Breaking News

Viral Video : ಕ್ಯಾನ್ಸರ್ ಪೀಡಿತ ಸ್ನೇಹಿತೆಗಾಗಿ ತಲೆಗೂದಲು ಬೋಳಿಸಿದ ಸಹಪಾಠಿಗಳು ಮತ್ತು ಶಿಕ್ಷಕರು

ವೈರಲ್ ನ್ಯೂಸ್ : ನಾವು ಬೇರೆಯವರನ್ನು ಎಷ್ಟು ಪ್ರೀತಿಸುತ್ತೇವೆ ಅನ್ನೋದಕ್ಕಿಂದ ಅವರ ಸಂತೋಷಕ್ಕೆ ನಾವು ಎಷ್ಟು ಪಾಲುದಾರರಾಗುತ್ತೇವೋ ಅನ್ನೋದಿಕ್ಕೆ ಈ ಘಟನೆ ಸಾಕ್ಷಿಯಾಗಿದೆ. ರಾಜಸ್ಥಾನದ ಜೋದ್‌ಪುರದ ಶಾಲೆಯೊಂದರಲ್ಲಿ ನಡೆದ ಭಾವುಕ ಹಾಗೂ ಮಾನವೀಯ ಘಟನೆಯೊಂದು ಈಗ ಎಲ್ಲರ ಗಮನ ಸೆಳೆಯುತ್ತಿದೆ. ಇಂಟರ್‌ನೆಟ್‌ನಲ್ಲಿ ಈ ವಿಚಾರ ಭಾರೀ ವೈರಲ್ ಆಗ್ತಿದೆ.

ಹೌದು…. ! ಕ್ಯಾನ್ಸರ್ ಒಮ್ಮೆ ಮನುಷ್ಯನಿಗೆ ಆವರಿಸಿದ್ರೆ ಅದು ಹಂತ ಹಂತವಾಗಿ ಆತನನ್ನೇ ಮಾನಸಿಕವಾಗಿ‌ ಕುಗ್ಗಿಸುತ್ತಾ ಬರುತ್ತದೆ. ಹೀಗಿರುವಾಗ, ಇದರಲ್ಲಿ ಬರುವ ಕಿಮೋಥೆರಪಿ ಅತ್ಯಂತ ನೋವಿನಿಂದ ಕೂಡಿದ ಚಿಕಿತ್ಸೆ ಈ ಸಮಯದಲ್ಲಿ ಕ್ಸಾನ್ಸ‌ರ್ ಪೀಡಿತ ವ್ಯಕ್ತಿಯ ಕೂದಲು ಸಂಪೂರ್ಣವಾಗಿ ಉದುರುತ್ತದೆ. ದೇಹದ ಸ್ಥಿತಿ ಹಾಗೂ ಮನಸ್ಸು ತುಂಬಾ ನೋವಿರುತ್ತದೆ. ವ್ಯಕ್ತಿ ಖಿನ್ನತೆಗೆ ಜಾರುತ್ತಾನೆ. ಈ ಸಮಯದಲ್ಲಿ ಅವರ ಜತೆಗಿರುವವರು ಅವರನ್ನು ಹೇಗೆ ನೋಡುತ್ತಾರೆ ಎಂಬುದರ ಮೇಲೆ ಅವರ ಮನಸ್ಥಿತಿ ನಿರ್ಧಾರವಾಗಿರುತ್ತದೆ.

Advertisement

ವೀಡಿಯೋ ಇಲ್ಲಿದೆ :

ಇಲ್ಲೊಂದು ಕಡೆ ಶಾಲೆಗೆ ಹೋಗುವ ಪುಟ್ಟ ಬಾಲಕಿಯಲ್ಲಿ ಕ್ಯಾನ್ಸರ್ ಕಾಣಿಸಿಕೊಂಡಿದ್ದು, ಆಕೆ ಕಿಮೋಥೆರಪಿಗೆ ಒಳಗಾದ ನಂತರ ಆ ಪುಟ್ಟ ಬಾಲಕಿಯ ಕೂದಲೆಲ್ಲಾ ಉದುರಿ ಆಕೆ ಖಿನ್ನತೆಗೆ ಜಾರಿದ್ದಳು. ಶಾಲೆಗೆ ಹೋಗುವುದಕ್ಕೂ ಹಿಂಜರಿದಳು. ಆದರೆ ಆಕೆಯ ಈ ನೋವಿನ ಪಯಣದಲ್ಲಿ ಜತೆಯಾಗುವುದಕ್ಕೆ ಆಕೆಯ ತರಗತಿಯ ಮಕ್ಕಳ ಜತೆಗೆ ಆಕೆಯ ಶಿಕ್ಷಕರು ಕೂಡ ಸಿದ್ಧರಾದರು. ಆಕೆಗಾಗಿ ಎಲ್ಲರೂ ತಮ್ಮ ತಲೆಕೂದಲನ್ನು ಬೋಳಿಸಿಕೊಂಡಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವುದರ ಜತೆಗೆ ಆ ಬಾಲಕಿಯ ತರಗತಿಯ ಮಕ್ಕಳ ಕರುಣೆಗೆ ಶ್ಲಾಘನೆ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ : Ticket Rate : ಮಂಗಳೂರು-ಕಾಸರಗೋಡು ಬಸ್ ಟಿಕೆಟ್ ದರ ಹೆಚ್ಚಳ !

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್:‌ 7353833811, ಇ-ಮೇಲ್-‌ g1newsdpt@gmail.com

News Source : G1 News

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು