ಸಾಯಿ ಘಾಟ್‌ನಲ್ಲಿ ಪೂಜಾ ತ್ಯಾಜ್ಯ ಹೂತ ಮಹಿಳೆ: ವಿದೇಶಿ ಪ್ರವಾಸಿಗರ ಪ್ರಶ್ನೆ ವೈರಲ್ ಇಲ್ಲಿದೆ ಸಂಪೂರ್ಣ ಮಾಹಿತಿ

ಉತ್ತರಾಖಂಡ: ಋಷಿಕೇಶ್ನಲ್ಲಿ ಗಂಗಾ ನದಿ ತೀರದಲ್ಲಿ ಪೂಜಾ ತ್ಯಾಜ್ಯವನ್ನು ಎಸೆಯುತ್ತಿದ್ದ ಮಹಿಳೆಯನ್ನು ವಿದೇಶಿ ಮಹಿಳೆ ತರಾಟೆಗೆ ತೆಗೆದುಕೊಂಡ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಘಟನೆ ಸಾಯಿ ಘಾಟ್ ಪ್ರದೇಶದಲ್ಲಿ ನಡೆದಿದ್ದು, ವಿಡಿಯೋ ಭಾರೀ ಚರ್ಚೆಗೆ ಕಾರಣವಾಗಿದೆ. ವೈರಲ್ ವಿಡಿಯೋದಲ್ಲಿ ಮಹಿಳೆ ಮರಳಿನಲ್ಲಿ ಸಣ್ಣ ಗುಂಡಿ ತೋಡಿ, ಪ್ಲಾಸ್ಟಿಕ್ ಸೇರಿ ಪೂಜಾ ಸಾಮಗ್ರಿಗಳನ್ನು ಹೂಳುತ್ತಿರುವುದು ಕಾಣಿಸುತ್ತದೆ.

ಈ ಘಟನೆಗೆ ಸಾಕ್ಷಿಯಾದ ವಿದೇಶಿ ಮಹಿಳೆ ಸಿಯೆರಾ ಲಿಲಿಯನ್ ಆಕೆಯ ನಡೆಗೆ ಪ್ರಶ್ನೆ ಕೇಳಿದರೂ, ಮಹಿಳೆ ಅದನ್ನು ನಿರ್ಲಕ್ಷಿಸಿದ್ದಾಳೆ ಎಂದು ವರದಿಯಾಗಿದೆ. ಗಂಗಾ ತಾಯಿಗೆ ಪೂಜೆ ಮಾಡಿ ನಂತರ ಅದೇ ಸ್ಥಳದಲ್ಲಿ ಕಸದನ್ನು ಬಿಟ್ಟು ಹೋಗುವುದಕ್ಕೆ ಅರ್ಥವೇನು? ಎಂದು ಲಿಲಿಯನ್ ಪ್ರಶ್ನಿಸಿದ್ದಾರೆ. ಭಾರತವನ್ನು ಪ್ರೀತಿಸುವುದಾದರೂ, ಇಂತಹ ಘಟನೆಗಳು ನಿರಾಶೆ ಉಂಟುಮಾಡುತ್ತವೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ ಕಡಿಮೆ ಸಂಬಳಕ್ಕೆ ಪ್ರತಿಭಟನೆ: ಕಚೇರಿಯಲ್ಲಿ 5 ಗಂಟೆ ನಿದ್ದೆ ಮಾಡಿದ ಮಹಿಳೆ

ಅದೇ ವೇಳೆ, ಪೂಜಾ ತ್ಯಾಜ್ಯವನ್ನು ನದಿಗೆ ಎಸೆಯುವ ಪದ್ಧತಿ ಇನ್ನೂ ಮುಂದುವರಿದಿರುವುದು ಚಿಂತಾಜನಕ ಎಂದು ಅವರು ಹೇಳಿದ್ದು, ಇದು ಪವಿತ್ರ ಸ್ಥಳಗಳ ಗೌರವದ ಕೊರತೆಯನ್ನು ತೋರಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪ್ರತಿಕ್ರಿಯೆ ಹುಟ್ಟುಹಾಕಿದ್ದು, ಹಲವರು ನದಿಗಳನ್ನು ಮಾಲಿನ್ಯಗೊಳಿಸುವ ಇಂತಹ ಪದ್ಧತಿಯನ್ನು ತೀವ್ರವಾಗಿ ಟೀಕಿಸಿದ್ದಾರೆ.

ಇನ್ನಷ್ಟೂ ವೈರಲ್ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ 

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು