Breaking News

ಅಮೆರಿಕ EB-1 ಗ್ರೀನ್ ಕಾರ್ಡ್ ಆಕಾಂಕ್ಷಿ ಭಾರತೀಯರಿಗೆ ತೀವ್ರ ಹಿನ್ನಡೆ: ಲಭ್ಯತೆ ಸ್ಥಗಿತಗೊಳ್ಳುವ ಭೀತಿ

ವಾಷಿಂಗ್ಟನ್: ಅಮೆರಿಕದಲ್ಲಿ ಉದ್ಯೋಗ ಆಧಾರಿತ ಮೊದಲ ಆದ್ಯತೆಯ ‘EB-1’ ಗ್ರೀನ್ ಕಾರ್ಡ್‌ಗಳಿಗೆ (US Green Cards) ಭಾರತೀಯ ವೃತ್ತಿಪರರಿಂದ ಅಭೂತಪೂರ್ವ ಬೇಡಿಕೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ, ಪ್ರಸಕ್ತ ಆರ್ಥಿಕ ವರ್ಷಾಂತ್ಯವಾದ ಸೆಪ್ಟೆಂಬರ್ ೩೦ರ ವೇಳೆಗೆ ಈ ಕೆಟಗರಿಯ ಗ್ರೀನ್ ಕಾರ್ಡ್ ಲಭ್ಯತೆ ತಾತ್ಕಾಲಿಕವಾಗಿ ಸಂಪೂರ್ಣವಾಗಿ ಸ್ಥಗಿತಗೊಳ್ಳುವ (Unavailable) ಸಾಧ್ಯತೆಯಿದೆ ಎಂದು ಅಮೆರಿಕ ವಿದೇಶಾಂಗ ಇಲಾಖೆ ಎಚ್ಚರಿಸಿದೆ.

ಅಸಾಧಾರಣ ಪ್ರತಿಭೆ ಹೊಂದಿರುವವರು, ಅತ್ಯುತ್ತಮ ಪ್ರಾಧ್ಯಾಪಕರು, ಸಂಶೋಧಕರು ಹಾಗೂ ಬಹುರಾಷ್ಟ್ರೀಯ ಸಂಸ್ಥೆಗಳ ಉನ್ನತ ಅಧಿಕಾರಿಗಳಿಗೆ ನೀಡಲಾಗುವ ಈ ‘ಇಬಿ-೧’ ವೀಸಾ ವಿಭಾಗದಲ್ಲೂ ಈಗ ಸರತಿ ಸಾಲು ಹೆಚ್ಚಾಗಿದ್ದು, ವರ್ಷಗಳಿಂದ ಕಾಯುತ್ತಿರುವ ಭಾರತೀಯ ಅರ್ಜಿದಾರರಿಗೆ ಇದು ಮತ್ತಷ್ಟು ಆತಂಕ ತಂದೊಡ್ಡಿದೆ.

ಅಮೆರಿಕ ವಿದೇಶಾಂಗ ಇಲಾಖೆ ಬಿಡುಗಡೆ ಮಾಡಿರುವ ‘ಸೆಪ್ಟೆಂಬರ್ ವೀಸಾ ಬುಲೆಟಿನ್’ ಪ್ರಕಾರ, ಭಾರತೀಯ ಕೋಟಾದಡಿ ನಿಗದಿಪಡಿಸಲಾದ ಇಬಿ-1 ವೀಸಾಗಳ ಸಂಖ್ಯೆ ಶೀಘ್ರದಲ್ಲೇ ಭರ್ತಿಯಾಗಲಿದೆ. ಹೀಗಾದಲ್ಲಿ ಮುಂಬರುವ ವಾರಗಳಲ್ಲಿ ಈ ಕೆಟಗರಿಯಲ್ಲಿ ಹೊಸ ವೀಸಾಗಳ ಲಭ್ಯತೆಯನ್ನು ರದ್ದುಗೊಳಿಸುವುದು ಅನಿವಾರ್ಯವಾಗಲಿದೆ.

ಇದನ್ನೂ ಓದಿ: ಗೌರಿ-ಗಣೇಶ ಹಬ್ಬಕ್ಕೆ ‘ಕೆಎಸ್‌ಆರ್‌ಟಿಸಿ’ ಬಿಗ್ ಆಫರ್: ಬೆಂಗಳೂರಿನಿಂದ 2,400 ಹೆಚ್ಚುವರಿ ವಿಶೇಷ ಬಸ್‌ಗಳ ಸಂಚಾರ

ಸೆಪ್ಟೆಂಬರ್ ತಿಂಗಳ ಬುಲೆಟಿನ್ ಪ್ರಕಾರ, ಭಾರತೀಯರ ಇಬಿ-೧ ‘ಫೈನಲ್ ಆಕ್ಷನ್ ಡೇಟ್’ ಅಕ್ಟೋಬರ್ ೧೫, ೨೦೨೨ ಎಂದು ನಿಗದಿಪಡಿಸಲಾಗಿದೆ. ಅಂದರೆ ಈ ದಿನಾಂಕಕ್ಕಿಂತ ಮೊದಲು ಆದ್ಯತೆ ದಿನಾಂಕ (Priority Date) ಹೊಂದಿರುವವರಿಗೆ ಮಾತ್ರ ಪ್ರಸ್ತುತ ಗ್ರೀನ್ ಕಾರ್ಡ್ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಅಮೆರಿಕದಲ್ಲಿ ಭಾರತೀಯರಿಗೆ ಲಭ್ಯವಾಗುವ ಬಹುತೇಕ ಉದ್ಯೋಗ ಆಧಾರಿತ ಗ್ರೀನ್ ಕಾರ್ಡ್ ಸಾಲುಗಳು ಈಗಾಗಲೇ ಅತ್ಯಂತ ಕಠಿಣ ಹಂತವನ್ನು ತಲುಪಿವೆ.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *