ಸೋಶಿಯಲ್ ಮೀಡಿಯಾದಲ್ಲಿ ಲೈಕ್ಸ್ ಮತ್ತು ರೀಲ್ಸ್‌ಗಳ ಹುಚ್ಚು ಎಷ್ಟರ ಮಟ್ಟಿಗೆ ತಲುಪಿದೆ ಎಂದರೆ, ಜನರು ತಮ್ಮ ಮಕ್ಕಳ ಪ್ರಾಣವನ್ನೇ ಪಣಕ್ಕಿಡಲು ಹಿಂಜರಿಯುತ್ತಿಲ್ಲ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ ಮಹಿಳೆಯೊಬ್ಬರು ತನ್ನ ಹಸುಗೂಸನ್ನು ಸ್ಕೂಟರ್‌ನ ಡಿಕ್ಕಿಯಲ್ಲಿ ಮಲಗಿಸಿ ಚಲಾಯಿಸುತ್ತಿರುವ ವಿಡಿಯೋ ಈಗ ವೈರಲ್ ಆಗಿದೆ.
ವೈರಲ್ ಆಗಿರುವ ದೃಶ್ಯದಲ್ಲಿ, ಮಹಿಳೆ ಸ್ಕೂಟರ್ ಚಲಾಯಿಸುತ್ತಿರುತ್ತಾರೆ. ಸೀಟ್ ಕೆಳಗಿನ ಸ್ಟೋರೇಜ್ ಬಾಕ್ಸ್ (Storage Box) ಅನ್ನು ತೆರೆದಿಡಲಾಗಿದ್ದು, ಅದರೊಳಗೆ ಒಂದು ಪುಟ್ಟ ಮಗುವನ್ನು ಮಲಗಿಸಲಾಗಿದೆ. ಮಗು ಯಾವುದೇ ಸುರಕ್ಷತೆಯಿಲ್ಲದೆ ಆ ಕಿರಿದಾದ ಜಾಗದಲ್ಲಿ ಮಲಗಿರುವುದನ್ನು ಕಂಡು ಸಾರ್ವಜನಿಕರು ಬೆಚ್ಚಿಬಿದ್ದಿದ್ದಾರೆ.ಸ್ಕೂಟರ್‌ನ ಸೀಟ್ ಕೆಳಗಿನ ಭಾಗವು ಎಂಜಿನ್‌ನ ಶಾಖದಿಂದ ಕೂಡಿರುತ್ತದೆ. ಅಷ್ಟು ಕಿರಿದಾದ ಮತ್ತು ಗಾಳಿ ಆಡದ ಜಾಗದಲ್ಲಿ ಮಗುವನ್ನು ಮಲಗಿಸುವುದು ಉಸಿರುಗಟ್ಟುವಿಕೆಗೆ ಕಾರಣವಾಗಬಹುದು.

ಇದನ್ನೂ ಓದಿ: ಒಬ್ಬಳೇ ವಧು, ಇಬ್ಬರು ವರರು! ಒಬ್ಬಳಿಗಾಗಿ ಎರಡು ರಾಜ್ಯದ ವ್ಯಕ್ತಿಗಳ ನಡುವೆ ಬಿಗ್ ಫೈಟ್
ವಿಡಿಯೋ ಇಲ್ಲಿದೆ ನೋಡಿ:
View this post on Instagram
ವಾಹನ ಚಲಿಸುವಾಗ ಸಣ್ಣದೊಂದು ಜಂಪ್ ಅಥವಾ ಬ್ರೇಕ್ ಹಾಕಿದರೂ ಮಗು ಡಿಕ್ಕಿಯಿಂದ ಹೊರಕ್ಕೆ ಎಸೆಯಲ್ಪಡುವ ಅಥವಾ ಗಂಭೀರವಾಗಿ ಗಾಯಗೊಳ್ಳುವ ಅಪಾಯವಿರುತ್ತದೆ.”ರೀಲ್ಸ್‌ಗಾಗಿ ಅಥವಾ ಫನ್ನಿ ವಿಡಿಯೋಗಾಗಿ ಮಗುವಿನ ಪ್ರಾಣದ ಜೊತೆ ಚೆಲ್ಲಾಟವಾಡುವುದು ಎಷ್ಟು ಸರಿ?” ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಇಂತಹ ಬೇಜವಾಬ್ದಾರಿ ತಾಯಂದಿರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತಿದ್ದಾರೆ.
ದೇಶದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

