ಬೆಳ್ತಂಗಡಿ: ನಲ್ಕೂರು ಗ್ರಾಮದ ತೋಟದಲ್ಲಿ ಅಸ್ಥಿಪಂಜರ ಪತ್ತೆ

ಬೆಳ್ತಂಗಡಿ : ಬೆಳ್ತಂಗಡಿ ತಾಲೂಕಿನ ನಲ್ಕೂರು ಗ್ರಾಮದ ಪಾಡಿ ಎಂಬಲ್ಲಿ ಸೋಮವಾರ (ಸೆಪ್ಟೆಂಬರ್ 28) ಸಂಜೆ ಕೃಷಿ ತೋಟವೊಂದರಲ್ಲಿ ಗುರುತು ಪತ್ತೆಯಾಗದ ಮಾನವನ ಅಸ್ಥಿಪಂಜರ ಪತ್ತೆಯಾಗಿರುವುದು ಸ್ಥಳೀಯರಲ್ಲಿ ತೀವ್ರ ಕುತೂಹಲ ಹಾಗೂ ಆತಂಕಕ್ಕೆ ಕಾರಣವಾಗಿದೆ.

ನಲ್ಕೂರು ಗ್ರಾಮದ ಬಲಂಜ ಪಾಡಿ ನಿವಾಸಿ ವಿನೋದ್ ಎಂಬುವರಿಗೆ ಸೇರಿದ ಕೃಷಿ ಜಮೀನನ್ನು ಮಜ್ಜೇನಿಬೈಲು-ಪಾಡಿ ನಿವಾಸಿ ಸುರೇಶ್ ಎಂಬುವರು ನಿರ್ವಹಣೆ ಮಾಡುತ್ತಿದ್ದರು. ಸೋಮವಾರ ಸಂಜೆ ಜೆಸಿಬಿ/ಯಂತ್ರದ ಸಹಾಯದಿಂದ ಕೃಷಿ ಭೂಮಿಯಲ್ಲಿದ್ದ ಪೊದೆಗಳನ್ನು ಸ್ವಚ್ಛಗೊಳಿಸುತ್ತಿದ್ದಾಗ, ಹತ್ತಿರದಲ್ಲೇ ಹರಿಯುವ ತೊರೆಯ ದಂಡೆಯಲ್ಲಿ ಅಸ್ಥಿಪಂಜರ ಕಂಡುಬಂದಿದೆ. ಸ್ಥಳದಲ್ಲಿ ಮಾನವನ ತಲೆಬುರುಡೆ, ಮೂಳೆಗಳು ಹಾಗೂ ವ್ಯಕ್ತಿ ಧರಿಸಿದ್ದ ಬಟ್ಟೆಗಳು ಪತ್ತೆಯಾಗಿವೆ. ತಕ್ಷಣವೇ ಜಮೀನು ನಿರ್ವಾಹಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: “ಮತ್ತೆ ಹುಟ್ಟಿ ಬಂದರೆ ನನ್ನ ಕೊಟ್ಟಿಗೆಯಲ್ಲೇ ಹುಟ್ಟು ಮಗನೇ…”: ಕಂಬಳದ ಕೋಣ ‘ಪಾಂಡು’ ಅಗಲಿಕೆಗೆ ಕಣ್ಣೀರಿಟ್ಟ ಶ್ರೀಕಾಂತ್ ಭಟ್ರು
ವಿಷಯ ತಿಳಿಯುತ್ತಿದ್ದಂತೆ ವೇಣೂರು ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಎಫ್‌ಎಸ್‌ಎಲ್ (SOCO – Scene of Crime Officers) ತಜ್ಞರ ತಂಡ ಘಟನಾ ಸ್ಥಳಕ್ಕೆ ದೌಡಾಯಿಸಿ, ಸೂಕ್ಷ್ಮವಾಗಿ ಪರಿಶೀಲನೆ ನಡೆಸಿದೆ. ಪತ್ತೆಯಾದ ಅಸ್ಥಿಪಂಜರ ಹಾಗೂ ಬಟ್ಟೆಯ ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಡಿಎನ್‌ಎ (DNA) ಪರೀಕ್ಷೆಗೆ ಕಳುಹಿಸಲು ಕ್ರಮ ಕೈಗೊಳ್ಳಲಾಗಿದೆ. ಮೃತ ವ್ಯಕ್ತಿ ಯಾರು? ಇದು ಕೊಲೆಯೋ ಅಥವಾ ಆಕಸ್ಮಿಕ ಸಾವೋ ಎಂಬ ಬಗ್ಗೆ ವೇಣೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *