ಕಡಿಮೆ ಸಂಬಳಕ್ಕೆ ಪ್ರತಿಭಟನೆ: ಕಚೇರಿಯಲ್ಲಿ 5 ಗಂಟೆ ನಿದ್ದೆ ಮಾಡಿದ ಮಹಿಳೆ

ಚೀನಾ : ಕಡಿಮೆ ವೇತನ ನೀಡುತ್ತಿದ್ದ ಕಂಪನಿಯ ವಿರುದ್ಧ ಮುನಿಸುಗೊಂಡ ಮಹಿಳೆಯೊಬ್ಬರು ಕಚೇರಿಯಲ್ಲಿ ಐದು ಗಂಟೆಗಳ ಕಾಲ ನಿದ್ರಿಸಿದ ಘಟನೆ ಟ್ರೆಂಡಿಂಗ್ ಪಡೆದಿದೆ.

ಹೆನಾನ್ ಪ್ರಾಂತ್ಯದ ಶಾಂಗ್ಕಿಯ ನಗರದಲ್ಲಿರುವ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಈ ಮಹಿಳೆ, ತನ್ನ ಸಂಬಳ ಕಡಿಮೆ ಇರುವುದರಿಂದ ಅಸಮಾಧಾನಗೊಂಡಿದ್ದರು. ಸಂಬಳ ಎಷ್ಟಿದೆಯೋ ಅದಕ್ಕೆ ತಕ್ಕಷ್ಟೇ ಕೆಲಸ ಮಾಡುತ್ತೇನೆ ಎಂಬ ಮನೋಭಾವದಿಂದ ಕಚೇರಿಯಲ್ಲೇ ಐದು ಗಂಟೆಗಳ ಕಾಲ ನಿದ್ದೆ ಮಾಡಿದ್ದಾರೆ.

ನಿದ್ದೆಯಿಂದ ಎದ್ದ ನಂತರ ಆಕೆ ತನ್ನ ಬಾಸ್‌ನ ಮೇಜಿನ ಮೇಲೆ ಇದ್ದ ಚಾಕೊಲೇಟ್ ತೆಗೆದುಕೊಂಡಿದ್ದಾಳೆ. ರಕ್ತದಲ್ಲಿನ ಶುಗರ್ ಪ್ರಮಾಣ ಕಡಿಮೆಯಾಗುವ ಸಮಸ್ಯೆ ಹೊಂದಿದ್ದ ಬಾಸ್‌ಗೆ ಇದರಿಂದ ತೀವ್ರ ತೊಂದರೆ ಉಂಟಾಗಿ, ಅವನು ಬಹುತೇಕ ಕುಸಿಯುವ ಪರಿಸ್ಥಿತಿ ಎದುರಿಸಿದ್ದಾರೆ.

ಇದನ್ನೂ ಓದಿ ಡೇಟಿಂಗ್ ಆ್ಯಪ್‌ಗಳಲ್ಲಿ ‘ಪೆಟ್ ಫಿಶಿಂಗ್’ ಟ್ರೆಂಡ್: ಪ್ರಾಣಿಗಳಿಂದಲೇ ಪ್ರೀತಿಯ ಹುಡುಕಾಟ. 

ಈ ಘಟನೆ ನಂತರ, ಆಕೆಯ ಮೇಲಾಧಿಕಾರಿ ಕೋಪಗೊಂಡು ಮತ್ತೊಮ್ಮೆ ಕೆಲಸದ ವೇಳೆ ನಿದ್ದೆ ಮಾಡಿದರೆ ಉದ್ಯೋಗದಿಂದ ತೆಗೆದುಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ. ಇದಕ್ಕೆ ಪ್ರತಿಯಾಗಿ ಮಹಿಳೆ ಆನ್‌ಲೈನ್ ವಿಡಿಯೋ ಮೂಲಕ ತನ್ನ ಅಸಮಾಧಾನ ವ್ಯಕ್ತಪಡಿಸಿ, ನಾನು ಕೆಲಸ ಬಿಡುವುದಿಲ್ಲ ಎಂದು ಹೇಳಿದ್ದಾರೆ.

ಈ ಘಟನೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಭಿನ್ನ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಬಹುತೇಕ ಜನರು ಮಹಿಳೆಯ ನಡೆಗೆ ವಿರೋಧ ವ್ಯಕ್ತಪಡಿಸಿದ್ದು, ಇಂತಹ ವರ್ತನೆ ಯಾವುದೇ ಸಂಸ್ಥೆಯಲ್ಲಿ ಸಹಿಸಲಾಗುವುದಿಲ್ಲ ಎಂದು ಹೇಳಿದ್ದಾರೆ. ಕೆಲವರು ಇದನ್ನು ‘ಕ್ವೈಟ್ ಕ್ವಿಟಿಂಗ್’ (ಕಡಿಮೆ ಮಟ್ಟದಲ್ಲಿ ಮಾತ್ರ ಕೆಲಸ ಮಾಡುವ ಪ್ರವೃತ್ತಿ)ಗೆ ಹೋಲಿಸಿದ್ದಾರೆ.

ಇನ್ನಷ್ಟೂ ವೈರಲ್ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ 

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು