೀಡಲಿದ್ದೀರಿ. ಇಷ್ಟವಿಲ್ಲದಿದ್ದರೂ ಕೆಲವು ಕೆಲಸಗಳನ್ನು ಮಾಡಬೇಕಾಗಬಹುದು, ಅತಿಯಾದ ಚಿಂತೆಯಿಂದ ಮನಸ್ಸು ಹಾಳುಮಾಡಿಕೊಳ್ಳಬೇಡಿ.

♉ ವೃಷಭ ರಾಶಿ (Taurus)
ಇಂದು ನೀವು ಸೇವಾಭಾವನೆಯಿಂದ ಹೊರಬರುವಿರಿ. ಕಳೆದುಕೊಂಡ ಸಂಪತ್ತು ಮತ್ತೆ ಸಿಗುವುದು ಕಷ್ಟ. ಹಣದ ಹೂಡಿಕೆ ಮಾಡುವಾಗ ಸರಿಯಾದ ಮಾಹಿತಿ ಪಡೆದು ಮುನ್ನಡೆಯಿರಿ. ನಿಮ್ಮ ಮಾತನ್ನು ಯಾರೂ ಕೇಳುತ್ತಿಲ್ಲ ಎಂಬ ಬೇಸರ ಕಾಡಬಹುದು. ದಾಂಪತ್ಯದಲ್ಲಿ ಹಳೆಯ ವಿಚಾರಗಳನ್ನು ಮತ್ತೆ ಕೆದಕಲು ಹೋಗದಿರಿ.

♊ ಮಿಥುನ ರಾಶಿ (Gemini)
ಹಿರಿಯರಿಂದ ಪ್ರಶಂಸೆ ಹಾಗೂ ಆಶೀರ್ವಾದ ಲಭಿಸಲಿದೆ. ನೀವು ಆಡುವ ಸತ್ಯದ ಮಾತಿನಿಂದ ಸಹೋದ್ಯೋಗಿಗೆ ತೊಂದರೆಯಾಗುವ ಸಾಧ್ಯತೆ ಇದೆ. ಸಾಹಿತ್ಯ ಕ್ಷೇತ್ರದಲ್ಲಿ ವಿಶೇಷ ಗೌರವ ಸಿಗಲಿದೆ. ನಿಮ್ಮ ಉತ್ತಮ ದಿನಚರಿಯಿಂದ ಆರೋಗ್ಯಕ್ಕೆ ಲಾಭವಾಗಲಿದೆ. ವಿದ್ಯಾಭ್ಯಾಸಕ್ಕಾಗಿ ಮನೆಯಿಂದ ದೂರವಿರುವುದು ಕೊಂಚ ಕಷ್ಟವೆನಿಸಬಹುದು.

♋ ಕರ್ಕಾಟಕ ರಾಶಿ (Cancer)
ಎಲ್ಲ ಸಂದರ್ಭಗಳನ್ನೂ ಆರ್ಥಿಕ ದೃಷ್ಟಿಯಿಂದಲೇ ಅಳೆಯುವುದು ಸೂಕ್ತವಲ್ಲ. ಸ್ವಾವಲಂಬಿಯಾಗಲು ಬಯಸಿದರೂ ಸನ್ನಿವೇಶಗಳು ಸಹಕರಿಸದಿರಬಹುದು. ಅಹಂಕಾರದಿಂದ ಕೈಗೆ ಬಂದ ಉದ್ಯೋಗವನ್ನು ಕಳೆದುಕೊಳ್ಳುವ ಎಚ್ಚರಿಕೆ ಇರಲಿ. ವಿದ್ಯಾರ್ಥಿಗಳಿಗೆ ಸಮಯ ಪಾಲನೆ ಅತ್ಯಂತ ಮುಖ್ಯ. ವಾಹನ ದುರಸ್ತಿ ಅನಿವಾರ್ಯವಾಗಬಹುದು.

♌ ಸಿಂಹ ರಾಶಿ (Leo)
ಮನೆ ನಿರ್ಮಾಣ ಕಾರ್ಯಕ್ಕೆ ಸ್ವಂತ ಜನರಿಂದಲೇ ತೊಂದರೆ ಎದುರಾಗಬಹುದು. ಅನಿವಾರ್ಯವಾಗಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿರಿ. ನಿಮ್ಮ ರಹಸ್ಯ ಯೋಜನೆಗಳನ್ನು ಯಾರ ಬಳಿಯೂ ಹಂಚಿಕೊಳ್ಳಬೇಡಿ. ಆಮದಿಗೆ ಬೇಕಾದ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಿ. ಸ್ತ್ರೀಯರ ಉದ್ಯಮದಲ್ಲಿ ಕೊಂಚ ಅಡೆತಡೆಗಳು ಎದುರಾಗಬಹುದು.

♍ ಕನ್ಯಾ ರಾಶಿ (Virgo)
ಗೊಂದಲಗಳಿಂದಾಗಿ ವೃತ್ತಿಗೆ ಸಂಬಂಧಿಸಿದ ನಿರ್ಧಾರ ತೆಗೆದುಕೊಳ್ಳುವುದು ಕಷ್ಟವಾದೀತು. ಸಂಗಾತಿಯ ವಿಚಾರವಾಗಿ ಹೆಚ್ಚು ಚಿಂತೆ ಕಾಡಬಹುದು. ಆದರೆ ನಿಮ್ಮ ಸಮಯಸ್ಫೂರ್ತಿಯಿಂದ ಕಠಿಣ ಸನ್ನಿವೇಶವನ್ನು ಸುಲಭವಾಗಿ ದಾಟುವಿರಿ. ಸುಮ್ಮನೆ ಅನುಮಾನಪಟ್ಟು ಸ್ನೇಹ ಹಾಳುಮಾಡಿಕೊಳ್ಳಬೇಡಿ. ದುಡುಕಿ ನಿರ್ಧಾರ ಕೈಗೊಳ್ಳುವುದು ಬೇಡ.

♎ ತುಲಾ ರಾಶಿ (Libra)
ಮಕ್ಕಳ ವಿಚಾರದಲ್ಲಿ ದಾಂಪತ್ಯದಲ್ಲಿ ವಾಗ್ವಾದ ನಡೆದು ವೈಮನಸ್ಸು ಉಂಟಾಗಬಹುದು. ಹಳೆಯ ವಿಷಯಗಳನ್ನು ಮತ್ತೆ ನೆನಪಿಸಿಕೊಂಡು ಬೇಸರಗೊಳ್ಳುವಿರಿ. ಪ್ರಯಾಣದಲ್ಲಿ ಅಡೆತಡೆಗಳು ಬರಬಹುದು. ವೃತ್ತಿ ಅನ್ವೇಷಣೆ ವೇಗವಾಗಿ ಸಾಗಲಿದೆ. ಅಪರಿಚಿತರು ಉದ್ಯೋಗದ ನೆಪದಲ್ಲಿ ಹಣ ಕೇಳಿದರೆ ಎಚ್ಚರದಿಂದಿರಿ.

♏ ವೃಶ್ಚಿಕ ರಾಶಿ (Scorpio)
ಜೀವನದಲ್ಲಿ ಉತ್ತಮ ಗುರಿ ಹೊಂದಲು ಹಿತೈಷಿಗಳ ಸಹಾಯ ಸಿಗಲಿದೆ. ನಿಮ್ಮ ಮಾತನ್ನು ಉಳಿಸಿಕೊಳ್ಳಲು ಕಷ್ಟಪಡಬೇಕಾಗಬಹುದು. ಇಂದು ದಿನದ ಹೆಚ್ಚಿನ ಸಮಯವನ್ನು ಏಕಾಂತದಲ್ಲಿ ಕಳೆಯಲು ಬಯಸುವಿರಿ. ಯಾರೊಂದಿಗೂ ಮಾತನಾಡಲು ಮನಸ್ಸಾಗುವುದಿಲ್ಲ. ವಾಹನವನ್ನು ಬೇರೆಯವರ ಕಾರ್ಯಕ್ಕೆ ನೀಡಬೇಕಾಗಬಹುದು.

♐ ಧನು ರಾಶಿ (Sagittarius)
ಮಾಡಿದ ತಪ್ಪನ್ನು ನೀವೇ ಒಪ್ಪಿಕೊಂಡರೆ ದಂಡನೆಯಲ್ಲಿ ವಿನಾಯಿತಿ ಸಿಗಬಹುದು. ಹಣಕಾಸಿನ ಅಭಾವದಿಂದ ಸಂಗಾತಿಯಿಂದ ಹಣ ಪಡೆಯುವಿರಿ. ಕೆಲಸದ ಸ್ಥಳದ ಒತ್ತಡವನ್ನು ಮನೆಗೆ ತರಬೇಡಿ. ಮನೆಗೆ ಬಂದ ಅತಿಥಿಗಳಿಗೆ ಉತ್ತಮ ಆತಿಥ್ಯ ನೀಡುವಿರಿ. ಅತಿಯಾದ ಮಾತಿನಿಂದ ಕಿರಿಕಿರಿಯಾಗುವ ಸಾಧ್ಯತೆ ಇದೆ.

♑ ಮಕರ ರಾಶಿ (Capricorn)
ಇತರರಿಗೆ ಉಪಕಾರ ಮಾಡುವುದರಿಂದ ಮನಸ್ಸಿಗೆ ಸಂತೋಷ ಸಿಗಲಿದೆ. ಕುಟುಂಬದೊಂದಿಗೆ ಹೆಚ್ಚಿನ ಸಮಯ ಕಳೆಯುವಿರಿ ಹಾಗೂ ತಾಯಿಯಿಂದ ಉತ್ತಮ ಹಿತವಚನ ಲಭಿಸಲಿದೆ. ಹಣಕಾಸಿಗೆ ಸಂಬಂಧಿಸಿದ ನಿಮ್ಮ ಯೋಜನಾಬದ್ಧ ಕ್ರಮಗಳು ಫಲ ನೀಡಲಿವೆ. ಕೃಷಿ ವ್ಯವಹಾರದಲ್ಲಿ ಲಾಭಗಳಿಸುವ ಹೊಸ ಆಲೋಚನೆಗಳು ಬರಲಿವೆ.

♒ ಕುಂಭ ರಾಶಿ (Aquarius)
ವಿಶೇಷ ಪ್ರೇರಣೆಯಿಂದ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಶ್ರಮಿಸುವಿರಿ. ಸಣ್ಣ ವ್ಯಾಪಾರಿಗಳಿಗೆ ಇಂದಿನ ದಿನ ಲಾಭದಾಯಕವಾಗಿದೆ. ಕಚೇರಿಯಲ್ಲಿ ನೀಡಿದ ಜವಾಬ್ದಾರಿಯನ್ನು ಸ್ವ-ಇಚ್ಛೆಯಿಂದ ಪೂರ್ಣಗೊಳಿಸುವಿರಿ. ವಾಹನ ಚಾಲನೆ ಮಾಡುವಾಗ ನಿಧಾನವಿರಲಿ. ಕುಟುಂಬದ ಜೊತೆ ಸಂತೋಷದ ಕ್ಷಣಗಳನ್ನು ಕಳೆಯುವಿರಿ.

♓ ಮೀನ ರಾಶಿ (Pisces)
ಹೆಚ್ಚಿನ ಕೆಲಸಗಳು ಬಾಕಿ ಇದ್ದರೂ ಯಾವುದೇ ಚಿಂತೆ ಇಲ್ಲದೆ ನಿರಾಳವಾಗಿರುವಿರಿ. ಆಪ್ತರು ನಿಮ್ಮಿಂದ ದೂರವಾಗುವುದು ವಿಚಲಿತಗೊಳಿಸಬಹುದು. ಕೈಗೂಡದ ಕಾರ್ಯಗಳಿಗೆ ಮರಳಿ ಯತ್ನ ಮಾಡುವಿರಿ. ಒತ್ತಾಯದಿಂದ ಒಲಿಸಿಕೊಳ್ಳಲು ಪ್ರಯತ್ನಿಸುವುದು ಯಶಸ್ಸು ನೀಡುವುದಿಲ್ಲ. ಮುಕ್ತ ಮನಸ್ಸಿನಿಂದ ಕಾರ್ಯನಿರ್ವಹಿಸುವುದು ಮುಖ್ಯ.

 

Leave a Reply

Your email address will not be published. Required fields are marked *