Breaking News

ಅಧ್ಯಕ್ಷರನ್ನು ವಶದಲ್ಲಿರಿಸಿ ‌ʼವೆನೆಜುವೆಲಾ 50 ಮಿಲಿಯನ್ ಬ್ಯಾರಲ್‌ ತೈಲ ಅಮೆರಿಕಕ್ಕೆ ಹಸ್ತಾಂತರಿಸಲಿದೆʼ ಎಂದ ಟ್ರಂಪ್

Trump says Venezuela will hand over 50 barrels of oil to US while detaining president Nicolas Maduro

ವೆನೆಜುವೆಲಾ ಅಧ್ಯಕ್ಷ ನಿಕೋಲಸ್‌ ಮಡುರೊ ಅವರನ್ನು ತನ್ನ ವಶದಲ್ಲಿರಿಸಿಕೊಂಡು, “30 ರಿಂದ 50 ಮಿಲಿಯನ್ ಬ್ಯಾರೆಲ್‌ಗಳಷ್ಟು ಅನುಮೋದಿತ ತೈಲವನ್ನು ವೆನೆಜುವೆಲಾ ದೇಶವು ಅಮೆರಿಕಕ್ಕೆ ಹಸ್ತಾಂತರಿಸಲಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ವೆನೆಜುವೆಲಾ ರಫ್ತಿನ ಮೇಲೆ ವಾಷಿಂಗ್ಟನ್ ವಿಧಿಸಿರುವ ನಿರ್ಬಂಧದಿಂದಾಗಿ ಸಂಗ್ರಹದಲ್ಲಿರುವ ತೈಲವನ್ನು ಮಾರುಕಟ್ಟೆ ಬೆಲೆಗೆ ಮಾರಾಟ ಮಾಡಲಾಗುವುದು ಮತ್ತು ಅದರಿಂದ ಬರುವ ಆದಾಯವನ್ನು ನಿಯಂತ್ರಿಸಿ, ಆ ಹಣವನ್ನು ವೆನೆಜುವೆಲಾ ಮತ್ತು ಅಮೆರಿಕದ ಜನರಿಗೆ ಪ್ರಯೋಜನವಾಗುವಂತೆ ಬಳಸಲಾಗುವುದು ಎಂದು ಟ್ರಂಪ್ ಘೋಷಿಸಿದ್ದಾರೆ.

Advertisement

ಅಲ್ಲದೆ, ಈ ಯೋಜನೆಯನ್ನು ತಕ್ಷಣ ಕಾರ್ಯಗತಗೊಳಿಸಲು ತಮ್ಮ ಇಂಧನ ಕಾರ್ಯದರ್ಶಿ ಕ್ರಿಸ್ ರೈಟ್ ಅವರಿಗೆ ನಿರ್ದೇಶನ ನೀಡಿದ್ದೇನೆ ಎಂದೂ ತೀಳಿಸಿದ್ದಾರೆ. “ತೈಲವನ್ನು ಸಂಗ್ರಹಣಾ ಹಡಗುಗಳ ಮೂಲಕ ತೆಗೆದುಕೊಂಡು ಹೋಗಿ, ನೇರವಾಗಿ ಯುನೈಟೆಡ್ ಸ್ಟೇಟ್ಸ್‌ನ ಅನ್‌ಲೋಡಿಂಗ್ ಡಾಕ್‌ಗಳಿಗೆ ತರಲಾಗುವುದು” ಎಂದು ಟ್ರಂಪ್ ತಮ್ಮ ಟ್ರೂತ್ ಸೋಶಿಯಲ್‌ನಲ್ಲಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಕಂ ಗೆಟ್‌ ಮಿ: ಟ್ರಂಪ್‌ಗೆ ಸವಾಲು ಹಾಕಿದ್ದೇ ವೆನೆಜುವೆಲಾದ ಅಧ್ಯಕ್ಷರಿಗೆ ಮುಳುವಾಯ್ತ?

ಟ್ರಂಪ್ ಆಡಳಿತವು ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಅಮೆರಿಕ ಸೇನೆ ಏರ್‌ಸ್ಟ್ರೈಕ್‌ ಮೂಲಕ ಬಂಧಿಸಿ ತನ್ನ ದೇಶಕ್ಕೆ ಕರೆದೊಯ್ದಿದ್ದಾರೆ. ಇದೀಗ ಲ್ಯಾಟಿನ್ ಅಮೇರಿಕನ್ ದೇಶದ ಕುಸಿಯುತ್ತಿರುವ ಇಂಧನ ಉದ್ಯಮವನ್ನು ಪುನರುಜ್ಜೀವನಗೊಳಿಸುವ ಪ್ರತಿಜ್ಞೆಯ ನಂತರ ಅವರ ಈ ಘೋಷಣೆ ಹೊರಬಿದ್ದಿದೆ.

