ಕೋಲ್ಕತ್ತಾ: ಟಿ-20 ವಿಶ್ವಕಪ್ನ ‘ಸಿ’ ಗುಂಪಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ ಇಟಲಿ ತಂಡದ ವಿರುದ್ಧ 42 ರನ್ಗಳ ಜಯ ಗಳಿಸಿದೆ.
ಇಲ್ಲಿನ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಇಟಲಿ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ 6 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿತು. ಶೈ ಹೋಪ್ 46 ಎಸೆತಗಳಲ್ಲಿ 75 ರನ್ ಗಳಿಸಿದರು. ರೋಸ್ಟನ್ ಚೇಸ್ ಮತ್ತು ಶರ್ಫೇನ್ ರುಥರ್ಫೋರ್ಡ್ ತಲಾ 24 ರನ್ ಗಳಿಸಿದರು. ಮ್ಯಾಥ್ಯು ಫೋರ್ಡ್ 16 ರನ್ ಗಳಿಸಿದರು.

ಇದನ್ನೂ ಓದಿ: ಕಲ್ಲಡ್ಕ ಶ್ರೀರಾಮ ಶಾಲೆಯಲ್ಲಿ ತುಳುನಾಡಿನ ಸಾಂಪ್ರದಾಯಿಕ ‘ಕೆಡ್ಡಸ’ ಹಬ್ಬದ ಸಂಭ್ರಮ
ಇಟಲಿ ಪರ ಬೆನ್ ಮನೆಟಿ ಮತ್ತು ಕ್ರಿಶನ್ ಕಲುಗಮಗೆ ತಲಾ 2 ವಿಕೆಟ್, ಅಲಿ ಹಸನ್, ಥೋಮಸ್ ಡ್ರಾಕಾ ಒಂದು ವಿಕೆಟ್ ಪಡೆದರು.
ಗುರಿ ಬೆನ್ನತ್ತಿದ ಇಟಲಿ ಪರ ಬೆನ್ ಮೆನಟಿ 26, ಜೆಜೆ ಸ್ಮಟ್ಸ್ 24 ಮತ್ತು ಅಂತೋಣಿ ಮೋಸ್ಕ 19 ರನ್ ಗಳಿಸಿದರು. ವೆಸ್ಟ್ ಇಂಡೀಸ್ ಪರ ಶಮರ್ ಜೋಸಫ್ 4, ಮ್ಯಾಥ್ಯು ಫೋರ್ಡ್ 3, ಗುದಕೇಶ್ ಮೋತಿ 2, ಅಕೀಲ್ ಹೊಸೇನ್ ಒಂದು ವಿಕೆಟ್ ಪಡೆದರು.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

