ಒಬ್ಬಳೇ ವಧು, ಇಬ್ಬರು ವರರು! ಒಬ್ಬಳಿಗಾಗಿ ಎರಡು ರಾಜ್ಯದ ವ್ಯಕ್ತಿಗಳ ನಡುವೆ ಬಿಗ್ ಫೈಟ್

ಜೈಪುರ: ರಾಜಸ್ಥಾನದ ವ್ಯಕ್ತಿಯೊಬ್ಬರು ಮತ್ತು ಕಾಶ್ಮೀರದ ವ್ಯಕ್ತಿಯೊಬ್ಬರು ಒಂದೇ ಮಹಿಳೆಯನ್ನು ತಮ್ಮ ಧರ್ಮಪತ್ನಿ ಎಂದು ಹಕ್ಕು ಸಾಧಿಸುತ್ತಿದ್ದು, ಈ ವಿಲಕ್ಷಣ ಪ್ರಕರಣ ಈಗ ಎರಡು ರಾಜ್ಯಗಳ ಹೈಕೋರ್ಟ್‌ಗಳ ನಡುವೆ ಕಾನೂನು ಹೋರಾಟಕ್ಕೆ ಕಾರಣವಾಗಿದೆ. ಅನಂತನಾಗ್ ಮೂಲದ ಶಕೀಲಾ ಎಂಬಾಕೆಯೇ ಈ ವಿವಾದದ ಕೇಂದ್ರಬಿಂದು. ರಾಜಸ್ಥಾನದ ಡಿಡ್ವಾನಾ ನಿವಾಸಿಯಾದ ಜಿತೇಂದ್ರ ಸಿಂಗ್, ತಾನು ಶಕೀಲಾಳನ್ನು ಪಂಜಾಬ್‌ನ ಫಿರೋಜ್‌ಪುರದಲ್ಲಿ ಕೆಲಸ ಮಾಡುತ್ತಿದ್ದಾಗ ಭೇಟಿಯಾಗಿ, ಫೆಬ್ರವರಿ 16, 2025 ರಂದು ಕಾನೂನುಬದ್ಧವಾಗಿ ವಿವಾಹವಾಗಿದ್ದಾಗಿ ರಾಜಸ್ಥಾನ ಹೈಕೋರ್ಟ್‌ನ ಜೋಧ್‌ಪುರ ಪೀಠಕ್ಕೆ ಮನವಿ ಸಲ್ಲಿಸಿದ್ದಾರೆ.

ಮದುವೆಯ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿರುವ ಅವರು, ಶಕೀಲಾಳ ಕುಟುಂಬದವರು ಆಕೆಯನ್ನು ಬಲವಂತವಾಗಿ ಕರೆದೊಯ್ದಿದ್ದಾರೆ ಮತ್ತು ಆಕೆಯ ಫೋನ್ ಸ್ವಿಚ್ ಆಫ್ ಆಗಿದೆ ಎಂದು ದೂರಿದ್ದಾರೆ.ಇತ್ತ ಕಾಶ್ಮೀರದ ಶಬ್ಬೀರ್ ಅಹ್ಮದ್ ಖಾನ್ ಅವರು ಶ್ರೀನಗರ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದು, ಶಕೀಲಾ ತನ್ನ ಪತ್ನಿ ಎಂದು ಹಕ್ಕು ಸಾಧಿಸಿದ್ದಾರೆ.

Advertisement

ಇದನ್ನೂ ಓದಿ: ಬೆಂಗಳೂರು: ರಿಯಲ್ ಎಸ್ಟೇಟ್ ಏಜೆಂಟ್ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಮೃತನ ಸಂಬಂಧಿಯೇ ಹಂತಕ!

ಅವರು ಜೂನ್ 12, 2024 ರಂದು ನಡೆದಿದೆ ಎನ್ನಲಾದ ಮದುವೆಯ ‘ನಿಕಾನಾಮಾ’ (Nikahnama) ದಾಖಲೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.ಶಕೀಲಾ ಕುಟುಂಬದಿಂದ ಆಕೆಗೆ ಜೀವ ಬೆದರಿಕೆ ಇದೆ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.ಜಿತೇಂದ್ರ ಸಿಂಗ್ ಅರ್ಜಿಯ ಮೇರೆಗೆ ತನಿಖೆಗೆ ಆದೇಶಿಸಿದ್ದು, ಸಿಆರ್‌ಪಿಎಫ್ ಮತ್ತು ಪೊಲೀಸರ ತಂಡ ಕಾಶ್ಮೀರದಲ್ಲಿ ಶಕೀಲಾಳನ್ನು ಹುಡುಕಿದರೂ ಆಕೆ ಪತ್ತೆಯಾಗಿಲ್ಲ. ಈ ಪ್ರಕರಣದ ವಿಚಾರಣೆ ಇಂದು (ಮಾರ್ಚ್ 10) ನಡೆಯಲಿದೆ.

ಶಬ್ಬೀರ್ ಖಾನ್ ಅರ್ಜಿಯನ್ನು ಗಂಭೀರವಾಗಿ ಪರಿಗಣಿಸಿರುವ ನ್ಯಾಯಾಲಯ, ಶಕೀಲಾಳ ಸುರಕ್ಷತೆಗೆ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದೆ. ಈ ಪ್ರಕರಣದ ವಿಚಾರಣೆ ಮಾರ್ಚ್ 13 ರಂದು ನಡೆಯಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

 

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು