ದೆಹಲಿ: ಟಿ-20 ವಿಶ್ವಕಪ್‌ನ ಗ್ರೂಪ್ ‘ಡಿ’ ಪಂದ್ಯಾಟದಲ್ಲಿ ಕೆನಡಾ ತಂಡ ಯುಎಇ ತಂಡದ ವಿರುದ್ಧ ನಿರಾಯಾಸದ ಗೆಲುವು ಸಾಧಿಸಿತು.
ಟಾಸ್ ಗೆದ್ದ ಕೆನಡಾ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 150 ರನ್ ಗಳಿಸಿತು. ತಂಡದ ಪರ ಹರ್ಷ್ ತಾಕೆರ್ 50, ನವನೀತ್ ಧಲಿವಾಲ್ 34, ಶ್ರೇಯಸ್ ಮೊವ್ವ 21 ರನ್ ಗಳಿಸಿದರು.

ಇದನ್ನೂ ಓದಿ: ರಾಜಸ್ಥಾನ: ವಿಧಾನಸಭೆ ಕಲಾಪದ ವೇಳೆ ಅಸಭ್ಯ ಸನ್ನೆ ಮಾಡಿದ ಕಾಂಗ್ರೆಸ್ ಶಾಸಕ ರೋಹಿತ್ ಬೊಹ್ರಾ
ಯುಎಇ ಪರ ಮಾರಕ ದಾಳಿ ಸಂಘಟಿಸಿದ ಜುನೈದ್ ಸಿದ್ದಿಕಿ 5 ವಿಕೆಟ್ ಪಡೆದರೆ ಮುಹಮ್ಮದ್ ಜವಾದುಲ್ಲ ಒಂದು ವಿಕೆಟ್ ಉರುಳಿಸಿದರು.

ಗುರಿ ಬೆನ್ನತ್ತಿದ ಯುಎಇ ತಂಡ ಪರ ಆರಂಭಿಕ ಆಟಗಾರ ಆರ್ಯಾನ್ಶ್ ಶರ್ಮ ಅಜೇಯ 74, ಶೋಯಬ್ ಖಾನ್ 51 ರನ್ ಸಹಾಯದಿಂದ 19.4 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಕೆನಡ ಪರ ಸಾದ್ ಬಿನ್ ಜಾಫರ್ 3, ಕಲೀಮ್ ಸನಾ ಮತ್ತು ಜಸ್ಕರನ್ ಸಿಂಗ್ ತಲಾ ಒಂದು ವಿಕೆಟ್ ಪಡೆದರು.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

