ವಿಜಯವಾಡ: ಮೆಗಾ ಪವರ್ ಸ್ಟಾರ್ ರಾಮ್ ಚರಣ್ (Ram Charan) ಮತ್ತು ಬಾಲಿವುಡ್ ಬ್ಯೂಟಿ ಜಾನ್ವಿ ಕಪೂರ್ (Janhvi Kapoor) ಮುಖ್ಯ ಭೂಮಿಕೆಯಲ್ಲಿ ನಟಿಸಿರುವ, ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಚಿತ್ರ ‘ಪೆದ್ದಿ’ (Peddi) ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಈ ಕ್ರೀಡಾ ಆಧಾರಿತ ಆ್ಯಕ್ಷನ್ ಡ್ರಾಮಾ ಸಿನಿಮಾದ ಭರ್ಜರಿ ಪ್ರಚಾರಕ್ಕಾಗಿ ಚಿತ್ರತಂಡ ಸೋಮವಾರ (ಜೂನ್ 1) ಆಂಧ್ರಪ್ರದೇಶದ ವಿಜಯವಾಡದಲ್ಲಿ ಮೆಗಾ ಈವೆಂಟ್ ಒಂದನ್ನು ಆಯೋಜಿಸಿತ್ತು. ಆದರೆ, ಈ ಕಾರ್ಯಕ್ರಮದ ನಡುವೆ ನಡೆದ ಅನಿರೀಕ್ಷಿತ ಘಟನೆಯೊಂದು ಈಗ ಇಂಟರ್ನೆಟ್‌ನಲ್ಲಿ ಭಾರಿ ವೈರಲ್ ಆಗಿದೆ.
ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಸಾಗುತ್ತಿದ್ದಾಗ, ವೇದಿಕೆಯ ಮೇಲೆ ನಟ ರಾಮ್ ಚರಣ್, ನಟಿ ಜಾನ್ವಿ ಕಪೂರ್ ಮತ್ತು ನಿರ್ದೇಶಕ ಬುಚ್ಚಿ ಬಾಬು ಸನಾ ಉಪಸ್ಥಿತರಿದ್ದರು. ಈ ವೇಳೆ ಸಾರ್ವಜನಿಕರ ಗ್ಯಾಲರಿಯಲ್ಲಿದ್ದ ಅಭಿಮಾನಿಯೊಬ್ಬ, ಅಲ್ಲಿದ್ದ ಕಟ್ಟುನಿಟ್ಟಿನ ಭದ್ರತಾ ವಲಯವನ್ನುದಾಟಿ ಒಮ್ಮೆಗೆ ವೇದಿಕೆಯತ್ತ ನುಗ್ಗಿದ್ದಾನೆ. ವಿಶೇಷವೆಂದರೆ, ಈ ಅಭಿಮಾನಿ ನೋಡಲು ಮತ್ತು ಹೇರ್‌ಸ್ಟೈಲ್‌ನಲ್ಲಿ ಇಂಟರ್ನ್ಯಾಷನಲ್ ಸ್ಟಾರ್ ರಾಮ್ ಚರಣ್ ಅವರಂತೆಯೇ ಕಾಣಿಸುತ್ತಿದ್ದ. ಆತ ನೇರವಾಗಿ ನಟನ ಬಳಿಗೆ ಓಡಿ ಬಂದಿದ್ದಾನೆ.
ಇಲ್ಲಿದೆ ನೋಡಿ ವಿಡಿಯೋ
Kevin…🥵🥵#Peddi #PeddiOnJune4th pic.twitter.com/J6uXkfbj54
— Vinnu (@Vinnu_Tweettz) June 2, 2026
ಅಭಿಮಾನಿ ವೇದಿಕೆಗೆ ಅತಿ ವೇಗವಾಗಿ ನುಗ್ಗಿದ ರಭಸಕ್ಕೆ, ರಾಮ್ ಚರಣ್ ಪಕ್ಕದಲ್ಲೇ ಕುಳಿತಿದ್ದ ನಟಿ ಜಾನ್ವಿ ಕಪೂರ್ ಒಂದು ಕ್ಷಣ ತೀವ್ರವಾಗಿ ಬೆಚ್ಚಿಬಿದ್ದಿದ್ದಾರೆ. ಹಠಾತ್ ಬೆಳವಣಿಗೆಯಿಂದ ಅವರ ಮುಖದಲ್ಲಿ ಅಸಹಜತೆ ಮತ್ತು ಭಯ ಎದ್ದು ಕಾಣುತ್ತಿತ್ತು. ಈ ಘಟನೆಯಿಂದಾಗಿ ಇಡೀ ಸಭಾಂಗಣದಲ್ಲಿ ಕೆಲಕಾಲ ಗೊಂದಲ ಮತ್ತು ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಇದನ್ನೂ ಓದಿ: ಒಂದು ಕಾಲದ ಸ್ಟಾರ್ ನಟಿ ಇಂದು ಬೀದಿಪಾಲು!; ಮುಂಬೈ ರಸ್ತೆಯಲ್ಲಿ ಭಿಕ್ಷೆ ಬೇಡುತ್ತಾ ಸಿಕ್ಕಿಬಿದ್ದ ಮಿತಾಲಿ ಶರ್ಮ
ಪರಿಸ್ಥಿತಿ ಕೈಮೀರುವ ಮುನ್ನವೇ ತಕ್ಷಣವೇ ಕಾರ್ಯಪ್ರವೃತ್ತರಾದ ಭದ್ರತಾ ಸಿಬ್ಬಂದಿ ಹಾಗೂ ರಾಮ್ ಚರಣ್ ಅವರ ವೈಯಕ್ತಿಕ ಬಾಡಿಗಾರ್ಡ್, ಅಂತರಾಷ್ಟ್ರೀಯ ಎಂಎಂಎ ಫೈಟರ್ (MMA Fighter) ಆಗಿರುವ ಕೆವಿನ್ ಕುಂಟ (Kevin Kunda), ಆ ಅಭಿಮಾನಿಯನ್ನು ಕ್ಷಣಾರ್ಧದಲ್ಲಿ ಹಿಡಿದು ವೇದಿಕೆಯಿಂದ ಹಿಂದಕ್ಕೆ ಎಳೆದಿದ್ದಾರೆ. ಕೆವಿನ್ ಅವರ ಈ ಸಮಯಪ್ರಜ್ಞೆ ಮತ್ತು ಬಲಿಷ್ಠ ಸಾಹಸಕ್ಕೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಪ್ರಶಂಸೆ ವ್ಯಕ್ತವಾಗುತ್ತಿದ್ದು, ಈ ಇಡೀ ಹೈಡ್ರಾಮಾದ ವೀಡಿಯೊ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡಿಂಗ್‌ನಲ್ಲಿದೆ.
ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


