ಇರಾನ್‌ನ ಪರಮೋಚ್ಚ ನಾಯಕ ಅಲಿ ಖಮೇನಿ ಫಿನಿಶ್: ಡೊನಾಲ್ಡ್ ಟ್ರಂಪ್ ಮಹತ್ವದ ಹೇಳಿಕೆ!

ವಾಷಿಂಗ್ಟನ್/ಟೆಹ್ರಾನ್: ಇಸ್ರೇಲ್ ಮತ್ತು ಅಮೆರಿಕದ ಜಂಟಿ ವಾಯುದಾಳಿಯ ಬೆನ್ನಲ್ಲೇ, ಡೊನಾಲ್ಡ್ ಟ್ರಂಪ್ ಅವರು ಇರಾನ್ ಬಗ್ಗೆ ಅತ್ಯಂತ ದೊಡ್ಡ ಹೇಳಿಕೆಯನ್ನು ನೀಡಿದ್ದಾರೆ. ಇರಾನ್‌ನ ಪರಮೋಚ್ಚ ನಾಯಕ ಅಲಿ ಖಮೇನಿ ಅವರು ಇಸ್ರೇಲ್‌ನ ನಿಖರ ದಾಳಿಯಲ್ಲಿ ಹತರಾಗಿದ್ದಾರೆ ಮತ್ತು ಇರಾನ್‌ನ ಮಿಲಿಟರಿ ಶಕ್ತಿ ಈಗ ಸಂಪೂರ್ಣವಾಗಿ ಕುಸಿದಿದೆ ಎಂದು ಟ್ರಂಪ್ ಪ್ರತಿಪಾದಿಸಿದ್ದಾರೆ.”ನನಗೆ ಸಿಕ್ಕಿರುವ ವಿಶ್ವಾಸಾರ್ಹ ಮಾಹಿತಿಯ ಪ್ರಕಾರ, ಅಯತೊಲ್ಲಾ ಅಲಿ ಖಮೇನಿ ಅವರು ಈಗ ಜೀವಂತವಾಗಿಲ್ಲ. ಇಸ್ರೇಲ್‌ನ ಕ್ಷಿಪಣಿಗಳು ಅವರ ರಹಸ್ಯ ತಾಣವನ್ನು ಧ್ವಂಸಗೊಳಿಸಿವೆ” ಎಂದು ಟ್ರಂಪ್ ಹೇಳಿದ್ದಾರೆ.

ರಕ್ಷಣಾ ಸಚಿವ ಅಮೀರ್ ನಾಸಿರ್ಜಾದೆ ಮತ್ತು ಐಆರ್‌ಜಿಸಿ ಕಮಾಂಡರ್ ಪಾಕ್‌ಪೋರ್ ಸೇರಿದಂತೆ ಇರಾನ್‌ನ ಟಾಪ್-5 ಮಿಲಿಟರಿ ಅಧಿಕಾರಿಗಳು ಈಗ ಇತಿಹಾಸವಾಗಿದ್ದಾರೆ. ಇರಾನ್‌ನ ನಾಯಕತ್ವ ಈಗ ‘ತಲೆ ಇಲ್ಲದ ದೇಹ’ದಂತಾಗಿದೆ ಎಂದು ಅವರು ವ್ಯಂಗ್ಯವಾಡಿದ್ದಾರೆ. “ಇನ್ನೂ ಸಮಯವಿದೆ, ಇರಾನ್ ತನ್ನ ಹಠಮಾರಿತನ ಬಿಟ್ಟು ಶರಣಾಗಬೇಕು. ಇಲ್ಲದಿದ್ದರೆ ಆ ದೇಶದ ನಕ್ಷೆಯೇ ಬದಲಾಗಲಿದೆ” ಎಂದು ಟ್ರಂಪ್ ಎಚ್ಚರಿಸಿದ್ದಾರೆ.

ಇದನ್ನೂ ಓದಿ: ದುಬೈ ಮೇಲೆ ಇರಾನ್ ಕ್ಷಿಪಣಿ ದಾಳಿ – ಭಾರಿ ಸ್ಫೋಟದ ಬಗ್ಗೆ ವಿಡಿಯೋ ಹಂಚಿಕೊಂಡ ದುಬೈನಲ್ಲಿ ನೆಲೆಸಿರುವ ಬಂಟ್ವಾಳದ ನಿವಾಸಿ

ಒಂದೆಡೆ ಟ್ರಂಪ್ ಮತ್ತು ಇಸ್ರೇಲ್ ಮಾಧ್ಯಮಗಳು ಈ ರೀತಿಯ ವರದಿಗಳನ್ನು ನೀಡುತ್ತಿದ್ದರೆ, ಮತ್ತೊಂದೆಡೆ ಇರಾನ್ ಸರ್ಕಾರವು ಇದನ್ನು ‘ಸೈಕಲಾಜಿಕಲ್ ವಾರ್‌’ (ಮಾನಸಿಕ ಯುದ್ಧ) ಎಂದು ಕರೆದಿದೆ. ಆದರೆ, ಖಮೇನಿ ಅವರ ಯಾವುದೇ ಹೊಸ ವಿಡಿಯೋ ಅಥವಾ ಫೋಟೋ ಬಿಡುಗಡೆಯಾಗದಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

40 ದಿನಗಳ ಶೋಕಾಚರಣೆ, 10 ದಿನ ಸರ್ಕಾರಿ ರಜೆ

ಖಮೇನಿ ಅವರ ಗೌರವಾರ್ಥವಾಗಿ ಇರಾನ್‌ನಲ್ಲಿ ಇಂದಿನಿಂದ (ಮಾರ್ಚ್ 1, 2026) 40 ದಿನಗಳ ಕಾಲ ರಾಷ್ಟ್ರೀಯ ಶೋಕಾಚರಣೆ (National Mourning) ಘೋಷಿಸಲಾಗಿದೆ. ಇಡೀ ದೇಶಾದ್ಯಂತ 10 ದಿನಗಳ ಕಾಲ ಸಂಪೂರ್ಣ ಸರ್ಕಾರಿ ರಜೆ ಘೋಷಿಸಲಾಗಿದ್ದು, ಎಲ್ಲಾ ಕಚೇರಿಗಳು ಮತ್ತು ಶಿಕ್ಷಣ ಸಂಸ್ಥೆಗಳು ಮುಚ್ಚಲ್ಪಟ್ಟಿವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, “ಒಬ್ಬ ಕ್ರೂರಿ ಅಂತ್ಯವಾಗಿದ್ದಾನೆ, ಇದು ಇರಾನ್ ಜನರಿಗೆ ಸಿಕ್ಕ ದೊಡ್ಡ ವಿಮೋಚನೆ” ಎಂದು ಬಣ್ಣಿಸಿದ್ದಾರೆ.

ವಿದೇಶ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು