ಟ್ರಂಪ್ ಆರ್ಭಟಕ್ಕೆ ನಡುಗಿದ ಪರ್ಷಿಯನ್ ಗಲ್ಫ್: ಇರಾನ್‌ನ 158 ಹಡಗುಗಳು ಉಡೀಸ್!

ಟೆಹ್ರಾನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ವಿರುದ್ಧದ ಸಮರದಲ್ಲಿ ಮಹತ್ವದ ಘೋಷಣೆ ಮಾಡಿದ್ದು, ಇರಾನ್ ನೌಕಾಪಡೆಗೆ ಸೇರಿದ 158 ಹಡಗುಗಳನ್ನು ಅಮೆರಿಕ ಸೇನೆಯು ನಾಶಪಡಿಸಿದೆ ಎಂದು ತಿಳಿಸಿದ್ದಾರೆ. ಈ ಬೆಳವಣಿಗೆಯಿಂದ ಪರ್ಷಿಯನ್ ಗಲ್ಫ್ ಪ್ರಾಂತ್ಯದಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿದ್ದು, ಜಾಗತಿಕ ಮಟ್ಟದಲ್ಲಿ ತಲ್ಲಣ ಸೃಷ್ಟಿಯಾಗಿದೆ.

ತಮ್ಮ ‘ಟ್ರುತ್ ಸೋಷಿಯಲ್’ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಟ್ರಂಪ್, “ಇರಾನ್‌ನ 158 ಹಡಗುಗಳನ್ನು ಸಂಪೂರ್ಣವಾಗಿ ನಾಶಪಡಿಸಲಾಗಿದೆ. ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ನಡೆಸುತ್ತಿದ್ದ ಅಕ್ರಮ ಸುಲಿಗೆ ಮತ್ತು ನೌಕಾಯಾನಕ್ಕೆ ಅಡ್ಡಿಪಡಿಸುವ ಕೃತ್ಯಗಳಿಗೆ ಈ ಮೂಲಕ ತಕ್ಕ ಉತ್ತರ ನೀಡಲಾಗಿದೆ,” ಎಂದು ಅಬ್ಬರಿಸಿದ್ದಾರೆ.

ಏಪ್ರಿಲ್ 13ರಿಂದಲೇ ಜಾರಿಗೆ ಬರುವಂತೆ ಇರಾನ್‌ನ ಎಲ್ಲಾ ಬಂದರುಗಳಿಗೆ ನೌಕಾ ದಿಗ್ಬಂಧನ ವಿಧಿಸಲು ಟ್ರಂಪ್ ಆದೇಶಿಸಿದ್ದಾರೆ. ಹಾರ್ಮುಜ್ ಜಲಸಂಧಿಯನ್ನು ಪ್ರವೇಶಿಸುವ ಅಥವಾ ಅಲ್ಲಿಂದ ಹೊರಹೋಗುವ ಇರಾನ್ ಹಡಗುಗಳನ್ನು ತಡೆಯಲು ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ಸನ್ನದ್ಧವಾಗಿದೆ. “ಯಾವುದೇ ಹಡಗು ನಮ್ಮನ್ನು ಎದುರಿಸಲು ಬಂದರೆ ಅದನ್ನು ತಕ್ಷಣವೇ ನಾಶಪಡಿಸಲಾಗುವುದು” ಎಂದು ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಒಪ್ಪಂದ ಪಾಲಿಸದಿದ್ದರೆ ಅಮೆರಿಕದಿಂದ ದಾಳಿ ಸಾಧ್ಯತೆ: ಟ್ರಂಪ್ ಎಚ್ಚರಿಕೆ

ಈ ದಿಗ್ಬಂಧನ ಮತ್ತು ಹಡಗುಗಳ ಧ್ವಂಸದ ಸುದ್ದಿಯಿಂದಾಗಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಗಗನಕ್ಕೇರಿದೆ. ಇರಾನ್ ಈ ನೌಕಾ ಕಾರ್ಯಾಚರಣೆಯನ್ನು ‘ಕಡಲ್ಗಳ್ಳತನ’ ಎಂದು ಕರೆದಿದ್ದು, ಅಮೆರಿಕಕ್ಕೆ ಪ್ರತ್ಯುತ್ತರ ನೀಡುವ ಎಚ್ಚರಿಕೆ ನೀಡಿದೆ.

ವಿದೇಶ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು