ಉಜ್ಜಯಿನಿ : ಉಜ್ಜಯಿನಿ ರೈಲ್ವೇ ನಿಲ್ದಾಣದ ಟಿಕೆಟ್ ಕೌಂಟರ್‌ನಲ್ಲಿ ಪ್ರಯಾಣಿಕರೊಬ್ಬರು 200 ರೂಪಾಯಿ ನಗದು ನೀಡಿ ಟಿಕೆಟ್ ನೀಡುವಂತೆ ಕೇಳಿದಾಗ, ಅಲ್ಲಿದ್ದ ಮಹಿಳಾ ಟಿಕೆಟ್ ಕ್ಲರ್ಕ್ “ಆನ್‌ಲೈನ್‌ನಲ್ಲೇ ಟಿಕೆಟ್ ಬುಕ್ ಮಾಡಿಕೊಳ್ಳಿ… ಇಲ್ಲವಾದರೆ ಟಿಕೆಟ್ ಸಿಗುವುದಿಲ್ಲ” ಎಂದು ಗದರಿಸಿ, ಬೆದರಿಕೆ ಹಾಕಿರುವ ಘಟನೆ ಬೆಳಕಿಗೆ ಬಂದಿದೆ.
ನಗದು ನೀಡಿ ಟಿಕೆಟ್ ಪಡೆಯಲು ಬಂದ ಪ್ರಯಾಣಿಕನಿಗೆ ಸ್ಪಂದಿಸುವ ಬದಲು ಉಡಾಫೆಯಾಗಿ ಉತ್ತರಿಸಿ ಕೌಂಟರ್‌ನಿಂದ ಕಳುಹಿಸಲು ಯತ್ನಿಸಿದ ಸಿಬ್ಬಂದಿಯ ವೈಖರಿಗೆ ಸ್ಥಳದಲ್ಲಿದ್ದ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಲ್ಲಿದೆ ನೋಡಿ ವಿಡಿಯೋ:
ఉజ్జయిని రైల్వే స్టేషన్లో రూ.200 ఇచ్చి టికెట్ ఇవ్వమంటే.. ఆన్లైన్ చేయండి.. లేకపోతే లేదు అంటూ ప్రయాణికుడిని బెదిరించిన రైల్వే క్లర్క్.
అందరూ ఆన్లైన్ చేసేస్తే మేడమ్ గారి ఉద్యోగం ఎందుకు? ప్రజల పన్నులతో ఇచ్చే ఆ జీతం ఎందుకు? అంటూ ప్రశ్నిస్తున్న ప్రజలు. pic.twitter.com/ARhR6MUUqW
— greatandhra (@greatandhranews) August 10, 2026
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕರಿಂದ ತೀವ್ರ ಅಸಮಾಧಾನ ವ್ಯಕ್ತವಾಗಿದೆ. “ಎಲ್ಲರೂ ಮೊಬೈಲ್‌ನಲ್ಲೇ ಆನ್‌ಲೈನ್ ಟಿಕೆಟ್ ಕಾಯ್ದಿರಿಸುವುದಾದರೆ, ಟಿಕೆಟ್ ಕೌಂಟರ್‌ಗಳಲ್ಲಿ ಇಷ್ಟೊಂದು ಸಿಬ್ಬಂದಿ ಏಕೆ ಬೇಕು? ಅವರ ಸಂಬಳಕ್ಕೆ ಸಾರ್ವಜನಿಕರ ತೆರಿಗೆ ಹಣ ಏಕೆ ಪೋಲಾಗಬೇಕು?” ಎಂದು ಸಾರ್ವಜನಿಕರು ತೀವ್ರವಾಗಿ ಪ್ರಶ್ನಿಸುತ್ತಿದ್ದಾರೆ.
ಇದನ್ನೂ ಓದಿ: ಕಾಡಿನ ರಸ್ತೆಯಲ್ಲಿ ಆನೆಗೆ ನಿರಂತರ ಹಾರ್ನ್ ಹಾಕಿ ಮುನ್ನುಗ್ಗಿದ ಕಾರು ಚಾಲಕಿ: ಕೂದಲೆಳೆಯ ಅಂತರದಲ್ಲಿ ಭಾರಿ ದುರಂತ ಪಾರು
ಡಿಜಿಟಲ್ ತಂತ್ರಜ್ಞಾನ ಬಳಸಲು ಬಾರದ ವೃದ್ಧರು, ಗ್ರಾಮೀಣ ಭಾಗದ ಜನರು ಹಾಗೂ ತುರ್ತು ಸಂದರ್ಭದಲ್ಲಿ ಪ್ರಯಾಣಿಸುವ ಸಾಮಾನ್ಯ ಜನರಿಗೆ ನಗದು ನೀಡಿ ಕೌಂಟರ್‌ನಲ್ಲಿ ಟಿಕೆಟ್ ಪಡೆಯುವುದೇ ಏಕೈಕ ಮಾರ್ಗ. ಅಂತಹವರ ಮೇಲೆಯೇ ಸಿಬ್ಬಂದಿ ಹೀಗೆ ದೌರ್ಜನ್ಯ ಎಸಗಿದರೆ ಹೇಗೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಸಾರ್ವಜನಿಕ ಸೇವೆಯಲ್ಲಿದ್ದುಕೊಂಡು ಪ್ರಯಾಣಿಕರಿಗೆ ಧಮ್ಕಿ ಹಾಕಿದ ಸಂಬಂಧಪಟ್ಟ ರೈಲ್ವೇ ಮಹಿಳಾ ಸಿಬ್ಬಂದಿ ವಿರುದ್ಧ ಮೇಲಧಿಕಾರಿಗಳು ಕಟ್ಟುನಿಟ್ಟಿನ ಶಿಸ್ತುಕ್ರಮ ಜರುಗಿಸಬೇಕು ಎಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.
ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