ವೆನೆಜುವೆಲಾದ ಶಿಥಿಲಗೊಂಡ ಮೂಲಸೌಕರ್ಯವನ್ನು ಪುನರ್ನಿರ್ಮಿಸಲು ಮತ್ತು ಅದರ ತೈಲ ನಿಕ್ಷೇಪಗಳನ್ನು ಬಳಸಿಕೊಳ್ಳಲು ಅಮೆರಿಕದ ತೈಲ ಕಂಪನಿಗಳು ಶತಕೋಟಿ ಡಾಲರ್‌ಗಳನ್ನು ಹೂಡಿಕೆ ಮಾಡಲು ಸಿದ್ಧವಾಗಿವೆ ಎಂದು ಟ್ರಂಪ್ ಹೇಳಿದ್ದಾರೆ.

ಇದನ್ನೂ ಓದಿ: ಮಧ್ಯರಾತ್ರಿ ಏರ್‌ಸ್ಟ್ರೈಕ್! ಬೆಡ್‌ರೂಂಗೆ ನುಗ್ಗಿ ವೆನೆಜುವೆಲಾ ಅಧ್ಯಕ್ಷರನ್ನು ಬಂಧಿಸಿದ ಅಮೆರಿಕ ಸೇನೆ

ಅಮೆರಿಕದ ಮೂರು ದೊಡ್ಡ ತೈಲ ಕಂಪನಿಗಳಾದ ಚೆರ್ವೊನ್, ಎಕ್ಸಾನ್ ಮೊಬಿಲ್ ಮತ್ತು ಕೊನೊಕೊಫಿಲಿಪ್ಸ್ ಟ್ರಂಪ್ ಅವರ ಯೋಜನೆಗಳ ಬಗ್ಗೆ ನೇರವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಈ ಸಂಸ್ಥೆಗಳ ಪ್ರತಿನಿಧಿಗಳು ಶುಕ್ರವಾರ ಅಧ್ಯಕ್ಷರನ್ನು ಭೇಟಿ ಮಾಡಿ ವೆನೆಜುವೆಲಾ ಬಗ್ಗೆ ಚರ್ಚಿಸಲಿದ್ದಾರೆ ಎಂದು ಅಮೆರಿಕದ ಮಾಧ್ಯಮ ವರದಿಗಳು ತಿಳಿಸಿವೆ.

ಹೆಚ್ಚಿನ ವಿವರಗಳಿಲ್ಲದೆ ಟ್ರಂಪ್ ಅವರ ಘೋಷಣೆಯ ಮಹತ್ವವನ್ನು ವಿಶ್ಲೇಷಿಸುವುದು ಕಷ್ಟ ಎಂದು ಟೆಕ್ಸಾಸ್‌ನ ಹೂಸ್ಟನ್‌ನಲ್ಲಿರುವ ಬೇಕರ್ ಸಂಸ್ಥೆಯ ಇಂಧನ ತಜ್ಞ ಮಾರ್ಕ್ ಫಿನ್ಲೆ ಹೇಳಿದ್ದಾರೆ. ತೈಲ ಆದಾಯವನ್ನು ನಿಯಂತ್ರಿಸುವ ಬಗ್ಗೆ ಟ್ರಂಪ್ ಅವರ ಹೇಳಿಕೆಗಳು ಅವರ ಆಡಳಿತದ ಯೋಜನೆಗಳ ಸುತ್ತಲಿನ ಅನಿಶ್ಚಿತತೆಯನ್ನು ಹೆಚ್ಚಿಸಿವೆ ಎಂದು ವಾಷಿಂಗ್ಟನ್ ವಿಶ್ವವಿದ್ಯಾಲಯದ ಜಾಗತಿಕ ಇಂಧನ ವಲಯದ ತಜ್ಞ ಸ್ಕಾಟ್ ಮಾಂಟ್ಗೊಮೆರಿ ಹೇಳಿದ್ದಾರೆ.

ವಿದೇಶದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು